ಭಾರತೀಯ ರೈಲ್ವೇ ಸಚಿವಾಲಯವು ದೇಶಾದ್ಯಂತ ವೇಗದ ಹಾಗೂ ಸುಧಾರಿತ ರೈಲು ಸೇವೆಗಳನ್ನು ಒದಗಿಸಲು ಮಹತ್ವದ ಘೋಷಣೆ ಮಾಡಿದೆ. ಇತ್ತೀಚಿನ ರೈಲ್ವೆ ಬಜೆಟ್‌ನಲ್ಲಿ, 200 ಹೊಸ ವಂದೇ ಭಾರತ್ ರೈಲುಗಳು ಮತ್ತು 50 ನಮೋ ಭಾರತ್ ಶಟಲ್ ರೈಲುಗಳ ಪರಿಚಯವನ್ನು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.
ಪ್ರಮುಖ ಘೋಷಣೆಗಳು:
ನಮೋ ಭಾರತ್ ರೈಲುಗಳು: 100 ಕಿಲೋಮೀಟರ್ ವ್ಯಾಪ್ತಿಯೊಳಗೆ ಸಂಚರಿಸುವ 50 ಶಟಲ್ ರೈಲುಗಳನ್ನು ಪರಿಚಯಿಸಲಾಗುವುದು.
ವಂದೇ ಭಾರತ್ ರೈಲುಗಳು: 200 ಹೊಸ ರೈಲುಗಳನ್ನು ದೇಶದ ಎಲ್ಲ ಭಾಗಗಳಿಗೆ ವಿಸ್ತರಿಸಲಾಗುವುದು.
ಅಮೃತ್ ಭಾರತ್ ಯೋಜನೆ: 100 ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು.
₹ 2,52,000 ಕೋಟಿ ಹಂಚಿಕೆ:
ಕೇಂದ್ರ ಬಜೆಟ್‌ನಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾರತೀಯ ರೈಲ್ವೆಗೆ ₹ 2,52,000 ಕೋಟಿ ರೂ. ಅನುದಾನ ಘೋಷಿಸಿದ್ದಾರೆ.
ಆಧುನೀಕರಣ ಮತ್ತು ಸುರಕ್ಷತೆಗೆ ಆದ್ಯತೆ:
ರೈಲು ಸುರಕ್ಷತೆಗಾಗಿ ₹ 1.16 ಲಕ್ಷ ಕೋಟಿ ಅನುದಾನ.
₹ 15,742 ಕೋಟಿ ಮೌಲ್ಯದ ವಿಶಾಲ ರೈಲ್ವೆ ಅಭಿವೃದ್ಧಿ ಯೋಜನೆ.
ಆಧುನೀಕರಣದ ಗುರಿ:
ಮುಂದಿನ 2-3 ವರ್ಷಗಳಲ್ಲಿ ಹಂತ ಹಂತವಾಗಿ ಈ ಹೊಸ ರೈಲು ಸೇವೆಗಳನ್ನು ಜಾರಿಗೊಳಿಸಲಾಗುವುದು.
ಅತೀ ವೇಗದ, ಸುಧಾರಿತ ಹಾಗೂ ಜನಸ್ನೇಹಿ ರೈಲು ಸೇವೆಗಳನ್ನು ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ.
ಈ ಯೋಜನೆಗಳಿಂದ ಭಾರತೀಯ ರೈಲ್ವೆ ಮತ್ತಷ್ಟು ಆಧುನಿಕೀಕೃತವಾಗಿ ಜನಸೇವೆಗೆ ಸಮರ್ಪಿತವಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.