ಆಗಸ್ಟ್ ಅಂತ್ಯ ಕೋವಿಡ್ 3ನೇ ಅಲೆ ಸಾಧ್ಯತೆ: ಐಸಿಎಂಆರ್ ಎಚ್ಚರಿಕೆ
ನವದೆಹಲಿ: ಭಾರತ ದೇಶದಲ್ಲಿ ಕೋವಿಡ್-19 ಮೂರನೇ ಅಲೆಯು ಆಗಸ್ಟ್ ಅಂತ್ಯದ ವೇಳೆಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಸಿದೆ.
ಮೂರನೇ ಅಲೆಯು ದೇಶವ್ಯಾಪಿ ಇರಲಿದೆ. ಆದರೆ, ಎರಡನೇ ಅಲೆಯಷ್ಟು ತೀವ್ರವಾಗಿ ಇರುವುದಿಲ್ಲ ಎಂದು ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸಮೀರನ್ ಪಂಡಾ ಹೇಳಿದ್ದಾರೆ.
38,949 ಹೊಸ ಪ್ರಕರಣ: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 38,949 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 542 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇದರೊಂದಿಗೆ ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಸಂಖ್ಯೆ 3,10,26,829ಗೆ ತಲುಪಿದ್ದು, ಸಾವಿನ ಸಂಖ್ಯೆ 4,12,531ಕ್ಕೆ ತಲುಪಿದೆ. 3,01,83,876 ಸೋಂಕಿತರು ಗುಣಮುಖರಾಗಿದ್ದು, ಇನ್ನೂ 4,30,422 ಸಕ್ರಿಯ ಪ್ರಕರಣಗಳಿವೆ.