Vijayapura | ನೋಡ ನೋಡುತ್ತಲೇ ಕುಸಿದ ಸೇತುವೆ
ವಿಜಯಪುರ : ಭಾರಿ ಮಳೆಗೆ ನೋಡ ನೋಡುತ್ತಲೇ ಹಳ್ಳದಲ್ಲಿ ಸೇತುವೆ ಕುಸಿದಿರುವ ಘಟನೆ ತಾಳಿಕೋಟೆ ತಾಲೂಕಿನ ಸೋಗಲಿ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ.
ಹಳ್ಳದಲ್ಲಿ ಸೇತುವೆ ಕುಸಿಯುತ್ತಿರುವ ದೃಶ್ಯಾವಳಿಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಸೋಗಲಿ ಮೂಕಿಹಾಳ ಮಧ್ಯದ ಸೇತುವೆ ಇದಾಗಿದ್ದು, ಭಾರಿ ಮಳೆಗೆ ಕುಸಿದು ಬಿದ್ದಿದೆ.
ಸೇತುವೆ ಕುಸಿದ ಕಾರಣ, ಸೋಗಲಿ ಹಾಗೂ ಸುತ್ತಮುತ್ತಲ ಗ್ರಾಮಗಳ ಸಂಪರ್ಕ್ ಬಂದ್ ಆಗಿದೆ.
ತಾಳಿಕೋಟೆ ಪಟ್ಟಣದ ಸಂಪರ್ಕ ಕಡಿದುಕೊಂಡ ಜನರು ಪರದಾಡುವಂತಾಗಿದೆ.