OMG….. ಆರ್ಡರ್ ಮಾಡಿದ್ದು ‘ಆಪಲ್’ ಪುಣ್ಯಾತ್ಮನಿಗೆ ಸಿಕ್ಕಿದ್ದು ಐಫೋನ್..! ಇದುನ್ನೇ ಅದೃಷ್ಟ ಅನ್ನೋದು..!
ಇಂಗ್ಲೆಂಡ್ : ಆನ್ ಲೈನ್ ಕೆಲವೊಮ್ಮೆ ಐಫೋನ್ ಹಾಗೂ ಅನೆಕ ವಸ್ತುಗಳ ಆರ್ಡರ್ ಮಾಡಿದ್ರೆ ಅದರ ಬದಲಿಗೆ ಬೇರೆ ವಸ್ತುಗಳು ಬಂದಿರುವಂತಹ ವಂಚನೆ ಪ್ರಕರಣಗಳನ್ನ ನೋಡಿದ್ದೇವೆ. ಆದ್ರೆ ಇಂಗ್ಲೆಂಡ್ ನಲ್ಲಿ 50 ವರ್ಷದ ನಿಕ್ ಜೇಮ್ಸ್ ಎಂಬ ವ್ಯಕ್ತಿ 1 ಕೆ ಜಿ ಆಪಲ್ ಆರ್ಡರ್ ಮಾಡಿದ್ದ. ಆದ್ರೆ ಆತನಿಗೆ ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಹೌದು ಆತನಿಗೆ ಆಪಲ್ ಏನೋ ಕಳುಹಿಸಿಕೊಟ್ಟಿದೆ. ಆದ್ರೆ ಅದ್ರ ಜೊತೆಗೆ ಆತನನ್ನ ಲಕ್ಕಿ ಕಸ್ಟಮರ್ ಆಗಿ ಆಯ್ದು ಐಫೋನ್ ಗಿಫ್ಟ್ ನೀಡಲಾಗಿದೆ.. ಸರ್ ನಿಮಗೊಂದು ಸರ್ಪ್ರೈಸ್ ಗಿಫ್ಟ್ ಇದೆ ನೋಡಿ ಎಂದು ಸಿಬ್ಬಂದಿ ಹೇಳಿದಾಗ ಬ್ಯಾಗ್ ತೆಗೆದು ನೋಡಿದ ಗ್ರಾಹಕ ದಂಗಾಗಿದ್ದಾನೆ..
ಟೆಸ್ಕೊ ಹಾಗೂ ಟೆಸ್ಕೊ ಮೊಬೈಲ್ ಕಂಪನಿ ವತಿಯಿಂದ ಈ ಗಿಪ್ಟ್ ಸಿಫ್ಟ್ ಸಿಕ್ಕಿದ್ದು, ಜೇಮ್ಸ್ ಫುಲ್ ಖುಷ್ ಆಗಿ ಟ್ವೀಟ್ ಮೂಲಕ ಕಂಪನಿಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. ಅಂದ್ಹಾಗೆ ಟೆಸ್ಕೋ ಮೊಬೈಲ್ ಪ್ರಚಾರದ ಭಾಗವಾಗಿ ಸೂಪರ್ ಮಾರ್ಕೆಟ್ ನಲ್ಲಿ ಈ ರೀತಿಯ ಆಫರ್ ಇಡಲಾಗಿದೆ. ಆಯ್ದ ಗ್ರಾಹಕರಿಗೆ ಉಚಿತವಾಗಿ ಐ ಫೋನ್, ಏರ್ಪೋಡ್ ಹಾಗೂ ಸ್ಯಾಮ್ಸಂಗ್ ನ ವಿವಿಧ ಸಾಧನಗಳು ಜೊತೆಗೆ ಇನ್ನೂ ಹಲವಾರು ಗಿಫ್ಟ್ ಗಳನ್ನ ನೀಡಲಾಗ್ತಿದೆ. ಈ ರೀತಿಯಾಗಿ ಗಿಫ್ಟ್ ಪಡೆದ ಲಕ್ಕಿ ಕಸ್ಟಮರ್ ಗಳಲ್ಲಿ ಜೇಮ್ಸ್ ಒಬ್ಬರಾಗಿದ್ದಾರೆ.








