Viral
ಮಧ್ಯಪ್ರದೇಶ: ಇದುವರೆಗೂ ಪ್ರೀತಿಸಿದವರು ಓಡಿ ಹೋಗಿ ಮದುವೆ ಆಗಿರೋದು, ಮನೆಯವರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರೋದು, ಅದು ಆಗದೇ ಇದ್ರೆ ಮನೆಯವರು ತೋರಿಸಿದವರ ಜೊತೆ ಅನಿವಾರ್ಯವಾಗಿ ಮದ್ವೆಯಾಗಿರುವಂತಹ ಘಟನೆಗಳನ್ನ ನಾವು ನೋಡಿದ್ದೇವೆ. ಆದ್ರೆ ತಾನ ಇಷ್ಟ ಪಟ್ಟ ಹುಡುಗನ ಜೊತೆಗೆ ಮದುವೆ ಮಾಡಿಸಿ ಅಂತ ಅಪ್ರಾಪ್ತ ಬಾಲಕಿಯೊಬ್ಲು ಬ್ಯಾನರ್ ಏರಿ ಕುಳಿತ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಹೌದು… ಪ್ರೀತಿಸಿದವನ ಜತೆ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಬ್ಯಾನರ್ ಮೇಲೆ ರಾತ್ರಿ ವೇಳೆ ಹತ್ತಿ ಕುಳಿತ ಘಟನೆ ಮಧ್ಯ ಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ಈ ಘಟನೆ ಇದೀಗ ಭಾರಿ ವೈರಲ್ ಆಗಿದ್ದು, ಬಾಲಕಿ ಬ್ಯಾನರ್ ಹತ್ತಿ ಕುಳಿತಿರುವ ಫೋಟೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಫೇವರೇಟ್ ಫುಡ್ ಹೆಸರು ಕೇಳ್ತಿದ್ದಂತೆ ಕೋಮಾದಿಂದ ಆಚೆ ಬಂದ ಈ ಯುವಕ..!
ಈಕೆ ಓರ್ವ ಯುವಕನನ್ನ ಪ್ರೀತಿಸುತ್ತಿದ್ದು ಆತನ ಜೊತೆಗೆ ಮದುವೆ ಮಾಡಿಸಲು ಕುಟುಂಬಸ್ಥರು ಒಪ್ಪದ ಕಾರಣಕ್ಕೆ ಇಂತಹ ದುಸ್ಸಾಹಸಕ್ಕೆ ಕೈಹಾಕಿದ್ದಾಳೆ. ಇಂದೋರ್ನ ಭಂಡಾರಿ ಸೇತುವೆ ಬಳಿ ಅಳವಡಿಸಲಾಗಿರುವ ಬ್ಯಾನರ್ ಮೇಲೆ ಹತ್ತಿ ಕುಳಿತಿದ್ದಾಳೆ. ಇನ್ನೂ ಯಾರು ಎಷ್ಟೇ ಹೇಳಿದ್ರೂ ಯುವತಿ ಮಾತ್ರ ಕೆಳಗೆ ಇಳಿಯದೆ ಇದ್ದ ಹಿನ್ನೆಲೆ ಮನೆಯವರು ಆಕೆಯ ಹಟಕ್ಕೆ ತಲೆ ಬಾಗಲೇಬೇಕಾಯ್ತು. ಬಳಿಕ ಆಕೆಯ ಪ್ರಿಯಕರನನ್ನೇ ಕರೆಸಿ ಮಾತನಾಡಿಸಿದ್ದಾರೆ. ಆತ ಮಾತನಾಡಿ ಮನವೊಲಿಸಿದ ಬಳಿಕ ಆಕೆ ಕೆಳಕ್ಕೆ ಬಂದಿದ್ದಾಳಂತೆ. ಸದ್ಯ ಯುವತಿಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.
Viral
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel