Vijayapura : ಲಂಚಕ್ಕಾಗಿ ಅಬಕಾರಿ ಇನ್ಸ್ಪೆಕ್ಟರ್ ಅವಾಜ್…
ವಿಜಯಪುರ ಜಿಲ್ಲಾ ಅಬಕಾರಿ ಅಧಿಕಾಕರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟರುವ ಡೀಲ್ ವಿಡಿಯೋವೊಂದು ವೈರಲ್ ಆಗಿದೆ, ಡಿ ಸಿ ಗೆ ಕೊಡ್ತೀರಾ ಜೆ ಸಿ ಗೆ ಕೊಡ್ತೀರಾ ನನ್ನದೇಕಿಲ್ಲ, ಯಾರ್ದು ಕೊಡ್ತೀರೋ ಬಿಡ್ತಿರೋ..ನನ್ನದಂತೂ ಬೇಕು ಎಂದು ಬಾರ್ ಮಾಲಿಕರಿಗೆ ಇನ್ಸ್ಪೆಕ್ಟರ್ ಜ್ಯೋತಿ ಮೇತ್ರಿ ಅವಾಜ್ ಹಾಕಿದ್ದಾರೆ.
ಬಾರ್ ಮಾಲೀಕರ ಜತೆ ಜ್ಯೋತಿ ಅವರು ಮಾತನಾಡುತ್ತಿರುವ ಆಡಿಯೋ ಇದಾಗಿದ್ದು, ವಿಜಯಪುರ, ಸಿಂದಗಿ, ಇಂಡಿ ಮುಗೀತು. ಜೆಸಿಗೂ ಆಯ್ತು, ನನ್ನದೊಂದೇ ಯಾಕೆ ಇಷ್ಟು ಕಾಡ್ತಿದ್ದೀರಿ ಎಂದು ಅಧಿಕಾರಿ ಜ್ಯೋತಿ ಹೇಳಿದ್ದಾರೆ.
ನಾಲ್ಕು ತಾಲೂಕಿನಿಂದ ತಗೊಂಡಿನಿ, ವಿಜಯಪುರ ಒಂದೇ ಬಾಕಿ. ದೊಡ್ಡ ಮನಸ್ಸು ಮಾಡಿದ್ದೀರಿ. ಅಧಿಕಾರಿ 2 ತಿಂಗಳದ್ದು ಕೊಟ್ಟು ಮುಗಿಸಿ. ಮುಂದಿನ ಸಲ ಯಾವ ಡೇಟ್‌ಗೆ ಮಾಡೋಣ ಎಂದಿದ್ದಾರೆ. ಬಾರ್ ಮಾಲೀಕರು ಎಲ್ಲ ರೊಕ್ಕ ತಂದು ಕೊಡ್ತೀವಿ ಎಂದಿದ್ಧಾರೆ. ವಿಜಯಪುರ ಜಿಲ್ಲೆಯಲ್ಲಿ ಜ್ಯೋತಿ ವಿಡಿಯೋ ಭಾರೀ ವೈರಲ್ ಆಗಿದೆ.
Vijayapura: Excise Inspector Awaj for Bribery…