ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Culture

‘ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ’

ಅಮೇರಿಕದಲ್ಲಿ ಜರುಗಿದ 12ನೆಯ ಅಕ್ಕ ಸಮ್ಮೇಳನದಲ್ಲಿ ಬಳ್ಳಾರಿಯ ಸಾಹಿತಿ ಡಾ.ವೀರಭದ್ರಯ್ಯ ಪ್ರತಿಪಾದನೆ

Author2 by Author2
September 5, 2024
in Culture, Kalyana karnataka, ಕಲ್ಯಾಣ ಕರ್ನಾಟಕ
Share on FacebookShare on TwitterShare on WhatsappShare on Telegram

ಹುಬ್ಬಳ್ಳಿ : ಹರಪ್ಪ-ಮೊಹೆಂಜೊದಾರೋ ಸಂಸ್ಕೃತಿಯ ಉತ್ಖನನದಲ್ಲಿ ಶಿವಲಿಂಗಗಳ ಜೊತೆಗೆ ಧಾರಣೆಗೆ ಅನುಕೂಲವಾದ ಚಿಕ್ಕ ಗಾತ್ರದ ಲಿಂಗಗಳೂ ದೊರೆತಿರುವುದರಿಂದ ಸಿಂಧೂಬಯಲಿನ ನಾಗರಿಕತೆಯಲ್ಲಿ ಶಿವನ ಆರಾಧಕರಾಗಿದ್ದವರೆಲ್ಲರೂ ಬಹುತೇಕ ವೀರಶೈವ-ಲಿಂಗಾಯತ ಧರ್ಮ-ಸಂಸ್ಕೃತಿಯನ್ನು ಪರಿಪಾಲನೆ ಮಾಡುವವರೇ ಆಗಿದ್ದು, ಈ ನಿಟ್ಟಿನಲ್ಲಿ ವೀರಶೈವ ಸುಮಾರು 10 ಸಾವಿರ ವರ್ಷಗಳ ಪ್ರಾಚೀನ ಧರ್ಮವಾಗಿದೆ ಎಂದು ಬಳ್ಳಾರಿಯ ಹಿರಿಯ ಸಾಹಿತಿ, ಸಂಶೋಧಕ ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ ಪ್ರತಿಪಾದಿಸಿದರು.

ಅವರು ಅಮೇರಿಕದಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಅಲ್ಲಿಯ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 12ನೆಯ ಅಕ್ಕ ಸಮ್ಮೇಳನದ ಅಂಗವಾಗಿ ಜರುಗಿದ ಚಿಂತನಗೋಷ್ಠಿಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ವೀರಶೈವ-ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆ ಬಹು ಪ್ರಾಚೀನವಾದುದು. ಇಲ್ಲಿ ಅರ್ಚನೆ, ಆರಾಧನೆ ಮತ್ತು ಅನುಷ್ಠಾನದ ಕೇಂದ್ರ ಬಿಂದು ‘ಇಷ್ಟಲಿಂಗ’ವೇ ಆಗಿದೆ. ಸಿಂಧೂಬಯಲಿನ ನಾಗರಿಕತೆಯ ಕಾಲಘಟ್ಟದಿಂದಲೂ ವೀರಶೈವ-ಲಿಂಗಾಯತ ಧರ್ಮ, ಸಂಸ್ಕೃತಿ, ಪರಂಪರೆಗೆ ಅನುಗುಣವಾದ ‘ಇಷ್ಟಲಿಂಗಾರ್ಚನೆ’ಯ ಆಚರಣೆ ಇತ್ತೆಂಬುದು ಸಂಶೋಧನೆಯಿಂದ ಸಾಬೀತಾಗಿದೆ ಎಂದರು.

Related posts

ನವ ಕಲಬುರಗಿ ನಿರ್ಮಾಣಕ್ಕೆ ಬೃಹತ್ ನೀಲನಕ್ಷೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಂಕಲ್ಪ

ನವ ಕಲಬುರಗಿ ನಿರ್ಮಾಣಕ್ಕೆ ಬೃಹತ್ ನೀಲನಕ್ಷೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಂಕಲ್ಪ

November 2, 2025
ಕಬ್ಬಿನ ಕಿಚ್ಚು: “ಸಕ್ಕರೆ ಸಚಿವ ಸತ್ತಿದ್ದಾನೆ” – ಪ್ರಭಾಕರ ಕೋರೆಗೆ ಏಕವಚನದಲ್ಲೇ ರೈತ ಮುಖಂಡನ ಹಿಡಿಶಾಪ!

