ವಿಜಯಪುರ | ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ
ವಿಜಯಪುರ : ಆರು ದಿನಗಳಿಂದ ಹಿಂದೆ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದಲ್ಲಿ ನಡೆದಿದೆ. 12 ವರ್ಷ ಅರುಣ್ ಭಜಂತ್ರಿ ಮೃತ ಬಾಲಕನಾಗಿದ್ದಾನೆ.
ಬಾಲಕ ಅರುಣ್ ಕಳೆದ ಡಿಸೆಂಬರ್ 21 ರಂದು ಮನೆಯಿಂದ ಕಾಣೆಯಾಗಿದ್ದ. ಈ ಸಂಬಂಧ ಡಿಸೆಂಬರ್ 23 ರಂದು ಮನಗೂಳಿ ಪೊಲೀಸ್ ಠಾಣೆಯಲ್ಲಿ ಪೋಷಕರು ಪ್ರಕರಣ ದಾಖಲಿಸಿದ್ದರು.
ಪೊಲೀಸರು ಕೂಡ ಬಾಲಕನಿಗಾಗಿ ಹುಡುಕಾಟ ಶುರು ಮಾಡಿದ್ದರು. ಆದ್ರೆ ಇಂದು ಯರನಾಳ ಗ್ರಾಮದಲ್ಲಿರುವ ಕೆರೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








