ಅಯ್ಯೋ ಮಾಟಗಾತಿ ಮಾತಿನಲ್ಲೇ ಮಾಡಿದಿಯಲ್ಲೇ ಮಾಟ..!!?
ಉತ್ತರಾಖಂಡ್ : ಮಹಿಳೆಯೋರ್ವಳು ಮಾಟಾಮಂತ್ರ ಮಾಡಿರುವ ಶಂಕೆ ಮೇರೆಗೆ ಜನರು ಥಳಿಸಿರುವ ಘಟನೆ ಉತ್ತರಾಖಂಡ್ನ ಹರಿದ್ವಾರ ಜಿಲ್ಲೆಯ ಮಂಗಳೂರು ಕೊತ್ವಾಲಿ ಸಮೀಪದ ಲಿಬರಹೇಡಿ ಗ್ರಾಮದಲ್ಲಿ ನಡೆದಿದೆ.
ಮಹಳೆಯನ್ನು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಯನ್ನು ಥಳಿಸಿದ ಜನರು ಆಕೆಯನ್ನು ಮತ್ತೆ ಗ್ರಾಮದ ಕಡೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಮನೆಯೊಂದಕ್ಕೆ ಅಪರಿಚಿತ ಮಹಿಳೆ ಆಗಮಿಸಿದ್ದಾಳೆ. ನಂತರ ಮನೆಯ ಮಾಲಕಿಯನ್ನು ಪರಿಚಯ ಮಾಡಿಕೊಂಡ ಮಹಿಳೆ ಅವರೊಂದಿಗೆ ಮಾತನ್ನು ಆರಂಭಿಸಿದ್ದಾಳೆ. ಸ್ವಲ್ಪ ಸಮಯದ ನಂತರ ಮನೆ ಮಾಲಕಿ, ಮಹಿಳೆಯೊಂದಿಗೆ ಮಾತನಾಡುತ್ತಾ ಆರೋಗ್ಯದಲ್ಲಿ ಹದಗೆಟ್ಟಿದೆ. ಅಷ್ಟರಲ್ಲಿ ಸಂಬಂಧಿಕರು ಮನೆಗೆ ಬಂದಿದ್ದಾರೆ. ಇದೇ ವೇಳೆ ಮನೆ ಒಡತಿಯ ಆರೋಗ್ಯ ಹದಗೆಟ್ಟಿದ್ದನ್ನು ಕಂಡು ಸಂಬಂಧಿಕರು ದಿಗ್ಭ್ರಮೆಗೊಂಡಿದ್ದಾರೆ. ಆಗ ಮನೆಯಲ್ಲಿದ್ದ ಅಪರಿಚಿತ ಮಹಿಳೆಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.
ನಂತರ ಅನುಮಾನಗೊಂಡು ಆಕೆ ಜೊತೆಯಲ್ಲಿದ್ದ ಚೀಲವನ್ನು ಪರಿಶೀಲಿಸಿದ್ದಾರೆ. ಆ ಚೀಲದಲ್ಲಿ ಪ್ರಾಣಿಯೊಂದರ ಮೂಳೆ ಪತ್ತೆಯಾಗಿದೆ. ಇದರಿಂದ ಮನೆಯವರು ಭಯಗೊಂಡು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಆಗ ಗ್ರಾಮಸ್ಥರು ಮಹಿಳೆಯನ್ನು ಹಿಡಿದು ಥಳಿಸಿದ್ದಾರೆ. ಮತ್ತೆ ಗ್ರಾಮದ ಕಡೆ ತಲೆ ಹಾಕಬೇಡ ಎಂದು ಮಹಿಳೆಗೆ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ. ಈ ಬಗ್ಗೆ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.








