2ನೇ ಹಂತದ ಮೆಟ್ರೋ ಸುರಂಗ ಕಾರ್ಯ ಆರಂಭಿಸಿದ ವರದಾ ಟನಲ್ ಬೋರಿಂಗ್ ಯಂತ್ರ Saaksha Tv
ಬೆಂಗಳೂರು: ವರದಾ ಟನಲ್ ಬೋರಿಂಗ್ ಯಂತ್ರ (ಟಿಬಿಎಂ) 2ನೇ ಹಂತದ ಮೆಟ್ರೋ Metro ಸುರಂಗ ಕಾರ್ಯವನ್ನು ಆರಂಭಿಸಿದೆ ಎಂದು ನಮ್ಮ ಮೆಟ್ರೊ ನಿಗಮ ತಿಳಿಸಿದೆ.
ನಗರದ ರಾಷ್ಟ್ರೀಯ ಮಿಲಿಟರಿ ಶಾಲೆ ಬಳಿ ವೆಲ್ಲಾರ ಶಾಫ್ಟ್ನಿಂದ ಲ್ಯಾಂಗ್‌ಫೋರ್ಡ್ ಕಡೆಗೆ ಎರಡನೆಯ ಸುರಂಗ ಕೊರೆಯುವ ಕಾರ್ಯ ನಡೆಯುತ್ತಿದೆ. 594 ಮೀಟರ್ ಉದ್ದದ ಸುರಂಗವನ್ನು ಎಂಟು ತಿಂಗಳಲ್ಲಿ ಪೂರ್ಣಗೊಳಿಸಿ ಲ್ಯಾಂಗ್‌ಫೋರ್ಡ್ ಟೌನ್ ನಿಲ್ದಾಣದಲ್ಲಿ ಹೊರ ಬರುವ ನಿರೀಕ್ಷೆಯಿದೆ ಎಂದು ನಿಗಮ ಹೇಳಿದೆ.
ಹೋದ ವರ್ಷ 2021ರ ಮಾರ್ಚ 12ರಂದು ವರದಾ ಟಿಬಿಎಂ ಯಂತ್ರ ರಾಷ್ಟ್ರೀಯ ಮಿಲಿಟರಿ ಶಾಲೆಯ ಸುರಂಗ ಕೊರೆಯುವ ಕಾರ್ಯ ಆರಂಭಿಸಿ, 2021ರ ನವೆಂಬರ್ 11ರಂದು ಲ್ಯಾಂಗ್‌ಫೋರ್ಡ್ ಟೌನ್‌ವರೆಗೆ ಸುರಂಗ ಕೊರೆದು ಹೊರ ಬಂದಿತ್ತು. ಮತ್ತು ಈ ದೈತ್ಯ ಟನಲ್ ಬೋರಿಂಗ್ ಯಂತ್ರದ ಬಿಡಿ ಭಾಗಗಳನ್ನು ಬಿಚ್ಚಿ ತಿಂಗಳ ನಂತರ ಮರು ಜೋಡಣೆ ಮಾಡಿ ಪಕ್ಕದಲ್ಲಿ ಮತ್ತೊಂದು ಸುರಂಗ ಕೊರೆಯಲು ಆರಂಭಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.