ಕಣ್ಣಲ್ಲಿ ನೀರು ತರಿಸುತ್ತೆ ಈ ತಂದೆಯ ವಿಡಿಯೋ : ಟೆಡ್ಡಿಬೇರ್ ನಲ್ಲಿ ಮಗನ heart beat..!
ತನ್ನನ್ನ ಬಿಟ್ಟು ಸ್ವರ್ಗ ಸೇರಿರುವ ಮಗನ ಹಾರ್ಟ್ ಬೀಟ್ ಇರುವ ಟೆಡ್ಡಿಬೇರ್ ಗಿಫ್ಟ್ ಆಗಿ ಸ್ವೀಕರಿಸಿದ ತಂದೆ ಭಾವುಕರಾಗಿ ಕಣ್ಣೀರಿಟ್ಟಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ತಂದೆಯ ಕಣ್ಣೀರು ನೋಡಿ ನೆಟ್ಟಿಗರ ಕಣ್ಣಲ್ಲೂ ನೀರು ಜಾರಿದೆ. ನಿಮಗೆ ಒಳ್ಲೆಯದಾಗಲಿ ಸ್ವರ್ಗದಲ್ಲಿರುವ ನಿಮ್ಮ ಮಗನೂ ಚೆನ್ನಾಗಿರಲಿ ಅಂತ ನೆಟ್ಟಿಗರು ಈ ತಂದೆಗೆ ಹಾರೈಸುತ್ತಿದ್ದಾರೆ.
https://twitter.com/i/status/1343194944559788032
ಮಕ್ಕಳ ಅಶ್ಲೀಲ ವಿಡಿಯೋ : ಟಾರ್ಗೆಟ್ ಬಡಮಕ್ಕಳೇ..! ಜಾಲದ ಹಿಂದೆ ಇದ್ದ ಇಂಜಿನಿಯರ್ ಪತ್ನಿ ಸೆರೆ..!
ಮಗನ ಹೃದಯ ಬಡಿತವಿರುವ ಟೆಡ್ಡಿ ಬೇರ್ ಸ್ವೀಕರಿಸಿ ಭಾವುಕರಾದ ಈ ತಂದೆಯ ಹೆಸರು ರಾಬರ್ಟ್ ಒ’ಕಾನರ್ . ಇವರ 16 ವರ್ಷದ ವಯಸ್ಸಿನ ಮಗ ರಸ್ತೆ ಅಪಘಾತವೊಂದರಲ್ಲಿ ನಿಧನವಾದ ಬಳಿಕ ಆತನ ಅಂಗಾಂಗಗಳನ್ನು ದಾನ ಮಾಡಲಾಗಿತ್ತು. ಹುಡುಗನ ಹೃದಯ ಬಡಿತವನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ವಿಶೇಷವಾದ ಡಿವೈಸ್‌ನಲ್ಲಿ ಟೆಡ್ಡಿ ಬೇರ್ ಒಳಗೆ ಇಡಲಾಗಿದೆ.
ಸರ್ಕಾರಿ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್..!
ಈ ಗೊಂಬೆಯನ್ನು ಹೃದಯವನ್ನು ಕಸಿ ಮಾಡಿಸಿಕೊಂಡ ವ್ಯಕ್ತಿ ಆ ಹುಡುಗನ ತಂದೆಗೆ ಕಳುಹಿಸಿದ್ದಾರೆ. ಆ ಗಿಫ್ಟ್ ಸ್ವೀಕರಿಸಿರುವ ತಂದೆಯ ಭಾವುಕ ಕ್ಷಣವನ್ನ ಆತನ ಪತ್ನಿ ಸ್ಟೆಪಾನಿ ರೀಯ್ಡ್ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








