ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಗೆ ಮತ್ತೆ ಜೀವ ಬಂದಿದೆ. ಕಳೆದ ವರ್ಷ ಮೀಸಲಾತಿ ವಿಚಾರ ಸಿಎಂ ಯಡಿಯೂರಪ್ಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ವರದಿ ನೆಪ ಮುಂದಿಟ್ಟುಕೊಂಡು ಸರ್ಕಾರ ಹೇಗೂ ಒಂದು ವರ್ಷ ಮುಂದಕ್ಕೆ ತಳ್ಳಿದೆ. ಆದರೆ, ಈಗ ಮತ್ತೆ ಮೀಸಲಾತಿ ವಿವಾದ ಸರ್ಕಾರಕ್ಕೆ ಬಿಸಿ ತುಪ್ಪವಾಗುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಮೀಸಲಾತಿ ನೀಡಿದರೆ ಅಭಿನಂದನೆ ಸಲ್ಲಿಸುತ್ತೇವೆ, ಇಲ್ಲವಾದರೆ ಪಾಠ ಕಲಿಸಬೇಕಾಗುತ್ತದೆ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ಶ್ರೀರಾಮನ ಹೆಸರಿನಲ್ಲಿ. ಶ್ರೀರಾಮಾಯಣದ ಕರ್ತೃ ವಾಲ್ಮೀಕಿ. ಹೀಗಾಗಿ ವಾಲ್ಮೀಕಿ ಸಮುದಾಯದ ಬೇಡಿಕೆಯನ್ನು ಬಿಜೆಪಿ ಸರ್ಕಾರ ತಿರಸ್ಕರಿಸದು ಎಂದು ಶ್ರೀಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೆ.21ಕ್ಕೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿದರೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ, ಮೀನಾಮೇಷ ಮಾಡಿದರೆ ಪಾಠ ಕಲಿಸುತ್ತೇವೆ ಎಂದು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಸಮುದಾಯದ ಮುಖಂಡರ ಸಭೆಯಲ್ಲಿ ಎಚ್ಚರಿಕೆ ನೀಡಿದರು.
ನಾವು ಹೋರಾಟ ಮಾಡಿಕೊಂಡು ಬಂದಿದ್ದರೂ ಮೀಸಲಾತಿ ಹೆಚ್ಚಿಸಿಲ್ಲ. ಆದರೆ ಯಾವುದೇ ಹೋರಾಟ ಮಾಡದವರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗಿದೆ. ಸರ್ಕಾರ ನಮ್ಮ ಸಮುದಾಯದ ಬೇಡಿಕೆಯನ್ನು ಕಡೆಗಣಿಸದೆ ಗಟ್ಟಿ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಹೋರಾಟ ಯಾವ ಸ್ವರೂಪ ಪಡೆಯುತ್ತದೆಯೋ ಗೊತ್ತಿಲ್ಲ ಎಂದು ಗುಡುಗಿದ್ದಾರೆ.
ಇದೇ ವೇಳೆ, ಸ್ವಾಮೀಜಿ ಹೇಳಿದರೆ ಎಸ್.ಟಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಎಲ್ಲಾ ಶಾಸಕರು ರಾಜೀನಾಮೆ ನೀಡಲು ಸಿದ್ಧ ಎಂದು ಸಭೆಯಲ್ಲಿದ್ದ ಶಾಸಕರು ಬೆಂಬಲ ಘೋಷಿಸಿದ್ದಾರೆ.
ಸಭೆಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಸಚಿವ ಶ್ರೀರಾಮುಲು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಆಗದಿದ್ದರೆ ನಾನು ಈ ಹಿಂದೆ ಮಾತು ನೀಡಿದಂತೆ ಸಚಿವ ಸ್ಥಾನ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಬದ್ಧನಿದ್ದೇನೆ ಎಂದಿದ್ದಾರೆ.
ವಾಲ್ಮೀಕಿ ಸಮುದಾಯದ ಮೀಸಲಾತಿ ಬೇಡಿಕೆ ಸರ್ಕಾರಕ್ಕೆ ಗಡುವು ನೀಡುವುದಕ್ಕೆ ಸೀಮಿತವಾಗುತ್ತಾ, ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…
5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....