ಸಮೀಕ್ಷೆ ಏನೇ ಹೇಳಿದ್ರೂ ಗೆಲುವು ನಮ್ಮದೇ : ಸಿದ್ದರಾಮಯ್ಯ
ಬೆಂಗಳೂರು : ರಾಜರಾಜೇಶ್ವರಿ ನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಜಯ ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಚುನಾವಣೋತ್ತ ಸಮೀಕ್ಷೆಗಳು ಏನೇ ಹೇಳಿದರು ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಭರವಸೆ ಇದೆ.
ನಾನು ಎರಡೂ ಕಡೆ ಪ್ರಚಾರ ಮಾಡಿದ್ದೇನೆ, ಎರಡೂ ಕಡೆ ನಾವು ಗೆಲ್ಲಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಹಾರದಲ್ಲಿ ಲಾಲು ಮತ್ತು ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.
ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರ್ಪಡೆ
ನನಗೂ ಮಹಾಘಟಬಂಧನ ಗೆಲ್ಲುತ್ತದೆ ಎಂದು ಅನಿಸಿದೆ ಎಂದ ಸಿದ್ದರಾಮಯ್ಯ, ಯುವಕರು ಲಾಲೂ ಪುತ್ರ ತೇಜಸ್ವಿ ಯಾದವ್ ಮಗನ ಕಾರ್ಯಕ್ರಮಗಳಲ್ಲಿ ಭಾಗವಹಿಸ್ತಿದ್ದರು. ತೇಜಸ್ವಿ ಯಾದವ್ ಆಯೋಜಿಸಿದ್ದ ಸಭೆಗಳು ದೊಡ್ಡದಾಗಿ ನಡೆಯುತ್ತಿದ್ದವು.
ನಿತೀಶ್ ಕುಮಾರ್ ಅವರ ಸಭೆಗಳೂ ಇಷ್ಟು ದೊಡ್ಡದಾಗಿ ನಡೆಯುತ್ತಿರಲಿಲ್ಲ, ಬಿಹಾರದಲ್ಲಿ ಈ ಸಲ ಜನ ಬದಲಾವಣೆ ಮಾಡಬಹುದು ಎಂದು ಹೇಳಿದ್ದಾರೆ.
ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಬಿಜೆಪಿಗೆ ತೋಳು ತಟ್ಟಿ ಸವಾಲ್ ಹಾಕಿದ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಶಾಸಕರ ಕೆಲಸ ಜನಸೇವೆ, ಕುಸ್ತಿಯಲ್ಲ.
ಸಿ.ಟಿ ರವಿ ರಾಜೀನಾಮೆ ಅಂಗೀಕಾರ; ವರಿಷ್ಠರ ಭೇಟಿಗೆ ದಿಲ್ಲಿಗೆ ದೌಡು..!
ಭೀಮಾ ನಾಯ್ಕ್ ತೋಳು ತಟ್ಟಿದರೆ ಅದು ತಪ್ಪು. ನಮ್ಮ ಶಾಸಕ ಅಂತ ನಾವು ಸಮರ್ಥನೆ ಮಾಡುವುದಿಲ್ಲ. ಒಂದು ವೇಳೆ ಭೀಮಾನಾಯ್ಕ್ ಹಾಗೆ ಮಾಡಿದರೆ ಅದು ತಪ್ಪು ಎಂದು ಹೇಳಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel