ವಿಜಯ್ ಮಲ್ಯ ಶೇರುಗಳ ಮಾರಾಟ ಮಾಡಿ 792.11 ಕೋಟಿ ರೂ.ವಸೂಲಿ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ನವದೆಹಲಿ : ದೇಶದ ಬ್ಯಾಂಕ್ ಗೆ ಕೋಟಿ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಶೇರುಗಳನ್ನು ಮಾರಾಟ ಮಾಡುವ ಮೂಲಕ 792.11 ಕೋಟಿ ರೂ.ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್ಗಳ ಸಮೂಹವು ವಸೂಲಿ ಮಾಡಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯವು ತಿಳಿಸಿದೆ. ಈಗ ನಿಷ್ಕ್ರಿಯವಾಗಿರುವ ಕಿಂಗ್ ಫಿಶರ್ ಏರ್ಲೈನ್ಸ್ ನ ಶೇರುಗಳನ್ನು ಬ್ಯಾಂಕ್ ಗಳ ಸಮೂಹವು ಜಾರಿ ನಿರ್ದೇಶನಾಲಯದಿಂದ ಸ್ವೀಕರಿಸಿವೆ ಎಂದು ವರದಿಗಳು ತಿಳಿಸಿವೆ.
ಆಗಸ್ಟ್ ಅಂತ್ಯ ಕೋವಿಡ್ 3ನೇ ಅಲೆ ಸಾಧ್ಯತೆ: ಐಸಿಎಂಆರ್ ಎಚ್ಚರಿಕೆ
ಎಸ್ಬಿಐ ಸೇರಿದಂತೆ ಭಾರತದ ವಿವಿಧ ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಮರುಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ವಿಜಯ್ ಮಲ್ಯ ವಿರುದ್ಧ ಬ್ಯಾಂಕ್ಗಳ ಗುಂಪು 2018ರ ಡಿಸೆಂಬರ್ನಲ್ಲಿ ದಿವಾಳಿತನದ ಕಾನೂನುನಡಾವಳಿಗಳನ್ನು ಆರಂಭಿಸಿತ್ತು. ವಂಚನೆ ಹಾಗೂ ಕಪ್ಪು ಹಣ ಬಿಳುಪು ಆರೋಪಗಳನ್ನು ಎದುರಿಸುತ್ತಿರುವ ವಿಜಯ್ ,ಲ್ಯ ಪ್ರಸಕ್ತ ಬ್ರಿಟನ್ನಲ್ಲಿ ವಾಸವಾಗಿದ್ದಾರೆ. ತನ್ನನ್ನು ಭಾರತಕ್ಕೆ ಗಡಿಪಾರು ಮಾಡುವ ವಿರುದ್ಧದ ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.