ಟಾಪ್ 5 ವೈರಲ್ ಸುದ್ದಿಗಳು : ಇತ್ತೀಚೆಗಿನ ನ್ಯೂಸ್..!
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ಮಾಸ್ಕ್ ಧರಿಸದವರಿಗೆ ತಕ್ಕ ಪಾಠ ಕಲಿಸಿದ ಕಿಲಾಡಿ ಕುಳ್ಳ
ಕೊರೊನಾ ವ್ಯಾಕ್ಸಿನ ಬಂದ ಬಳಿಕ ಜನರು ಕೊರೊನಾ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಎಷ್ಟೋ ಮಂದಿ ಮಾಸ್ಕ್ ಧರಿಸದೇ ಅಸಡ್ಡೆ ತೋರಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ನ್ಯೂಯಾರ್ಕ್ ನಲ್ಲಿ ವ್ಯಕ್ತಿವೊಬ್ಬ ಸಖತ್ತಾಗಿಯೇ ಬುದ್ಧಿ ಕಲಿಸುತ್ತಿದ್ದಾನೆ. ಹೌದು..! ನ್ಯೂಯಾರ್ಕ್ ನ ರೈಲಿನಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ ವ್ಯಕ್ತಿಯೊಬ್ಬ ಚೌಕಿ ವೇಷಧರಿಸಿ ಕಿರುಕುಳ ನೀಡುವ ಮೂಲಕ ತಕ್ಕ ಪಾಠ ಕಲಿಸಿದ್ದಾನೆ.
ಮಗುವನ್ನ ರಕ್ಷಿಸಿದ ಬೆಕ್ಕು : ವಿಡಿಯೋ ವೈರಲ್
ನವದೆಹಲಿ : ಈಗಿನ್ನೂ ಅಂಬೆಗಾಲಿಡುವ ಮಗು ಬಾಲ್ಕನಿಯಲ್ಲಿದ್ದ ಕಂಬದ ಮೇಲೆ ಕೈ ಇಟ್ಟು ಇಣುಕಿ ನೋಡುತ್ತಿದ್ದಾಗ ಬೆಕ್ಕು ತಡೆದಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
ಬೆಕ್ಕಿನ ಕಾರ್ಯ ನೆಟ್ಟಿಜನ್ನರ ಮನಗೆದಿದ್ದು, ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಧಾ ರಾಮೆನ್ ಅವರು ಈ ವಿಡಿಯೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ” ಮಗುವೊಂದು ಬಾಲ್ಕನಿಯಲ್ಲಿ ನಿಂತು ಹೊರ ನೋಡಲು ಅಲ್ಲಿದ್ದ ಕಂಬಿಗಳನ್ನ ಹಿಡಿದು ಹತ್ತಲು ಪ್ರಯತ್ನಿಸುತ್ತಿದೆ.
ಜಲಪಾತದ ಅಂಚಿನಲ್ಲಿ ಬಿಕಿನಿ ಫೋಟೋಶೂಟ್ : ಇದೆಂಥಾ ಹುಚ್ಚಾಟ ಎಂದ ನೆಟ್ಟಿಗರು
ವಾಷಿಂಗ್ ಟನ್ : ಮಾಡೆಲ್ ಗಳನ್ನು ಅಂದ್ರೆ ಚಿತ್ರ ವಿಚಿತ್ರ ಫೋಟೋಶೂಟ್ ಗಳು ಸಾಮಾನ್ಯ. ವೆರೈಟಿ ಡ್ರಸ್ ಗಳಲ್ಲಿ ಹೊಸ ಹೊಸ ಸ್ಟಿಲ್ ಗಳಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುವುದು ಮಾಡೆಲ್ ಗಳ ವಾಡಿಕೆ. ಅಮೆರಿಕದ ಯುವ ಮಾಡೆಲ್ ಬಿಕಿನಿಯಲ್ಲಿ ತುಂಬಾ ಎತ್ತರದ ಪ್ರದೇಶದಿಂದ ಫೋಟೋಶೂಟ್ ಮಾಡಿಸಿದ್ದು, ನೆಟ್ಟಿಗರಿಗೆ ಆಹಾರವಾಗಿದೆ. ಪೆನ್ಸಿಲ್ವೇನಿಯಾದ 25 ವರ್ಷದ ಅಮೆರಿಜ್ ರೋಸ್ ಕಳೆದ ವರ್ಷ ಡಿಸೆಂಬರ್‍ನಲ್ಲಿ ಜಾಂಬಿಯಾಕ್ಕೆ ಹೋಗಿದ್ದರು. ಅಲ್ಲಿ ಅವರು ವಿಶ್ವದ ಅತಿ ಉದ್ದದ ವಿಕ್ಟೋರಿಯಾ ಜಲಪಾತಕ್ಕೆ ಭೇಟಿ ನೀಡಿದರು. ಡೆವಿಲ್ಸ್ ಪೂಲ್ ಎಂದೇ ಕರೆಯಲ್ಪಡುವ ಈ ಜಲಪಾತವನ್ನು ನೋಡಿ ಖುಷಿಪಟ್ಟ ಅಮೆರಿಜ್ ಅಲ್ಲಿ ಬಿಕಿನಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
Vedio : ಮೈನವಿರೇಳಿಸುತ್ತೆ ಹುಲಿಗಳ ನಡುವಿನ ಕಾಳಗ..!
ನವದೆಹಲಿ: ದಟ್ಟಾರಣ್ಯದಲ್ಲಿ 2 ಹುಲಿಗಳು ಕಾಳಗ ನಡೆಸುತ್ತಿರುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹುಲಿಗಳ ಕಾದಾಟ ನೋಡಿ ನೆಟ್ಟಿಗರು ರೋಮಾಂಚಿತರಾಗಿದ್ದಾರೆ. ಈ ವಿಡಿಯೋವನ್ನ ಭಾರತೀಯ ಅರಣ್ಯ ಸೇವಾ ಅಧಿಕಾರಿ (IFS) ಪರ್ವೀನ್ ಕಸ್ವಾನ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಹುಲಿಗಳ ವೈರಲ್ ವಿಡಿಯೋ ನೋಡಿ ನೆಟ್ಟಗರು ಫಿದಾ ಆಗಿದ್ದಾರೆ.
ವಿಡಿಯೊದಲ್ಲಿ ಎರಡು ಬಲಿಷ್ಠ ಹುಲಿಗಳು ಕಾಡಿನಲ್ಲಿ ಕೆಲ ದೂರ ಗಾಂಭೀರ್ಯದಿಂದ ನಡೆದುಕೊಂಡು ಹೋಗಿವೆ. ಇದಾದ ಸ್ವಲ್ಪದ್ರಲ್ಲೇ ಮಾರ್ಗ ಬದಲಿಸುವ ಒಂದು ಹುಲಿ ಮತ್ತೊಂದು ಹುಲಿ ಮೇಲೆ ಎರಗುತ್ತದೆ. ಸ್ವಲ್ಪ ಸಮಯ ಜಗಳದ ಬಳಿಕ ಎರಡೂ ಹುಲಿಗಳು ತಮ್ಮ ಪಾಡಿಗೆ ತಾವು ತೆರಳುತ್ತವೆ. ವಿಡಿಯೊವನ್ನು ಎಲ್ಲಿ ಮತ್ತು ಯಾವಾಗ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಬಂದಿಲ್ಲ.
video : ಹೆಡ್ ಫೋನ್ ಗುಂಗಲ್ಲಿದ್ದ ಮಹಿಳೆ ಮೇಲೆ ಹರಿದ ರೈಲು
ಕಿವಿಯಲ್ಲಿ ಹೆಡ್ ಪೋನ್ ಹಾಕಿಕೊಂಡು ರೈಲ್ವೆ ಹಳಿ ದಾಟುತ್ತಿದ್ದ ಆರೋಗ್ಯ ಕಾರ್ಯಕರ್ತೆ ಮೇಲೆ ರೈಲ್ವೆ ಹರಿದಿದೆ. ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಿವಿಯಲ್ಲಿ ಹೆಡ್ಫೋನ್ ಹಾಕಿಕೊಂಡು ಹಾಡು ಕೇಳುತ್ತಾ ರೈಲ್ವೆ ಹಳಿ ದಾಟಲು ಮುಂದಾಗಿದ್ದಾರೆ. ಈ ವೇಳೆ ಸೂಪರ್ ಫಾಸ್ಟ್ ರೈಲು ಬಂದಿದ್ದು ಅವರಿಗೆ ತಿಳಿದಿಲ್ಲ. ಅದನ್ನ ನೋಡಿ ಬೇಗ ಹೋಗಲು ಪ್ರಯತ್ನಿಸಿದ್ದಾರಾದರೂ ಅಷ್ಟರಲ್ಲೇ ಅವರ ಮೇಲೆ ಟ್ರೈನ್ ಹರಿದುಬಿಟ್ಟಿದೆ. ಈ ವಿಡಿಯೋದ ಭಯಾನಕ ದೃಶ್ಯದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ
ತನ್ನ ಗಂಡ ‘ಅವನಲ್ಲ ಅವಳು’ ಎಂದು ಗೊತ್ತಾಯ್ತು…. ಮುಂದೇನಾಯ್ತು..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel