Vijayapura ವಿಜಯಪುರ : ಹೊಲದಲ್ಲಿ ಮಲಗಿದ್ದ ಯುವಕನ ಬರ್ಬರ ಹತ್ಯೆ
ವಿಜಯಪುರ : ಹೊಲದಲ್ಲಿ ಮಲಗಿದ್ದ ಯುವಕನನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದಲ್ಲಿ ನಡೆದಿದೆ.
ಸಿದ್ಧಾರೂಢ ಬಂಡಗಾರ್ (22) ಕೊಲೆಯಾದ ಯುವಕನಾಗಿದ್ದಾನೆ.
ರಾಶಿಯಾಗಿದ್ದ ಈರುಳ್ಳಿ ಕಾಯಲು ಹೊಲದಲ್ಲಿ ಮಲಗಿದ್ದ ವೇಳೆ ಯುವಕನ ಹತ್ಯೆ ಮಾಡಲಾಗಿದೆ.
ಸ್ಥಳಕ್ಕೆ ಎ.ಎಸ್ಪಿ ರಾಮ ಅರಸಿದ್ಧಿ, ಡಿವೈಎಸ್ಪಿ ಶ್ರೀಧರ ದೊಡ್ಡಿ ಭೇಟಿ ನೀಡಿದ್ದು, ಸ್ಥಳದಲ್ಲಿ ಶ್ವಾನದಳದಿಂದ ಪರಿಶೀಲನೆ ಮುಂದುವರಿದಿದೆ.
