Vikranth Rona – ಅಂಕುಡೊಂಕು ದಾರಿಯಲ್ಲಿ ಬಂದ ವಿಕ್ರಾಂತ್ ರೋಣ ಫಕೀರ ಸಾಂಗ್…
ಕರ್ನಾಟಕದ ಮತ್ತೊಂದು ಪ್ಯಾನ್ ಇಂಡಿಯಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ನಿರೂಪ್ ಭಂಡಾರಿ ಪ್ರಮುಖ ಪಾತ್ರದಲ್ಲಿ ನಟಿಸುವ ಫಕೀರ ಹಾಡು ಇಂದು ಬಿಡುಗಡೆಯಾಗಿದೆ.
ನಿರೂಪ್ ಭಂಡಾರಿ ಇಲ್ಲಿ ಸಂಜು ಹೆಸರಿನ ಪಾತ್ರ ಮಾಡುತ್ತಿದ್ದು, ಸಂಜು ಪಾತ್ರವನ್ನ ವರ್ಣಿಸುವ ರೀತಿಯಲ್ಲಿ ಹಾಡು ಬಿಡುಗಡೆಯಾಗಿದೆ. ಅಂಕುಡೋಂಕು ಎಂದು ಶುರವಾಗುವ ಹಾಡಿಗೆ ಸಂಜಿತ್ ಹೆಗ್ಡೆ ಚಿನ್ಮಯಿ ಶ್ರೀಪಾದ್ ಬಿ ಅಜನೀಶ್ ಲೋಕನಾಥ್, ಅನುಪ್ ಭಂಡಾರಿ ಧ್ವನಿ ನೀಡಿದ್ದಾರೆ.
ವಿಕ್ರಾಂತ್ ರೋಣಾ ಚಿತ್ರದ ಈಗಾಗಲೇ ಬಿಡುಗಡೆಯಾಗಿರುವ ರಾರಾ ರಕ್ಕಮ್ಮ ಮತ್ತು ರಾಜಕುಮಾರಿ ಲಾಲಿ ಹಾಡುಗಳು ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ. ವಿಕ್ರಾಂತ್ ರೋಣಾ ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ಎಲ್ಲಾ ಭಾಷೆಗಳಿಂದ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ಜುಲೈ 28 ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ.