ಪ್ರೀತಿ ಹಾಗೂ ಖುಷಿಯಿಂದ ಬದುಕುತ್ತಿದ್ದ ಜೋಡಿಯ ಮೇಲೆ ಅದ್ಯಾವ ಕೆಟ್ಟ ದೃಷ್ಟಿಯ ಕಣ್ಣು ಬಿತ್ತೋ ಏನೋ? ಈ ಜೋಡಿ ಅಗಲಿದಂತಾಯಿತು. ಈಗ ಈ ದೃಶ್ಯ ನೋಡಿದವರ ಪ್ರತಿಯೊಬ್ಬರ ಕರುಳು ಹಿಂಡಿದಂತಾಗುತ್ತಿದೆ. ಪ್ರತಿಯೊಬ್ಬರು ಕಣ್ಣೀರಿನಲ್ಲಿ ಮುಳುಗುತ್ತಿದ್ದಾರೆ.
ವಾರದ ಹಿಂದೆಯಷ್ಟೇ ಸಂಭ್ರಮದಿಂದ ಮನೆಯಿಂದ ಹೊರಗೆ ಹೋಗಿದ್ದ ಸ್ಪಂದನಾ (Spandana) ಈಗ ಶವವಾಗಿ ಮನೆಗೆ ಮರಳಿದ್ದಾರೆ. ಬ್ಯಾಂಕಾಕ್ ಗೆ ಪ್ರವಾಸಕ್ಕೆಂದು ಹೋಗಿದ್ದ ಪತ್ನಿಯನ್ನು ಶವವಾಗಿ ಮನೆಗೆ ಕರೆತಂದಿದ್ದಾರೆ ವಿಜಯ ರಾಘವೇಂದ್ರ. ಪತ್ನಿಯ ಅಂತಿಮ ದರ್ಶನಕ್ಕೆ ವಿಜಯ ರಾಘವೇಂದ್ರ (Vijay Raghavendra) ತಾಯಿಯನ್ನು ಕರೆತಂದಿದ್ದಾರೆ. ಆ ದೃಶ್ಯ ಅಲ್ಲಿದ್ದವರು ಕಣ್ಣೀರ ಸಾಗರದಲ್ಲಿ ಮುಳುಗವಂತೆ ಮಾಡಿದೆ.
ಶ್ರೀಮುರಳಿ ಮತ್ತು ವಿಜಯ ರಾಘವೇಂದ್ರ, ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ತಾಯಿಗೆ ಮಾಡಿಸಿದರು. ಸೊಸೆ ಕಂಡ ಅತ್ತೆ ಕೆಲ ಕ್ಷಣ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಎರಡು ದಿನದಿಂದ ಸೊಸೆಯ ಮುಖ ನೋಡಲು ಕಾಯುತ್ತಿದ್ದ ಅತ್ತೆ, ಸೊಸೆಯ ಮುಖ ಕಾಣುತ್ತಿದ್ದಂತೆಯೇ ಒದ್ದಾಡಿದ್ದಾರೆ.







