26 ವರ್ಷಗಳ ಹಿಂದೆ.. ಟ್ಯಾಕ್ಸಿ ಡ್ರೈವರ್ ಹೇಳಿದ ಮಾತು… ಬಂಗಾರವಾಯ್ತು ವೆಂಕಟೇಶ್ ಅಯ್ಯರ್ ಬದುಕು..!
ಅದು ಸುಮಾರು 26 ವರ್ಷಗಳ ಹಿಂದೆ. ಆಗಿನ್ನು ವೆಂಕಟೇಶ್ ಅಯ್ಯರ್ ಗೆ ಏಳು ತಿಂಗಳು. ಭೋಪಾಲ್ ನಿಂದ ದೇವಾಸ್ ಗೆ ವೆಂಕಟೇಶ್ ಅಯ್ಯರ್ ತಾಯಿ ಉಷಾ ಅಯ್ಯರ್ ಅವರು ಏಳು ತಿಂಗಳ ಮಗು ವೆಂಕಟೇಶ್ ಅಯ್ಯರ್ ಜೊತೆ ಪ್ರಯಾಣ ಬೆಳೆಸುತ್ತಿದ್ದರು. ಆಗ ಟ್ಯಾಕ್ಸಿ ಡ್ರೈವಡ್ ಒಬ್ಬ ಪುಟ್ಟ ಮಗು ವೆಂಕಟೇಶ್ ಅಯ್ಯರ್ ನನ್ನು ದಿಟ್ಟಿಸಿನೋಡುತ್ತಿದ್ದರು. ಈ ಮಗು ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತಾನೆ. ಆತ ಏನು ಮಾಡುತ್ತಾನೋ ಅದಕ್ಕೆ ಬೆಂಬಲ ನೀಡಿ ಎಂದು ಹೇಳಿ ಟ್ಯಾಕ್ಸಿ ಡ್ರೈವರ್ ಹೋಗಿದ್ದ.
ಇದೀಗ ವೆಂಕಟೇಶ್ ಅಯ್ಯರ್ ಅವರ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಗಿದೆ. ವೆಂಕಟೇಶ್ ಅಯ್ಯರ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ಭವಿಷ್ಯದ ದಿನಗಳಲ್ಲಿ ಸಾಕಷ್ಟು ನಿರೀಕ್ಷೆ ಕೂಡ ಮೂಡಿಸಿದ್ದಾರೆ.
6.4 ಎತ್ತರದ 26ರ ಹರೆಯದ ವೆಂಕಟೇಶ್ ಅಯ್ಯರ್ ಕೆಲವೇ ತಿಂಗಳುಗಳಲ್ಲಿ ಸ್ಟಾರ್ ಆಗಿ ಬಿಟ್ಟಿದ್ದಾರೆ.
ಬಹುಶಃ ಸ್ವತಃ ವೆಂಕಟೇಶ್ ಅಯ್ಯರ್ ಗೆ ಇದು ಕನಸೋ ನನಸೋ ಎಂಬುದೇ ಗೊತ್ತಾಗುತ್ತಿಲ್ಲ. ಹತ್ತು ಪ್ರಥಮ ದರ್ಜೆ, 24 ಲೀಸ್ಟ್ ಎ ಪಂದ್ಯ ಹಾಗೂ 48 ಟಿ-20 ಪಂದ್ಯಗಳನ್ನು ಆಡಿರುವ ವೆಂಕಟೇಶ್ ಅಯ್ಯರ್ ಈಗ ಟೀಮ್ ಇಂಡಿಯಾದ ಆಲ್ ರೌಂಡರ್.
ಹಾಗೇ ನೋಡಿದ್ರೆ ವೆಂಕಟೇಶ್ ಅಯ್ಯರ್ ಕ್ರಿಕೆಟಿನಾಗುತ್ತಾನೆ ಅಂತ ಅಂದುಕೊಂಡಿರಲಿಲ್ಲ. 2015ರಲ್ಲಿ ಮಧ್ಯ ಪ್ರದೇಶ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ರೂ ಹೆಚ್ಚು ಮಿಂಚು ಹರಿಸಲಿಲ್ಲ. ಈ ನಡುವೆ ಬಿಕಾಮ್ ಪದವಿ ಪಡೆದ ವೆಂಕಿ, ಚಾರ್ಟೆಡ್ ಅಕೌಂಟೆಂಟ್ ಆಗೋ ಕನಸು ಕಂಡಿದ್ದರು. ಅದು ಕೂಡ ಕೈಗೂಡಲಿಲ್ಲ. ಬಳಿಕ ಎಂಬಿಎ ಪದವಿ ಪಡೆದುಕೊಂಡ್ರು. ಇದಾದ ಬಳಿಕ ಮತ್ತೆ ಕ್ರಿಕೆಟ್ ನತ್ತ ಗಮನ ಹರಿಸಿದ್ರು.
ಆದ್ರೆ ಈ ಬಾರಿ ಕ್ರಿಕೆಟ್ ಕೈಬಿಡಲಿಲ್ಲ. 2021ರ ಐಪಿಎಲ್ ನಲ್ಲಿ ಕೆಕೆಆರ್ ತಂಡದ ಸದಸ್ಯನಾದ್ರು. ಆದ್ರೆ ಭಾರತದಲ್ಲಿ ನಡೆದ ಮೊದಲಾರ್ಧದ ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ.
ಆದ್ರೆ ದುಬೈ ನಲ್ಲಿ ವೆಂಕಿಯ ಭವಿಷ್ಯವೇ ಬದಲಾಗಿ ಹೋಯ್ತು. ಆರ್ ಸಿಬಿ, ಮುಂಬೈ ವಿರುದ್ಧ ಸ್ಫೋಟಕ ಆಟವನ್ನಾಡಿದ್ದ ವೆಂಕಟೇಶ್ ಅಯ್ಯರ್ ಸೀದಾ ಬಂದಿದ್ದು ಟೀಮ್ ಇಂಡಿಯಾದ ಗರ್ಭಗುಡಿಯೊಳಗೆ.
ಇನ್ನು ಮಗ ಕೆಕೆಆರ್ ತಂಡದ ಸದಸ್ಯನಾಗಿದ್ರೂ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದುಕೊಂಡಿಲ್ಲ ಎಂಬ ಚಿಂತೆ ತಾಯಿ ಉಷಾ ಅಯ್ಯರ್ ಗಿತ್ತು. ಅದಕ್ಕಾಗಿ ಪ್ರತಿ ದಿನ ಫೋನ್ ಮಾಡಿ ತಂಡದಲ್ಲಿ ಆಡುತ್ತಿಯಾ ಅಂತ ಕೇಳ್ತಾನೆ ಇದ್ರಂತೆ. ಇದರಿಂದ ಕಿರಿಕಿರಿ ಅನ್ನಿಸಿದ್ರೂ ತಾಯಿ ಮೇಲೆ ರೇಗಾಡಲಿಲ್ಲ. ಮಮ್ಮಿ ನೀನು ಕೇಳ್ತಾನೆ ಇರಬೇಡ. ನಾನು ನೀನಗೆ ಏನು ಹೇಳುವುದಿಲ್ಲ.. ಆಡುವಾಗ ನೀನೇ ನೋಡು ಅಂತ ಹೇಳುತ್ತಿದ್ದರು.
ಅಂತಿಮವಾಗಿ ಚೊಚ್ಚಲ ಐಪಿಎಲ್ ಪಂದ್ಯವನ್ನು ಆಡಿದಾಗ ಉಷಾ ಅಯ್ಯರ್ ಗೆ ಗೊತ್ತೇ ಇರಲ್ಲಿಲ್ಲ. ಇಂಧೋರ್ ನ ಆಪೋಲೋ ಆಸ್ಪತ್ರೆಯ ಆಡಳಿತ ಮಂಡಳಿಯ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಉಷಾ ಅಯ್ಯರ್ ಅವರು ಮಗನ ಆಟವನ್ನು ಆತಂಕದಿಂದಲೇ ನೋಡುತ್ತಿದ್ದರಂತೆ. ಆಗ ಅವರಿಗೆ ನೆನಪಾಗಿದ್ದು ಟ್ಯಾಕ್ಸಿ ಡ್ರೈವರ್ 26 ವರ್ಷಗಳ ಹಿಂದೆ ಹೇಳಿದ್ದ ಮಾತು.
ಇನ್ನು ವೆಂಕಟೇಶ್ ಅಯ್ಯರ್ ಅವರ ಕ್ರಿಕೆಟ್ ಬದುಕಿನ ಹಾದಿಯನ್ನು ಹೊಸ ಬುನಾದಿ ನೀಡಿದ್ದು ಟರ್ಬನೇಟರ್ ಹರ್ಭಜನ್ ಸಿಂಗ್. ಹರ್ಭಜನ್ ಸಿಂಗ್ ಅವರು ವಿರಾಟ್ ಕೊಹ್ಲಿಯ ಜೊತೆ ಮಾತನಾಡುವಂತೆ ಸಲಹೆ ನೀಡಿದ್ದರು. ವಿರಾಟ್ ಆರ್ ಸಿಬಿ ಪಂದ್ಯದ ಬಳಿಕ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದರು.
ಹೀಗೆ ವೆಂಕಟೇಶ್ ಅಯ್ಯರ್ ಅನ್ನೋ ಪ್ರತಿಭೆ ಬೆಳಕಿಗೆ ಬಂದಿದ್ದು. ಆತ್ಮವಿಶ್ವಾಸ, ಬದ್ಧತೆ, ಆಕ್ರಮಣಕಾರಿ ಪ್ರವೃತ್ತಿಯೇ ಇಂದು ಟೀಮ್ ಇಂಡಿಯಾದಲ್ಲಿ ಸ್ಥಾನಪಡೆದುಕೊಳ್ಳುವಂತೆ ಮಾಡಿದೆ.