ಕಬ್ಬಿನ ಕಿಚ್ಚು: “ಸಕ್ಕರೆ ಸಚಿವ ಸತ್ತಿದ್ದಾನೆ” – ಪ್ರಭಾಕರ ಕೋರೆಗೆ ಏಕವಚನದಲ್ಲೇ ರೈತ ಮುಖಂಡನ ಹಿಡಿಶಾಪ!

November 2, 2025

ಶಾಶನಗಳಲ್ಲಿ ವೀರಶೈವ : ಭಾರತದೆಲ್ಲೆಡೆ ಮತ್ತು ವಿದೇಶಗಳಲ್ಲಿ ಲಭ್ಯವಾದ ಅನೇಕ ಶಾಶನಗಳಲ್ಲಿ ವೀರಶೈವ ಧರ್ಮದ ಉಲ್ಲೇಖಗಳಿವೆ. ಶಾಶನಗಳು ಸಂಶೋಧನೆಗೆ ಅತ್ಯಂತ ನಿಖರ ಆಕರಗಳಾಗಿದ್ದು, ಶಾಶನೋಕ್ತ ವೀರಶೈವವನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಭಾರತದಲ್ಲಷ್ಟೇ ಅಲ್ಲದೇ ನೇಪಾಳ, ಭೂತಾನ್, ಶ್ರೀಲಂಕಾ, ಕಾಂಬೋಡಿಯಾ ಮುಂತಾದ ವಿದೇಶಗಳಲ್ಲಿಯೂ ಶಿವನ ಆರಾಧನೆ ಮತ್ತು ಲಿಂಗಾರ್ಚನೆ ಇರುವುದು ಸಂಶೋಧನೆಯಲ್ಲಿ ಗೋಚರವಾಗಿದೆ ಎಂದೂ ಅವರು ಹೇಳಿದರು.

ಲಿಂಗಾಂಗ ಸಾಮರಸ್ಯ : ವೀರಶೈವ-ಲಿಂಗಾಯತ ಧರ್ಮವು ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲ ತತ್ವಪ್ರಣೀತವಾದದ್ದು. ಇಲ್ಲಿ ಮೋಕ್ಷವನ್ನು ‘ಲಿಂಗಾಂಗ ಸಾಮರಸ್ಯ’ ಎಂದಿದ್ದಾರೆ. ಸಾಕ್ಷಾತ್ಕಾರ ಸಂಪಾದನೆ ಎಂದರೆ ಅದು ಅಂತಿಮವಾಗಿ ‘ಭಗವದ್ಬೆಳಗು’ ಕಾಣುವ ಹಂಬಲ. ವಿಶ್ವದಲ್ಲಿಯ ಎಲ್ಲಾ ಧರ್ಮಗಳ ಮೂಲ ಪ್ರತಿಪಾದನೆಯೂ ಕೂಡ ಇದೇ ಆಗಿದೆ. ಭಗವಂತನನ್ನು ಕಾಣಲೇಬೇಕೆಂಬ ಹಿರಿದಾದ ಹಂಬಲಕ್ಕೆ ಕ್ರಮಿಸುವ ಮಾರ್ಗಗಳು ಹತ್ತು ಹಲವು. ವೀರಶೈವ-ಲಿಂಗಾಯತರು ನಿತ್ಯವೂ ಇಷ್ಟಲಿಂಗದ ಅನುಸಂಧಾನದ ಮೂಲಕ ಶಿವಬೆಳಗನ್ನು ಕಾಣುತ್ತಾರೆ ಎಂದೂ ಡಾ.ವೀರಭದ್ರಯ್ಯ ಹೇಳಿದರು.

ರಾಜ್ಯದ ಮಾಜಿ ಸಚಿವೆ ರಾಣಿ ಸತೀಶ್ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ವೀರಶೈವರು ಮತ್ತು ಲಿಂಗಾಯತರು ಬೇರೆ ಬೇರೆ ಎಂಬ ಭಿನ್ನಾಭಿಪ್ರಾಯಗಳನ್ನು ಹುಟ್ಟುಹಾಕಿ ಸಂಕೀರ್ಣತೆಯಲ್ಲಿ ಬದುಕುವ ಸ್ಥಿತಿ ಈಗ ನಿರ್ಮಾಣವಾಗಿದೆ. ಪ್ರಸ್ತುತ ವೀರಶೈವ-ಲಿಂಗಾಯತ ಧರ್ಮದ ಯುವಕ-ಯುವತಿಯರು ವ್ಯಾಪಕ ಗೊಂದಲಗಳಲ್ಲಿ ಸಿಲುಕಿದ್ದಾರೆ. 10 ಸಾವಿರ ವರ್ಷಗಳ ಚಾರಿತ್ರಿಕ ಘನತೆ ಇರುವ ಮತ್ತು ಸಂಶೋಧನೆಯ ಎಲ್ಲ ಆಯಾಮಗಳ ನೆಲೆ-ಮೂಲಗಳನ್ನು ಎಲ್ಲರೂ ಮುಕ್ತವಾಗಿ ಅವಲೋಕನ ಮಾಡುವ ಅಗತ್ಯವಿದೆ. ವೀರಶೈವ-ಲಿಂಗಾಯತರ ಅನೇಕ ಒಳ ಉಪಪಂಗಡಗಳನ್ನು ಮುನ್ನೆಲೆಗೆ ತಂದು ಮೀಸಲಾತಿ ಹೋರಾಟಗಳನ್ನೂ ಸಹ ನಡೆಸಲಾಗುತ್ತಿದೆ. ರಾಜಕಾರಣಿಗಳೂ ಸಹ ಧರ್ಮದ ವಿಚಾರಗಳಲ್ಲಿ ತಮಗೆ ಅನುಕೂಲವಾಗುವಂತೆ ವಿಭಜನೆಯ ಮಾತುಗಳನ್ನು ಎಂದೂ ಎಲ್ಲಿಯೂ ವ್ಯಕ್ತಪಡಿಸಬಾರದು. ಎಲ್ಲರೂ ಸೇರಿಕೊಂಡು ಸಾಮರಸ್ಯದ ನೆಲೆಯಲ್ಲಿ ಧರ್ಮದ ವಿಶಾಲ ವ್ಯಾಪ್ತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದರು. ಅಮೇರಿಕದ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಹಾಗೂ 12ನೆಯ ಅಕ್ಕ ಸಮ್ಮೇಳನ ಸಮಿತಿಯ ವಿವಿಧ ಪದಾಧಿಕಾರಿಗಳು ಇದ್ದರು.

ಫೋಟೋ ವಿವರ :
ಅಮೇರಿಕದ ರಿಚ್ಮಂಡ್ ನಗರದಲ್ಲಿ ಹಮ್ಮಿಕೊಂಡಿದ್ದ 12ನೆಯ ಅಕ್ಕ ಸಮ್ಮೇಳನದ ಅಂಗವಾಗಿ ಜರುಗಿದ ಚಿಂತನಗೋಷ್ಠಿಯಲ್ಲಿ ರಾಜ್ಯದ ಮಾಜಿ ಸಚಿವೆ ರಾಣಿ ಸತೀಶ್, ಬಳ್ಳಾರಿಯ ಹಿರಿಯ ಸಾಹಿತಿ, ಸಂಶೋಧಕ ಡಾ. ಚಿಕ್ಕ್ಯಾಟೆಮಠದ ವೀರಭದ್ರಯ್ಯ, ಅಮೇರಿಕದ ಕಾವೇರಿ ಮತ್ತು ರಿಚ್ಮಂಡ್ ಕನ್ನಡ ಸಂಘಟನೆಗಳ ಹಾಗೂ ಅಕ್ಕ ಸಮ್ಮೇಳನ ಸಮಿತಿಯ ವಿವಿಧ ಪದಾಧಿಕಾರಿಗಳು ಇದ್ದರು.

Tags: #10000yearsold#veerashaivaakkasammelanaamericahubballi
ShareTweetSendShare
Join us on:

Related Posts

ನವ ಕಲಬುರಗಿ ನಿರ್ಮಾಣಕ್ಕೆ ಬೃಹತ್ ನೀಲನಕ್ಷೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಂಕಲ್ಪ

ನವ ಕಲಬುರಗಿ ನಿರ್ಮಾಣಕ್ಕೆ ಬೃಹತ್ ನೀಲನಕ್ಷೆ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಂಕಲ್ಪ

by Shwetha
November 2, 2025
0

ಕಲಬುರಗಿ: ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು "ನವ ಕಲಬುರಗಿ" ನಿರ್ಮಾಣಕ್ಕೆ ಬೃಹತ್ ನೀಲನಕ್ಷೆ ಸಿದ್ಧವಾಗಿದ್ದು, ಮುಂದಿನ ಒಂದು ವರ್ಷದೊಳಗೆ ಇದನ್ನು ಕಾರ್ಯರೂಪಕ್ಕೆ ತರಲು ಸರ್ಕಾರ ಬದ್ಧವಾಗಿದೆ ಎಂದು...

ಕಬ್ಬಿನ ಕಿಚ್ಚು: “ಸಕ್ಕರೆ ಸಚಿವ ಸತ್ತಿದ್ದಾನೆ” – ಪ್ರಭಾಕರ ಕೋರೆಗೆ ಏಕವಚನದಲ್ಲೇ ರೈತ ಮುಖಂಡನ ಹಿಡಿಶಾಪ!

ಕಬ್ಬಿನ ಕಿಚ್ಚು: “ಸಕ್ಕರೆ ಸಚಿವ ಸತ್ತಿದ್ದಾನೆ” – ಪ್ರಭಾಕರ ಕೋರೆಗೆ ಏಕವಚನದಲ್ಲೇ ರೈತ ಮುಖಂಡನ ಹಿಡಿಶಾಪ!

by Shwetha
November 2, 2025
0

ಬೆಳಗಾವಿ: ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸದ ಸಕ್ಕರೆ ಸಚಿವರು ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ರೈತರ ಆಕ್ರೋಶದ ಕಟ್ಟೆಯೊಡೆದಿದ್ದು, ಸಕ್ಕರೆ ಸಚಿವರನ್ನು 'ಸತ್ತಿದ್ದಾನೆ' ಎಂದು ಜರಿದರೆ, ಮಾಜಿ...

6,000 voter names deleted in Karnataka's Aland: Rahul Gandhi

ಆಳಂದ ಕ್ಷೇತ್ರದಲ್ಲಿ 6 ಸಾವಿರ  ಮತದಾರರ ಹೆಸರು ಡಿಲೀಟ್‌: ರಾಹುಲ್‌ ಗಾಂಧಿ

by Saaksha Editor
September 18, 2025
0

ನವದೆಹಲಿ, ಸೆ.18: ಕರ್ನಾಟಕದ (Karnataka) ಕಲಬುರಗಿ (Kalaburagi) ಜಿಲ್ಲೆಯ ಆಳಂದ (Aland) ಲೋಕಸಭಾ ಕ್ಷೇತ್ರದಲ್ಲೂ  ಮತಗಳ್ಳತನವಾಗಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್‌ ಗಾಂಧಿ...

ಧರ್ಮಸ್ಥಳ ಶವ ಹೂತ ಪ್ರಕರಣ: ‘ಮಾಸ್ಕ್ ಮ್ಯಾನ್’ ಗುರುತು ಬಹಿರಂಗಪಡಿಸುವಂತೆ ಆರ್. ಅಶೋಕ್ ಆಗ್ರಹ

ಮುಸ್ಲಿಂ ಯುವತಿಯನ್ನು ಮದುವೆಯಾದರೆ ₹5ಲಕ್ಷ: ಯತ್ನಾಳ್ ವಿರುದ್ಧ ಪ್ರಕರಣ ದಾಖಲು

by Shwetha
August 15, 2025
0

ವಿಜಯಪುರ: ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ₹5ಲಕ್ಷ ನೀಡಲಾಗುವುದು ಎಂಬ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ....

ಕಲಬುರಗಿ: ಆದಾಯ ಪ್ರಮಾಣಪತ್ರದಲ್ಲಿ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಎಂದು ನಮೂದಿಸಿದ ಅಧಿಕಾರಿಗಳು, ಕುಟುಂಬ ಕಂಗಾಲು

ಕಲಬುರಗಿ: ಆದಾಯ ಪ್ರಮಾಣಪತ್ರದಲ್ಲಿ ಹಿಂದೂ ವ್ಯಕ್ತಿಯನ್ನು ಮುಸ್ಲಿಂ ಎಂದು ನಮೂದಿಸಿದ ಅಧಿಕಾರಿಗಳು, ಕುಟುಂಬ ಕಂಗಾಲು

by Shwetha
July 28, 2025
0

ಕಲಬುರಗಿ: ಕಲಬುರಗಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಮತೀರ್ಥನಗರದ ಕುಟುಂಬವೊಂದು ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಆದಾಯ ಪ್ರಮಾಣಪತ್ರ ಪಡೆಯಲು ಹೋಗಿದ್ದ ವ್ಯಕ್ತಿಯೊಬ್ಬರನ್ನು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೂ, ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram