ಕಲಬುರಗಿ : ನಮ್ಮ ಪಕ್ಷದಲ್ಲಿ ಅಸಮಾಧಾನ ಇರುವುದು ಸತ್ಯ, ಹಾಗಾಗಿ ಕೆಲ ಅಸಮಾಧಾನಿತ ಶಾಸಕರು ಸೇರಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಇಂದು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ಸತ್ಯ ಇದೆ ಕಾರಣಕ್ಕಾಗಿ ಕೆಲವರು ಸಭೆ ಸಹ ಸೇರಿದ್ದಾರೆ. ನೇರವಾಗಿ ಹೇಳುತ್ತೇನೆ ಕೆಲವು ಶಾಸಕರಲ್ಲಿ ಅಸಮಾಧಾನ ಇದೆ. ನಮ್ಮ ನಾಯಕರು ಕೂತು ಮಾತಾಡಿ ಅಸಮಾಧಾನವನ್ನು ಬಗೆಹರಿಸುತ್ತಾರೆ. ಯಾರು ಸನ್ಯಾಸಿಗಳಲ್ಲ ಸ್ಥಾನ ಮಾನ ಕೇಳೋದು ಸಹಜ. ನಮ್ಮ ಸರಕಾರ ಮೂರೂ ವರ್ಷ ಅವಧಿ ಪೂರ್ಣಗೊಳಿಸೋದು ಪಕ್ಕ.
ಇದೆ ವೇಳೆ ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಸಚಿವ ಕೆ.ಎಸ್. ಈಶ್ವರಪ್ಪ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ, ಅವರ ಮಗ ಶಾಸಕ ಅಲ್ಲದೆ ಇದ್ರೂ ಮೈಸೂರಲ್ಲಿ ಸರಕಾರಿ ಕಾರು ತಗೊಂಡು ಸಭೆ ನಡೆಸಿದರೂ, ಆಗ ಸಿದ್ದರಾಮಯ್ಯ ಕುರುಡಾಗಿದ್ದರಾ ? ಮೊದಲು ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಲಿ . ಸಿದ್ದರಾಮಯ್ಯ ಯತಿಂದ್ರಾ ಅನ್ನೋ ಬದಲು ವಿಜಯೇಂದ್ರ ಅಂದಿರಾಬಹುದು ಎಂದು ವ್ಯಂಗ್ಯ ಮಾಡಿದ್ದರು.








