ವಿಜಯ್ ದೇವರಕೊಂಡಗೆ ಹೆಚ್ಚಾದ ದುರಹಂಕಾರ – ಬೇಸತ್ತ ನಿರ್ದೇಶಕರು..!
ಟಾಲಿವುಡ್ ನ ಇಮ್ರಾನ್ ಹಸ್ಮಿ , ತರೆಲುಗಿನ ಸೆನ್ಷೇಷನ್ ಸ್ಟಾರ್ ಅಂತಲೇ ಖ್ಯಾತಿ ಪಡೆದಿರುವ ವಿಜಯ್ ದೇವರಕೊಂಡ ಸ್ಟಾರ್ ನಟರ ಪೈಕಿ ಒಬ್ಬರಾಗಿದ್ದು, ದೇವರಕೊಂಡ ಅವರಿಗೆ ಆಫರ್ ಗಳಿಗೇನೂ ಕಡಿಮೆಯಿಲ್ಲ.. ಪ್ರಸ್ತುತ ಪುರಿ ಜಗನ್ನಾಥ್ ಸಾರಥ್ಯದ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ನಲ್ಲಿ ಬ್ಯುಸಿಯಾಗಿದ್ದಾರೆ.. ಆದ್ರೆ ಇದೀಗ ವಿಜಯ್ ದೇವರಕೊಂಡಗೆ ದುರಾಸೆ ಹೆಚ್ಚಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿದ್ದು, ನಿರ್ದೇಶಕರು ವಿಜಯ್ ದೇವರಕೊಂಡ ಅತಿಯಾದ ಬೇಡಿಕೆಯಿಂದಾಗಿ ಬೇಸತ್ತು ಹೋಗಿದ್ದಾರೆ.. ದೇವರಕೊಂಡ ಬೆಳೆದಂತೆಲ್ಲಾ , ಅಭಿಮಾನಿಗಳ ಬಳಗ ಹೆಚ್ಚಾದಂತೆಲ್ಲಾ ದುರಹಂಕಾರವೂ ಹೆಚ್ಚಾಗಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ..
ಹೌದು.. ಬೇಡಿಕೆ ಹೆಚ್ಚಾಗುತ್ತಿದ್ದಂತೆ , ಸಂಭಾವನೆ, ಚಿತ್ರದ ಕಥೆ, ಮೇಕಿಂಗ್ ಹೀಗೆ ಪ್ರತಿಯೊಂದು ವಿಚಾರಗಳಲ್ಲೂ ಹೀಗೆ ಇರಬೇಕು, ಹಾಗೆ ಇರಬೇಕು ಎನ್ನುವ ಒತ್ತಡ ಹೇರುತ್ತಿರುತ್ತಾರೆ ಎನ್ನಲಾಗ್ತಿದೆ. ಪ್ಯಾನ್ ಇಂಡಿಯಾ ಸಿನಿಮಾವೇ ಆಗ್ಬೇಕು ಅನ್ನೋ ಬೇಡಿಕೆ ಪ್ರಮುಖವಾದದ್ದು ಎನ್ನಲಾಗ್ತಿದೆ. ಮುಂದೆ ಪುಷ್ಪ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕುಮಾರ್ ಜೊತೆಗೆ ದೇವರಕೊಂಡ ಸಿನಿಮಾ ಮಾಡಲಿದ್ದಾರೆ ಎನ್ನಲಾಗ್ತಿದೆ..
ಈ ನಡುವೆ ಜೊತೆ ಮಾಡುತ್ತಿರುವ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುವ ಸಾಧ್ಯತೆ ಇದ್ದು ದೊಡ್ಡ ಮಟ್ಟದಲ್ಲಿ ಸಿನಿಮಾ ಮೂಡಿಬರಲಿದೆ. ಆದರೆ ವಿಜಯ್ ಗೆ ನಿರ್ದೇಶಕ ಶಿವ ನಿರ್ವಾಣ ಜೊತೆ ಮಾಡುತ್ತಿರುವ ಸಿನಿಮಾದ ಬಗ್ಗೆ ಅಷ್ಟು ನಿರೀಕ್ಷೆ ಇಲ್ಲ. ಹಾಗಾಗಿ ಶಿವ ನಿರ್ದೇಶನದ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಂತೆ ವಿಜಯ್ ದೇವರಕೊಂಡ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.

