BJP | ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ : ವರ್ತೂರ್ ಪ್ರಕಾಶ್
ಕೋಲಾರ : ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗಾದರೂ ಹೈಕಮಾಂಡ್ ಟಿಕೆಟ್ ನೀಡಿದ್ರೂ ಅವರಿಗಾಗಿ ನಾನು ದುಡಿಯುತ್ತೇನೆ ಎಂದು ಮಾಜಿ ಶಾಸಕ ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.
ಕೋಲಾರ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಸಿಡಿ ರಾಮಚಂದ್ರ ಗೌಡ ರವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆಯನ್ನು ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಆರ್ ವರ್ತೂರು ಪ್ರಕಾಶ್, ನಾನು ಮೊದಲು ಹತ್ತು ವರ್ಷ ಶಾಸಕರ ಹಾಗೂ ಸಚಿವ ಆಗಿದ್ದಾಗ ಯಾವೊಬ್ಬ ಬಿಜೆಪಿ ಕಾರ್ಯಕರ್ತರು ಸಹ ನನ್ನ ಬಳಿ ಯಾವುದೇ ಕೆಲಸಕ್ಕೆ ಬಾರದೆ ಪಕ್ಷ ನಿಷ್ಠೆ ಮೆರೆದರು. ನೀವು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ಇಂತಹ ಮನೋಭಾವ ಹೊಂದಿರುವ ನಿಮ್ಮ ಜೊತೆ ನಾನು ಕೈ ಜೋಡಿಸುತ್ತಿರುವುದು ನನಗೆ ಹೆಮ್ಮೆ ಅನಿಸುತ್ತಿದೆ.
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗಾದರೂ ಹೈಕಮಾಂಡ್ ಟಿಕೆಟ್ ನೀಡಿದ್ರೂ ಅವರಿಗಾಗಿ ನಾನು ದುಡಿಯುತ್ತೇನೆ. ನಾನು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷಕ್ಕಾಗಿ ದುಡಿಯುತ್ತೇನೆ. ಸುಮಾರು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದು ಪಕ್ಷವನ್ನು ಸಹ ನೀವು ಬಲ ಪಡಿಸಿದ್ದೀರಿ. ದೇಶದಲ್ಲಿ ಮತ್ತು ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿದ್ದು ಕೋಲಾರ ವಿಧಾನಸಭಾ ಕ್ಷೇತ್ರದ ಎಲ್ಲಾ ಕಾರ್ಯಕರ್ತರನ್ನು ಆರ್ಥಿಕತೆಯಲ್ಲಿ ಮುಂದೆ ತರುವ ಜವಾಬ್ದಾರಿ. ಕಾರ್ಯಕರ್ತರಿಗೆ ಯಾವುದೇ ಸಂದರ್ಭದಲ್ಲೂ ಸಹ ಯಾವುದೇ ರೀತಿ ತೊಂದರೆಯಾದ್ರೆ ನನಗೆ ನೇರವಾಗಿ ದೂರವಾಣಿ ಮುಖಾಂತರ ಸಂಪರ್ಕ ಮಾಡಿದರೆ ಸಾಕು ನಿಮ್ಮ ಸಮಸ್ಯೆಯನ್ನು ಬಗೆಹರಿಸಿ ಕೊಡುವ ಜವಾಬ್ದಾರಿ ಭಾರ ನನ್ನ ಮೇಲೆ ಇರುತ್ತದೆ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರದಿಂದ ಅನುದಾನಗಳನ್ನು ತಂದು ನಿಮ್ಮ ನಿಮ್ಮ ಗ್ರಾಮಗಳನ್ನು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಾರ್ಯಕರ್ತರು ಸಹ ಆರ್ಥಿಕತೆಯಲ್ಲಿ ಮುಂದೆ ಬರಲು ನಿಮಗೆ ಬ್ಯಾಂಕ್ ಲೋನ್ ಸಹ ಕೊಡಿಸುತ್ತೇನೆ. ಈಗಿನಿಂದಲೇ ಕಾರ್ಯಕರ್ತರು ಗ್ರಾಮದಲ್ಲಿ ಪಕ್ಷವನ್ನು ಸಂಘಟಿಸಬೇಕು. ಮನೆಯ ಮೇಲೆ ಬಿಜೆಪಿ ಧ್ವಜವನ್ನು ಹಾರಿಸಬೇಕು ಯಾವುದೇ ಕಾರಣಕ್ಕೂ ಬೇರೆ ಪಕ್ಷದವರು ಸುಳ್ಳು ಮಾತುಗಳನ್ನು ನಂಬಿ ಮೋಸ ಹೋಗಬೇಡಿ. ಪಕ್ಷ ಸಂಘಟಿಸಿ ಪಕ್ಷವನ್ನು ಕೋಲಾರದಲ್ಲಿ ಅಧಿಕಾರಕ್ಕೆ ತಂದು ನಿಮ್ಮನ್ನೆಲ್ಲ ದೊಡ್ಡ ದೊಡ್ಡ ಕಾರುಗಳಲ್ಲಿ ಬರುವ ಹಾಗೆ ಮಾಡದೆ ಹೋದರೆ ನನ್ನ ಹೆಸರು ಬದಲಿಸಿ ಕೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಸೂರ್ಯಪ್ರಕಾಶ್, ಕೋಲಾರ ತಾಲೂಕು ಅಧ್ಯಕ್ಷರಾದ ಸಿಡಿ ರಾಮಚಂದ್ರೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಅರುಣ್ ಪ್ರಸಾದ್ ಹಾಗೂ ಬಂಕ್ ಮಂಜುನಾಥ್ ಹಿರಿಯ ಎಸ್ ಪಿ ಗೋವಿಂದರಾಜು ಮುಖಂಡರಾದ ಹೂ ಹಳ್ಳಿ ಚಲಪತಿ ಸೋಲೂರು ಆಂಜನಪ್ಪ ವೇಮಗಲ್ ಆನಂದ್ ಚೋಳಘಟ್ಟ ವೆಂಕಟಸ್ವಾಮಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.








