ಫ್ಯಾಂಟಮ್ ಸ್ಯಾಂಡಲ್ ವುಡ್ ನ ಬಾದ್ ಷಾ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಿನಿಮಾ ಖ್ಯಾತಿಯ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ. ಈಗಾಗಲೇ ಸಿನಿಮಾದ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಅದರಲ್ಲಿ ಸುದೀಪ್ ಅರ್ಧ ಫೇಸ್, ಮೊನಚು ಮೀಸೆಗೆ ಕಿಚ್ಚನ ಅಭಿಮಾನಿಗಳು ಕಳೆದೋಗಿದ್ದಾರೆ. ಇದರ ಮಧ್ಯೆ ಇಂದು ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಫ್ಯಾಂಟಮ್ ಚಿತ್ರದ ಚಿಕ್ಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದರಲ್ಲಿ ಬೈಕ್ ನಲ್ಲಿ ಬರುವ ಸುದೀಪ್, ಟಾರ್ಚ್ ಹಿಡಿದು ಏನನ್ನೋ ಹುಡುಕುತ್ತಾ ಕತ್ತಲು ಕವಿದ ಕಾಡಿನೊಳಗಡೆ ಹೋಗೋದನ್ನು ನಾವು ಕಾಣಬಹುದು. ಈ ದೃಶ್ಯದ ಹಿನ್ನೆಲೆ ಕೂಡ ಸಖತ್ ಕ್ಯಾಚಿಯಾಗಿದೆ.
Just a raw footage. Yet,,here it is my frnzz,,,
A Sneak-Peek into,,#TheWorldOfPhantom pic.twitter.com/zpjwuop1Ip— Kichcha Sudeepa (@KicchaSudeep) July 24, 2020
ಇನ್ನು ವಿಡಿಯೋ ರಿಲೀಸ್ ಮಾಡುವ ಬಗ್ಗೆ ಇಂದು ಮಧ್ಯಾಹ್ನ ಟ್ವೀಟ್ ಮಾಡಿದ್ದ ಸುದೀಪ್, ಗುರುವಾರ ಚಿತ್ರೀಕರಣಗೊಂಡ ಒಂದು ಸಣ್ಣ ದೃಶ್ಯವನ್ನು ಇನ್ನೇನು ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದೆ ಹಂಚಿಕೊಳ್ಳಲಿದ್ದೇನೆ. ಈ ವಿಡಿಯೋ ನಿಮ್ಮನ್ನು ಫ್ಯಾಂಟಮ್ ಎಂಬ ಜಗತ್ತಿಗೆ ಕರೆದುಕೊಂಡು ಹೋಗುತ್ತದೆ ಎಂದು ಹೇಳಿದ್ದರು.








