ಆಫ್ರಿಕಾ ವಿರುದ್ಧ ಜಯ | ಚೇತೇಶ್ವರ್ ಪೂಜಾರ ‘ನಾಟು’ ಡ್ಯಾನ್ಸ್

1 min read
Cheteshwar Pujara saaksha tv

ಆಫ್ರಿಕಾ ವಿರುದ್ಧ ಜಯ | ಚೇತೇಶ್ವರ್ ಪೂಜಾರ ‘ನಾಟು’ ಡ್ಯಾನ್ಸ್  Cheteshwar Pujara

ಸೆಂಚುರಿಯನ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಮರಣೀಯ ಗೆಲುವು ದಾಖಲಿಸಿದೆ.

ದಕ್ಷಿಣ ಆಫ್ರಿಕಾ 305 ರನ್‌ಗಳ ಟಾರ್ಗೆಟ್ ನೊಂದಿಗೆ ಮೈದಾನಕ್ಕಿಳಿದ ದಕ್ಷಿಣ ಆಫ್ರಿಕಾ ತಂಡ  191 ರನ್‌ಗಳಿಗೆ ಆಲೌಟ್ ಆಗಿದ್ದು, ಟೀಂ ಇಂಡಿಯಾ 113 ರನ್‌ಗಳ ಜಯ ಸಾಧಿಸಿದೆ.

ಈ ಮೂಲಕ ಮೂರು ಟೆಸ್ಟ್‌ಗಳ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಪಂದ್ಯದ ಗೆಲುವಿನ ನಂತರ ಹೋಟೆಲ್ ಕೊಠಡಿಗೆ ತೆರಳುವ ಮಾರ್ಗದಲ್ಲಿ ಟೀಂ ಇಂಡಿಯಾ ಆಟಗಾರರು ಕುಳಿದು ಕುಪ್ಪಳಿದ್ದಾರೆ.

ಪೂಜಾರ, ಸಿರಾಜ್ ಹಾಗೂ ಇತರ ಆಟಗಾರರು ಭರ್ಜರಿ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.

ವಿಶೇಷವಾಗಿ ಲೆಗ್ ಶೇಕಿಂಗ್ ನೃತ್ಯದೊಂದಿಗೆ ಈ ಆಟಗಾರರು ಸಕತ್ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

‘‘ಪಂದ್ಯದ ಗೆಲುವಿನ ನಂತರ ನಮ್ಮ ಸಂಭ್ರಮಾಚರಣೆಯ ಫೋಟೋಗಳು ನೀರಸವಾಗಿ ಕಂಡವು. ಆದರೆ ನಂತರ ಪೂಜಾರ ಚಮತ್ಕಾರ ಮಾಡಿದರು.

ಪೂಜಾರ ಡ್ಯಾನ್ಸ್ ಮಾಡುವುದನ್ನು ನಾವು ಇಲ್ಲಿಯವರೆಗೆ ನೋಡಿಲ್ಲ. ನಮ್ಮ ಆಸೆಯಂತೆ ಪೂಜಾರ ಮೊದಲ ಬಾರಿಗೆ ನಮ್ಮೊಂದಿಗೆ ನೃತ್ಯ ಮಾಡಿದರು.

ಪೂಜಾರ ಡ್ಯಾನ್ಸ್‌ನಲ್ಲಿ ಸಿರಾಜ್‌ ಅವರದ್ದು ಅಗ್ರಸ್ಥಾನ.. ಇದು ನಿಜಕ್ಕೂ ದೊಡ್ಡ ಯಶಸ್ಸು” ಎಂದು ಅಶ್ವಿನ್ ಶೀರ್ಷಿಕೆ ಕೊಟ್ಟಿದ್ದಾರೆ.

ಇನ್ನು ಮೊದಲ ಪಂದ್ಯದಲ್ಲಿ  ಪೂಜಾರ ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದರು. ಮೊದಲ ಇನ್ನಿಂಗ್ಸ್ ನಲ್ಲಿ  ಗೋಲ್ಡನ್ ಡಕ್ ಆಗಿದ್ದ ಪೂಜಾರ ಎರಡನೇ ಇನ್ನಿಂಗ್ಸ್ ನಲ್ಲಿ 16 ರನ್ ಗಳಿಸಿದರು.

ಬೌಲಿಂಗ್ ನಲ್ಲಿ ಸಿರಾಜ್ ಮೂರು ವಿಕೆಟ್ ಪಡೆದರು. ಎರಡನೇ ಇನಿಂಗ್ಸ್ ನಲ್ಲಿ ಅಶ್ವಿನ್ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟರು. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಜನವರಿ 3-7 ರಿಂದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd