ಹಾರ್ದಿಕ್ ಸ್ಥಾನ ತುಂಬುವ ಆಟಗಾರ ಈತನೇ..
ಕಳೆದ ಕೆಲ ದಿನಗಳಿಂದ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಕ್ರಿಕೆಟ್ ಕೆರಿಯರ್ ಸಂಕಷ್ಟಕ್ಕೆ ಸಿಲುಕಿದೆ. venkatesh-iyer saakshah tv
ಬೌಲಿಂಗ್ ನಲ್ಲಿ ಆಸಕ್ತಿ ತೋರದ ಹಾರ್ದಿಕ್, ಬ್ಯಾಟಿಂಗ್ ನಲ್ಲೂ ಅಬ್ಬರಿಸುತ್ತಿಲ್ಲ. ಆರಂಭದಲ್ಲಿ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದ ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡಿದ್ದರು.
ಬ್ಯಾಟಿಂಗ್ ನಲ್ಲಿ ವಿಧ್ವಂಸವನ್ನು ಸೃಷ್ಠಿಸುತ್ತಿದ್ದ ಪಾಂಡ್ಯ, ಬೌಲಿಂಗ್ ನಲ್ಲಿ ಎದುರಾಳಿಗಳನ್ನ ಕಾಡುತ್ತಿದ್ದರು. ಅವರ ಫೀಲ್ಡಿಂಗ್ ಕೂಡ ಭಾರತಕ್ಕೆ ವರದಾನವಾಗಿತ್ತು.
ಆದ್ರೆ ಇಂಜೂರಿ ಸಮಸ್ಯೆಯಿಂದ ತಂಡದಿಂದ ಹೊರಗುಳಿದ ಹಾರ್ದಿಕ್ ಮತ್ತೆ ತಂಡಕ್ಕೆ ವಾಪಸ್ ಆದ್ರೂ ಮೊದಲಿನ ಚಾರ್ಮ್ ಕಳೆದುಕೊಂಡಿದ್ದಾರೆ.
ಹೀಗಾಗಿ ನ್ಯೂಜಿಲೆಂಡ್ ವಿರುದ್ಧ ಟಿ 20 ಮತ್ತು ಟೆಸ್ಟ್ ಸರಣಿಯಿಂದ ಅವರನ್ನು ಕೈಬಿಡಲಾಗಿತ್ತು.
ಸದ್ಯ ಬ್ಯಾಡ್ ಫಾರ್ಮ್ ನಲ್ಲಿರುವ ಹಾರ್ದಿಕ್ ಪಾಂಡ್ಯ ಅಂತರಾಷ್ಟ್ರೀಯ ಕ್ರಿಕೆಟ್ ಬದುಕು ಪ್ರಶ್ನಾರ್ಥಕವಾಗಿದೆ.
ಈ ಮಧ್ಯೆ ಟೀಂ ಇಂಡಿಯಾದಲ್ಲಿ ಸ್ಟಾರ್ ಆಲ್ ರೌಂಡರ್ ಆಗಿದ್ದ ಹಾರ್ದಿಕ್ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಈ ಬಗ್ಗೆ ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ಸಬಾ ಕರೀಂ ಪ್ರತಿಕ್ರಿಯೆ ನೀಡಿದ್ದು, ಯುವ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಹೆಸರನ್ನು ಪ್ರತಿಪಾದಿಸಿದ್ದಾರೆ.
ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನ ತುಂಬುವ ತಾಕತ್ತು ಅಯ್ಯರ್ ನಲ್ಲಿದೆ ಎಂದು ಕರೀಂ ಹೇಳಿದ್ದಾರೆ. ಅಲ್ಲದೇ ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ವೆಂಕಟೇಶ್ ಅಯ್ಯರ್ ಅವರನ್ನ ಶ್ಲಾಘಿಸಿದ್ದಾರೆ.
“ವೆಂಕಟೇಶ್ ಅಯ್ಯರ್ ಮತ್ತು ರುತುರಾಜ್ ಗಾಯಕ್ವಾಡ್ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಗೆ ಆಯ್ಕೆ ಆಗುತ್ತಾರೆ ಎಂದು ಕರೀಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2023 ರ ವಿಶ್ವಕಪ್ ದೃಷ್ಟಿಯಿಂದ, ಈ ಇಬ್ಬರು ಆಟಗಾರರು ಆದಷ್ಟು ಬೇಗ ತಂಡದ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ವೆಂಕಟೇಶ್ ಅಯ್ಯರ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಮೂರು ಮ್ಯಾಚ್ ಗಳಲ್ಲಿ 112, 71 ಮತ್ತು 151 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ರುತುರಾಜ್ ಗಾಯಕ್ವಾಡ್ ಕೂಡ ಹ್ಯಾಟ್ರಿಕ್ ಶತಕಗಳನ್ನು ಬಾರಿಸಿ ಮಿಂಚುತ್ತಿದ್ದಾರೆ.