ಅಲ್ಲದೆ ಚಿತ್ರತಂಡದ ಜೊತೆ ಒಂದೊಂದೇ ಬೇಡಿಕೆ ಇಡುತ್ತಿದ್ದಾರೆ. ಮೊದಲು ಚಿತ್ರದ ಕಥೆ ಬದಲಾಯಿಸುವಂತೆ ಶಿವ ಅವರಿಗೆ ಹೇಳಿದ್ದಂತೆ. ವಿಜಯ್ ದೇವರಕೊಂಡ ಹೇಳಿದ ಹಾಗೆ ಕಥೆಯಲ್ಲಿ ಕೊಂಚ ಬದಲಾವಣೆಯನ್ನು ಮಾಡಿದರು ನಿರ್ದೇಶಕ ಶಿವ. ಆದರೆ ಅದು ಕೂಡ ವಿಜಯ್ ದೇವರಕೊಂಡಗೆ ತೃಪ್ತಿ ನೀಡುತ್ತಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಕಥೆ ಬದಲಾವಣೆಯ ಜೊತೆಗೆ ಚಿತ್ರದ ಬಜೆಟ್ ಜಾಸ್ತಿ ಮಾಡುವಂತೆಯೂ ಒತ್ತಾಯ ಮಾಡುತ್ತಿದ್ದಾರಂತೆ. ಆರಂಭದಲ್ಲಿ ವಿಜಯ್ ದೇವರಕೊಂಡ ಮಾತನ್ನು ಒಪ್ಪಿಕೊಳ್ಳುತ್ತಿದ್ದ ನಿರ್ದೇಶಕ ಶಿವ ಕಥೆಯನ್ನು ಬದಲಾಯಿಸಿದ್ದಾರಂತೆ.
ಆದರೀಗ ದೊಡ್ಡ ಬದಲಾವಣೆ ಮಾಡುವಂತೆ ಹೇಳುತ್ತಿದ್ದಾರಂತೆ. ಇದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ. ಸದ್ಯ ವಿಜಯ್ ಬೇಡಿಕೆಯನ್ನು ಈಡೇರಿಸಲು ಚಿತ್ರತಂಡ ಹಿಂದೇಟು ಹಾಕಿದೆ ಎನ್ನುವ ಮಾತು ಕೇಳಿಬರುತ್ತಿದ. ವಿಜಯ್ ದೇವರಕೊಂಡ ಬಜೆಟ್ ಕಥೆ ಹಾಗೂ ಪ್ಯಾನ್ ಇಂಡಿಯಾ ಬೇಡಿಕೆಯಿಗೆ ಬೇಸರಗೊಂಡು ಈ ಪ್ರಾಜೆಕ್ಟ್ ಕೈ ಬಿಡುವ ಬಗ್ಗೆ ಸಿನಿಮಾ ತಂಡ ಯೋಚನೆ ಮಾಡಿದೆ ಎನ್ನಲಾಗ್ತಿದೆ.
ಬಾಲಿವುಡ್ ನ ಖ್ಯಾತ ನಿರ್ಮಾಪಕ ಫಿಜಾ ಖ್ಯಾತಿಯ ಪ್ರದೀಪ್ ಗುಹಾ ನಿಧನ
ಅಂದ್ಹಾಗೆ ವಿಜಯ್ ದೇವರಕೊಂಡ ನಟನೆ ಜೊತೆಗೆ ವಿವಾದಗಳಿಂದಲೇ ಹೆಚ್ಚು ಫೇಮಸ್ ಆಗಿರುತ್ತಾರೆ.. ಕಿಸ್ಸಿಂಗ್ ಸೀನ್ಸ್ ಗಾಗಿ ಟಾಲಿವುಡ್ ನ ಇಮ್ರಾನ್ ಹಸ್ಮಿ ಎನಿಸಿಕೊಂಡಿರುವ ವಿಜಯ್ ಅಭಿನಯz ಗೀತಾ ಗೀವಿಂದಂ ಸಿನಿಮಾ ಬಗ್ಗೆ ಹೇಳೋ ಅವಶ್ಯಕತೆಯೇ ಇಲ್ಲ.. ಇದೇ ಸಿನಿಮಾ ವೇಳೆ ನಟಿ ರಶ್ಮಿಕಾ ಜೊತೆಗೆ ಸೆನ್ಷೇಶನಲ್ ಸೀನ್ ಗಳಿಂದಾಗಿ ರಶ್ಮಿಕಾ ರಕ್ಷಿತ್ ಶೆಟ್ಟಿ ಎಂಗೇಜ್ ಮೆಂಟ್ ಮುರಿದುಬಿದ್ದಿತ್ತು.. ನಂತರ ಅವರ ಬ್ರೇಕ್ ಅಪ್ ಗೆ ಕಾರಣ ದೇವರಕೊಂಡ ಎಂದೇ ಇಲ್ಲಿಯವರೆಗೂ ಜನ ಮಾತನಾಡುತ್ತಾರೆ.. ಅಲ್ಲದೇ ರಶ್ಮಿಕಾ ರೂಮರ್ಡ್ ಬಾಯ್ ಫ್ರೆಂಡ್ ಎನಿಸಿಕೊಂಡಿರುವ ದೇವರಕೊಂಡ ಆಗಾಗ ರಶ್ಮಿಕಾ ಜೊತೆಗೆ ಕಾಣಿಸಿಕೊಳ್ತಾ ಇರುತ್ತಾ ಟ್ರೋಲ್ ಆಗ್ತಾ ಇರುತ್ತಾರೆ..








