ವಿಜಯ್ ಸೇತುಪತಿಗೆ ಕೋರ್ಟ್ ಗೆ ಹಾಜರಾಗಲು ಗಡುವು ಕೊಟ್ಟ ಕೋರ್ಟ್..!
ಚೆನ್ನೈ : ಬಹುಭಾಷಾ ನಟ ವಿಜಯ್ ಸೇತುಪತಿ ಅವರು ತಮ್ಮ ವಿಭಿನ್ನ ಮ್ಯಾನರಿಸಂ ನಿಂದಲೇ ಸಾಕಷ್ಟು ಅಭಿಮಾನಿಗಳನ್ನ ಗಳಿಸಿದ್ದಾರೆ.. ಸೇತುಪತಿ ವಿಲ್ಲನ್ ಗೂ ಸೈ , ಹೀರೋಗೂ ಸೈ.. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಸೇತುಪತಿ ಬ್ಯುಸಿಯಿದ್ದಾರೆ.. ಆದ್ರೆ ಈಗ ಪ್ರಕರಣವೊಂದರ ಸಂಬಂಧ ಕೋರ್ಟ್ ಮೆಟ್ಟಿಲೇರಬೇಕಾದ ಅನಿವಾರ್ಯತೆ ಬಂದಿದೆ..
ಹೌದು… ನಟ ವಿಜಯ್ ಸೇತುಪತಿ ಬೆಂಗಳೂರಿಗೆ ಬಂದಾಗ ಅವರ ತಂಡ ಮತ್ತು ಅಪರಿಚಿತ ವ್ಯಕ್ತಿಯ ನಡುವೆ ಜಗಳವಾಗಿತ್ತು.. ಜಗಳದ ವೀಡಿಯೋ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು. ಈ ವಿಡೀಯೊದಲ್ಲಿ ವ್ಯಕ್ತಿ ಒಬ್ಬ ವಿಜಯ್ ಸೇತುಪತಿ ತಂಡದ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದು ಕಂಡುಬಂದಿತ್ತು.. ಅಲ್ಲದೇ ಆತನನ್ನ ಬಂಧಿಸಲಾಗಿತ್ತು ಕೂಡ.. ಆದ್ರೀಗ ಈ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿರುವಂತೆ ಕಾಣ್ತಿದೆ.. ಹಲ್ಲೆಯ ಆರೋಪ ಹೊತ್ತಿರುವ ವ್ಯಕ್ತಿ ಮಹಾಗಾಂಧಿ ಎಂಬಾತ ಈ ವಿಚಾರವಾಗಿ ಕೋರ್ಟ್ ಮೊರೆ ಹೋಗಿದ್ದಾನೆ.
‘ಮದಗಜ’ದ ಬಜೆಟ್ 25 ಕೋಟಿ ರೂಪಾಯಿ : ಗಳಿಸಿದ್ದೆಷ್ಟು…?
ಮಹಾಗಾಂಧಿ ವಿಜಯ್ ಸೇತುಪತಿ ಮತ್ತು ಅವರ ವ್ಯವಸ್ಥಾಪಕ ಜಾನ್ ಮೇಲೆ ದೂರು ದಾಖಲಿಸಿದ್ದಾನೆ. ಇದು ನಟ ವಿಜಯ್ ಸೇತುಪತಿ ಮತ್ತು ಅವರ ಮ್ಯಾನೇಜರ್ ಗೆ ತಲೆನೋವಾಗಿ ಪರಿಣಮಿಸಿದೆ.. ಹೌದು.. ತಮಿಳುನಾಡಿನ ಸೈದಾಪೇಟ್ ನ್ಯಾಯಾಲಯವು ವಿಜಯ್ ಸೇತುಪತಿ ಮತ್ತವರ ಮ್ಯಾನೇಜರ್ ಜಾನ್ ಸನ್ ಗೆ ಸಮನ್ಸ್ ಜಾರಿಮಾಡಿದೆ.. ಮಾಹಾಗಾಂಧಿ ನೀಡಿದ ದೂರಿನ ಆಧಾರದ ಮೇಲೆ ಸಮನ್ಸ್ ಜಾರಿ ಮಾಡಲಾಗಿದೆ.. ಈ ದೂರಿನಲ್ಲಿ ವಿಜಯ್ ಸೇತುಪತಿ ತಂಡ ಹಲ್ಲೆ ನಡೆಸಿರೋದಾಗಿ ಮಹಾಗಾಂಧಿ ಉಲ್ಲೇಖಿದ್ದಾರೆ.. ಸಮನ್ಸ್ ಜಾರಿ ಮಾಡಿ, ಜನವರಿ – 4 -2022 ರೊಳಗೆ ನ್ಯಾಯಾಲಯಕ್ಕೆ ಹಾಜರಾಜುವಂತೆಯೂ ಆದೇಶಿಸಲಾಗಿದೆ..
ಸದ್ಯ ಮಹಾಗಾಂಧಿ ವಿಜಯ್ ಸೇತುಪತಿ ಅವರಿಗೆ ಶುಭಾಶಯ ತಿಳಿಸಲು ಮುಂದಾಗಿದ್ದಾಗ ವಿಜಯ್ ಸೇತುಪತಿ ತಂಡ ಕೊಂಕು ಮಾತನಾಡಿದ್ದರು ಎನ್ನಲಾಗಿದೆ.. ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಮೇಲೆ ವಿಜಯ್ ಸೇತುಪತಿ ಮ್ಯಾನೇಜರ್ ಜಾನ್ ಸನ್ ಹಲ್ಲೆ ನಡೆಸಿದ್ದರು ಎಂದು ಮಹಾಗಾಂಧಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.. ಇದೇ ಸಂಬಂಧ ಮಹಾಗಾಂಧಿ ಸೇತುಪತಿ ಟೀಮ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹಾಗಾಗಿ ಕೋರ್ಟ್ ವಿಜಯ್ ಸೇತುಪತಿ ಮತ್ತು ಮ್ಯಾನೇಜರ್ ಜಾನ್ಸನ್ಗೆ ಸಮನ್ಸ್ ಜಾರಿ ಮಾಡಿ, ಕೋರ್ಟ್ಗೆ ಹಾಜರಾಗುವಂತೆ ಸೂಚಿಸಿದೆ.
ಮಯಾಂಕ್ ಅಗರ್ ವಾಲ್ ಕನ್ನಡದ ಈ ಇಬ್ಬರು ನಟರ ಅಭಿಮಾನಿಯಂತೆ..!








