ಜೆಡಿಎಸ್ ಪಕ್ಷವನ್ನ ಸೋಲಿಸಲು ಎಲ್ಲಾ ಪಕ್ಷಗಳಿಂದ ಷಡ್ಯಂತ್ರ : ಅಪ್ಪಾಜಿ ಗೌಡ mandya saaksha tv
ಮಂಡ್ಯ : ಜೆಡಿಎಸ್ ಪಕ್ಷವನ್ನ ಸೋಲಿಸಲು ಎಲ್ಲಾ ಪಕ್ಷಗಳು ಷಡ್ಯಂತ್ರ ಮಾಡಿದ್ರು. ಬಿಜೆಪಿನವರು ಕೊನೆ ಕ್ಷಣದಲ್ಲಿ ಕಣದಿಂದ ನಿವೃತ್ತಿಯಾದ್ರು.
ಬಿಜೆಪಿ, ಕಾಂಗ್ರೆಸ್, ರೈತ ಸಂಘ ಒಟ್ಟಾಗಿ ಜೆಡಿಎಸ್ ಪಕ್ಷವನ್ನು ಸೋಲಿಸಿದ್ರು ಎಂದು ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡ ದೂರಿದ್ದಾರೆ.
ಇಂದು ಪರಿಷತ್ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಮಂಡ್ಯದಲ್ಲಿ ಜೆಡಿಎಸ್ ಸೋಲುಂಡಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಾಜಿ ಗೌಡ,
ಈ ಸೋಲಿಗೆ ನಮ್ಮ ಅತಿಯಾದ ಆತ್ಮವಿಶ್ವಾಸ ಕಾರಣವಾಗಿದೆ. ಬಿಜೆಪಿಯ ಮತ ಆ ಪಕ್ಷಕ್ಕೆ ಹೋಗಿದ್ದಕ್ಕೆ ನಮಗೆ ಹಿನ್ನಡೆಯಾಯ್ತು.
ನಾನು ಯಾರನ್ನ ಹೊಣೆ ಮಾಡಲ್ಲ. ಬಿಜೆಪಿ ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾಗಿದ್ದು ಜೆಡಿಎಸ್ ಸೋಲಿಗೆ ಕಾರಣ ಎಂದಿದ್ದಾರೆ.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರ ಮಂಡ್ಯದಲ್ಲಿ ನಾವು ಹೋರಾಟ ಮಾಡೇ ಮಾಡ್ತಿವಿ ಅಂದ್ರು.
ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರು ಸೇರಿದಂತೆ ಹಲವು ನಾಯಕರು ಒಟ್ಟಿಗೆ ಸೇರಿ ಜೆಡಿಎಸ್ ಪಕ್ಷವನ್ನ ಸೋಲಿಸಲೇಬೇಕೆಂದು ನಿರ್ಧರಿಸಿ ಕೊನೆ ಗಳಿಗೆಯಲ್ಲಿ ಸೋಲಿಸಿದರು ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.









