ವಿಜಯಪುರ: ವಿಜಯೇಂದ್ರ ನನ್ನನ್ನು ಭೇಟಿ ಮಾಡುವ ನಾಟಕ ಮಾಡುವುದು ಬೇಡ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ (Basanagouda Patil Yatnal), ವಿಜಯೇಂದ್ರ ಬಂದು ಭೇಟಿ ಮಾಡುವ ನಾಟಕ ಮಾಡುವುದು ಬೇಡ. ಎಲ್ಲ ಸರಿಯಾಗಿದೆ ಎಂದು ಹೇಳಿ ಹೋಗುವುದು ಬೇಡ. ವಿಜಯೇಂದ್ರ ನನಗೆ ಅಡೆತಡೆ ಮಡಿದ್ದಾರೆ ಎಂಬುವುದು ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಮೊದಲು ಮಾಡುವುದೆಲ್ಲ ಮಾಡಿ, ಈಗ ಸರಿ ಮಾಡುವುದು ಬೇಡ. ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಾ ನಿರ್ಧಾರವಾಗುತ್ತದೆ ಎಂದು ಹೇಳಿದ್ದಾರೆ.