ಮದ್ಯದ ದೊರೆ ವಿಜಯ್ ಮಲ್ಯ ಜೀವನಾಧಾರಿತ ವೆಬ್ ಸೀರೀಸ್…! ಮಲ್ಯ ಪಾತ್ರ ಮಾಡುವುದು ಯಾರು..?
ಮದ್ಯದ ದೊರೆ ವಿಜಯ್ ಮಲ್ಯ ಸದ್ಯ ವಿಶ್ವಮಟ್ಟಕ್ಕೆ ಪರಿಚಯವಾಗಿರುವ ಉದ್ಯಮಿ.. ಭಾರತದ ಬ್ಯಾಂಕುಗಳಿಂದ ಕೋಟಿ ಕೋಟಿ ಸಾಲ ಪಡೆದು, ಸಾಲ ತೀರಿಸಲಾಗದೇ ವಿದೇಶಕ್ಕೆ ಹಾರಿರುವ ವಿಜಯ್ ಮಲ್ಯ ಕಿಂಗ್ ಪಿಶರ್ ಕಂಪನಿಯ ಒಡೆಯ..
ಭಾರತದ ಬ್ಯಾಂಕ್ ನಲ್ಲಿ ಸಸುಮಾರು 9000 ಕ್ಕೂ ಅಧಿಕ ಕೋಟಿ ಸಾಲ ಪಡೆದು ಬ್ರಿಟನ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ವಿರುದ್ಧ ನ್ಯಾಯಾಂಗ ನಿಂಧನೆ ಸೇರಿದಂತೆ ಅನೇಕ ಪ್ರಕರಣಗಳಿದ್ದು, ಬ್ರಿಟನ್ ನಿಂದ ಮಲ್ಯನನ್ನ ಗಡಿಪಾರು ಮಾಡಿಸಿ ಭಾರತಕ್ಕೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಎಲ್ಲ ಸಾಧ್ಯ ತಂತ್ರಗಳನ್ನ ಉಪಯೋಗಿಸ್ತಿದೆ..
ಭಾತರದ ಸ್ಟಾರ್ ನಟರ ಸಿನಿಮಾಗಳ ರೆಕಾರ್ಡ್ ಮುರಿದ ‘ಸ್ಪೈಡರ್ ಮ್ಯಾನ್’..!
ಇದೇ ವಿಜಯ್ ಮಲ್ಯರ ಜೀವನಾಧಾರಿತ ಸಿನಿಮಾದ ವಿಚಾರ ಆಗಾಗ ಭಾರೀ ಸದ್ದು ಮಾಡ್ತಿರುತ್ತೆ.. ಈಗಲೂ ಅಂತಹದ್ದೇ ವದಂತಿ ಭಾರೀ ಸದ್ದು ಮಾಡ್ತಿದೆ.. ವಿಜಯ್ ಮಲ್ಯ ಜೀವನಾಧಾರಿತ ವೆಬ್ ಸೀರೀಸ್ ಬರುವ ಬಗ್ಗೆ ಮತ್ತೊಮ್ಮೆ ಚರ್ಚೆಯಾಗ್ತಿದೆ.. ಮೋಜು ಮಸ್ತಿ ಐಶಾರಾಮಿ ಜೀವನದ ಜೊತೆಗೆ ಇವರು ದಿವಾಳಿಯಾದ ವರೆಗಿನ ಇವರ ಬದುಕಿನ ಜರ್ನಿಯನ್ನ ವೆಬ್ ಸಿರೀಸ್ ರೂಪಕ್ಕೆ ತರುವ ಕೆಲಸವಾಗ್ತಿದೆ ಎನ್ನಲಾಗಿದೆ..
ಸದ್ಯ ಪ್ರೀ ಪ್ರೊಡಕ್ಷನ್ ಕೆಲಸ ಮುಗಿದಿದೆ. ಲೇಖಕ ಕೆ ಗಿರಿ ಪ್ರಕಾಶ್ ಬರೆದ ‘ದಿ ವಿಜಯ್ ಮಲ್ಯ ಸ್ಟೋರಿ’ ಆಧರಿಸಿ ಈ ವೆಬ್ ಸಿರೀಸ್ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದೆ. ಇನ್ನೂ ಮೂಲಗಳ ಪ್ರಕಾರ ವಿಜಯ್ ಮಲ್ಯ ಜೀವನಾಧಾರಿತ ವೆಬ್ ಸೀರಿಸ್ ನಲ್ಲಿ ಮಲ್ಯ ಪಾತ್ರಕ್ಕೆ ಗೋವಿಂದ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ..