1971ರ ಯುದ್ಧದ ರುವಾರಿ ವೈಸ್ ಅಡ್ಮಿರಲ್  ಶ್ರೀ ಹರಿಲಾಲ್ ಶರ್ಮಾ ನಿಧನ

1 min read

1971ರ ಯುದ್ಧದ ರುವಾರಿ ವೈಸ್ ಅಡ್ಮಿರಲ್  ಶ್ರೀ ಹರಿಲಾಲ್ ಶರ್ಮಾ ನಿಧನ

1971 ರ ಯುದ್ಧದಲ್ಲಿ ಪಶ್ಚಿಮ ಮತ್ತು ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ) ನಡುವಿನ ಸಂಪರ್ಕವನ್ನು ಕಡಿತಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದ ವೈಸ್ ಅಡ್ಮಿರಲ್ ಶ್ರೀ ಹರಿಲಾಲ್ ಶರ್ಮಾ ಅವರು ಸೋಮವಾರ ಒಡಿಶಾದ ಭುವನೇಶ್ವರದಲ್ಲಿ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು.

ಡಿಸೆಂಬರ್ 5 ರಂದು ತಮ್ಮ 99 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಶರ್ಮಾ ಅವರು 1965 ರ ಪಾಕಿಸ್ತಾನದೊಂದಿಗೆ ಯುದ್ಧ ಮತ್ತು ಎರಡನೇ ಮಹಾಯುದ್ಧದಲ್ಲಿ ಸಹ ಹೋರಾಡಿದ್ದರು. ಪರಮ ವಿಶಿಷ್ಟ ಸೇವಾ ಪದಕ ಪುರಸ್ಕೃತ, ಅವರು 1971 ರಲ್ಲಿ ವಿಶಾಖಪಟ್ಟಣಂ ಬಳಿ PNS ಘಾಜಿ ಎಂಬ ಪಾಕಿಸ್ತಾನದ ಜಲಾಂತರ್ಗಾಮಿ ನೌಕೆಯನ್ನು ನಾಶಪಡಿಸಿದಾಗ INS ರಜಪೂತ್ ಹಡಗಿನಲ್ಲಿದ್ದರು.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶರ್ಮಾ ಅವರಿಗೆ  ಒಡಿಶಾದ ಸುಪ್ರಸಿದ್ಧ ಪುತ್ರರಲ್ಲಿ ಒಬ್ಬರು ಎಂದು ಗೌರವ ಸಲ್ಲಿಸಿದ್ದಾರೆ. “ಒಡಿಶಾದ ಸುಪ್ರಸಿದ್ಧ ಪುತ್ರರಲ್ಲಿ ಒಬ್ಬರಾದ ವೈಸ್ ಅಡ್ಮಿರಲ್ ಎಸ್ ಎಚ್ ಶರ್ಮಾ, ಪಿವಿಎಸ್‌ಎಂ ಅವರ ನಿಧನದ ಬಗ್ಗೆ ತಿಳಿದು ತೀವ್ರ ದುಃಖವಾಗಿದೆ. ಭಾರತವು ಹೋರಾಡಿದ ಅನೇಕ ಯುದ್ಧಗಳಲ್ಲಿ  ಮುಂದೆ ನಿಂತು ಸೈನ್ಯವನ್ನ ಮುನ್ನಡೆಸಿದ್ದಾರೆ. ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಕೊರೊನಾ ಸೋಂಕು

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd