* ಅಪಘಾತವಾಗಿ ಎರಡು ಗಂಟೆಯಾದ್ರೋ ಮರಣೋತ್ತರ ಪರೀಕ್ಷೆ ನಡೆಸದ ವೈದ್ಯರು
* ಘಟನೆ ತನಿಖೆಗೆ ಸಮಿತಿ ರಚನೆ ಮಾಡಿದ ವೈದ್ಯಾಧಿಕಾರಿ
ಲಕ್ನೋ: ಸರ್ಕಾರಿ ಆಸ್ಪತ್ರೆಯಲ್ಲಿ ಸ್ಟ್ರೆಚರ್ ಮೇಲೆ ಇರಿಸಲಾದ ಬಾಲಕಿಯ ಮೃತದೇಹವನ್ನು ನಾಯಿ ಎಳೆದು ತಿನ್ನುತ್ತಿರುವ ಹೃದಯ ವಿದ್ರಾವಕ ದೃಷ್ಯ ಉತ್ತರಪ್ರದೇಶದ ಸಂಭಲ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಅಪಘಾತವೊಂದರಲ್ಲಿ ಮೃತಪಟ್ಟ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಸಂಭಲ್ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಸ್ಪ್ರೆಚರ್‍ನಲ್ಲಿ ಇರಿಸಿ ಮೃತದೇಹವನ್ನು ಆಸ್ಪತ್ರೆಯ ಮೆಟ್ಟಿಲ ಬಳಿ ಸಿಬ್ಬಂದಿ ಬಿಟ್ಟು ಹೋಗಿದ್ದಾರೆ.

ಇದೇ ವೇಳೆ ಬೀದಿನಾಯಿಯೊಂದು ಸ್ಟ್ರೆಚರ್ ಮೇಲಿನ ಮೃತದೇಹವನ್ನು ನಾಯಿಯೊಂದು ಎಳೆಯುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಈ ಘಟನೆಯನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿದ್ದಾನೆ. ಇದು ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯವನ್ನು ಬಹಿರಂಗಗೊಳಿಸಿದೆ.
ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ದೇವಸ್ಥಾನಳಂತೆ. ಆದ್ರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಬಗ್ಗೆ ದಿನನಿತ್ಯ ಸಾವಿರಾರು ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಅವು ಕೇವಲ ಆರೋಪಗಳಾಗಿಯೇ ಉಳಿದು ಬಿಡುತ್ತವೆಯೇ ಹೊರತು ಆರೋಪ ಸಾಬೀತಾಗಿ ಶಿಕ್ಷೆಯಾದ ಪ್ರಕರಣಗಳು ತುಂಬಾ ವಿರಳ. ಒಂದು ವೇಳೆ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಕಾನೂನು ಹೋರಾಟ ಮಾಡಲು ಬಡವರಿಗೆ ಎಲ್ಲಿಂದ ಸಾಧ್ಯ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಹೆಣಗಾಡುವ ಬಡವರು ಕಾನೂನು ಹೋರಾಟ ಮಾಡಿ ಶಿಕ್ಷೆ ಕೊಡಿಸುವುದು ಸಾಧ್ಯವೇ ಇಲ್ಲದ ಮಾತು. ಹೀಗಾಗಿ ದೇಶಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮಾಮೂಲಾಗಿ ಹೋಗಿದೆ.

ಆಸ್ಪತ್ರೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ
ಅಪಘಾತದಲ್ಲಿ ಬಾಲಕಿಯನ್ನು ಕಳೆದುಕೊಂಡ ತಂದೆ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಳು. ನಂತರ ಮೃತದೇಹವನ್ನು ಮೃಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ತರಲಾಗಿತ್ತು. ಎರಡು ಗಂಟೆಯಾದರೂ ಆಸ್ಪತ್ರೆಯ ಯಾವ ಒಬ್ಬ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಗಂಟೆಗಳು ಕಳೆದೂ ಬಾಲಕಿ ಮೃತ ದೇಹವನ್ನು ಮುಟ್ಟಲೇ ಇಲ್ಲ. ಹೀಗೇನೂ ಆಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಸುಳ್ಳು ಹೇಳುತ್ತಿದ್ದಾರೆ. ಅವರು ಸುಳ್ಳು ಹೇಳುತ್ತಿರುವುದಕ್ಕೆ ಈ ವಿಡಿಯೋ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ ಎಂದು ಮೃತ ಬಾಲಕಿ ತಂದೆ ಆರೋಪಿಸಿದ್ದಾರೆ.
ಘಟನೆ ತನಿಖೆಗೆ ಸಮಿತಿ ರಚನೆ
ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಆಕ್ರೋಶ ಹೆಚ್ಚುತ್ತಿದ್ದಂತೆ ಎಚ್ಚೆತ್ತ ಸಂಭಲ್ ಆಸ್ಪತ್ರೆ ಮುಖ್ಯ ವೈದ್ಯಕೀಯ ಅಧಿಕಾರಿ ಅಮಿತಾ ಸಿಂಗ್ ತನಿಖೆಗೆ ಆದೇಶ ನೀಡಿದ್ದಾರೆ.
ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದೆ. ತನಿಖೆಯಲ್ಲಿ ತಪ್ಪಾಗಿರುವುದು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ನಡೆದಿತ್ತು ಇಂತಹದ್ದೇ ಘಟನೆ…
ಉತ್ತರ ಪ್ರದೇಶದ ಸಂಭಲ್ ನಡೆದ ಇಂತಹದ್ದೇ ಘಟನೆ ಕಳೆದ ಮೇ ತಿಂಗಳಲ್ಲಿ ಉತ್ತರ ಪ್ರದೇಶದ ಆಗ್ರಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿತ್ತು. ಕ್ಯಾನ್ಸರ್‍ನಿಂದ ಮೃತಪಟ್ಟ 40 ವರ್ಷದ ಮಹಿಳೆಯ ಶವವನ್ನು ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸದೇ ಹಾಗೆಯೇ ಸ್ಟ್ರೆಚರ್‍ನಲ್ಲಿ ಬಿಟ್ಟು ಹೋಗಿದ್ದರು. ಪರಿಣಾಮ ನಾಲ್ಕು ದಿನಗಳ ನಂತರ ಮೃತ ಮಹಿಳೆ ಪತಿ ಶವದ ಮೇಲಿದ್ದ ಬಟ್ಟೆ ತೆಗೆದು ನೋಡಿದಾಗ ದೇಹವನ್ನು ಇಲಿ, ಹೆಗ್ಗಣಗಳು ತಿಂದು ಹಾಕಿದ್ದವು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








