ಕೊರೊನಾ ಎಫೆಕ್ಟ್ | ಈ ಬಾರಿ ಐಪಿಎಲ್ ನಡೆಯುತ್ತೋ ಇಲ್ಲವೋ..?
ಐಪಿಎಲ್-2022ಕ್ಕೆ ಸಂಬಂಧಿಸಿದ ಸುದ್ದಿವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಬಿಸಿಸಿಐ ಈ ವರ್ಷದ ಐಪಿಎಲ್ ಅನ್ನು ಸ್ವದೇಶದಲ್ಲಿ ಆಯೋಜಿಸುವುದಕ್ಕಿಂತ ವಿದೇಶದಲ್ಲಿ ಆಯೋಜಿಸಲು ಯೋಜಿಸುತ್ತಿದೆ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಗಿರಗಿಟ್ಟಲೇ ಹೊಡೆಯುತ್ತಿದೆ.
ಈ ವಿಚಾರವಾಗಿ ಬಿಸಿಸಿಐ ಇದೀಗ ಮಹತ್ವದ ಘೋಷಣೆ ಮಾಡಿದೆ. ಐಪಿಎಲ್ ಕುರಿತು ಬರುತ್ತಿರುವ ಎಲ್ಲಾ ಸುದ್ದಿಗಳು ಸುಳ್ಳು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಬರುವ ಮೆಗಾ ಹರಾಜಿನ ನಂತರ ಐಪಿಎಲ್-2022 ರ ಸ್ಥಳಗಳು ಮತ್ತು ವೇಳಾಪಟ್ಟಿಯ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಬಿಸಿಸಿಐ ಪ್ರಸ್ತುತ ಐಪಿಎಲ್ ಮೆಗಾ ಹರಾಜಿಗೆ ಆದ್ಯತೆ ನೀಡುತ್ತಿದೆ.
IPL-2022 ರ ಕುರಿತು ಯಾವುದೇ ಸುದ್ದಿಯನ್ನು ನಂಬಬೇಡಿ. ಐಪಿಎಲ್ ವೇಳಾಪಟ್ಟಿ ಅಥವಾ ಸ್ಥಳಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಇದೀಗ ಹರಾಜು ನಮಗೆ ಆದ್ಯತೆಯಾಗಿದೆ. ನಾವು ಕೋವಿಡ್-19 ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಹರಾಜಿನ ನಂತರ, ನಾವು ಐಪಿಎಲ್ -2022 ರ ಸ್ಥಳ ಮತ್ತು ವೇಳಾಪಟ್ಟಿಯ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ”ಎಂದು ಬಿಸಿಸಿಐ ಅಧಿಕಾರಿ ಇನ್ಸೈಡ್ ಸ್ಪೋರ್ಟ್ಗೆ ತಿಳಿಸಿದ್ದಾರೆ.