ಕ್ಯಾಬ್ ಚಾಲಕಿನಿಗೆ ನಡುರಸ್ತೆಯಲ್ಲೇ ಥಳಿಸಿದ್ದ ಯುವತಿಯ ಮತ್ತೊಂದು ಕಿರಿಕ್ – ವಿಡಿಯೋ ವೈರಲ್..!
ಲಕ್ನೋ : ಇತ್ತೀಚೆಗೆ ಉತ್ತರಪ್ರದೇಶದ ಲಕ್ನೋದಲ್ಲಿ ನಡುರಸ್ತೆಯಲ್ಲಿ ಕ್ಯಾಬ್ ಚಾಲಕನಿಗೆ ಥಳಿಸಿದ್ದ ಯುವತಿಯೊಬ್ಬಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು. ನೆಟ್ಟಿಗರು ಯುವತಿಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು.. ಅಲ್ಲದೇ ಯುವತಿ ವಿರುದ್ಧ FIR ಕೂಡ ದಾಖಲಾಗಿತ್ತು.. ಕ್ಯಾಬ್ ಡ್ರೈವರ್ಗೆ ಥಳಿಸಿದ ಪ್ರಕರಣದ ಅಡಿಯಲ್ಲಿ ಈಕೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಲಕ್ನೋ ಡಿಸಿಪಿ ಚಿರಂಜೀವಿನಾಥ್ ಸಿನ್ಹಾ, ಪುರುಷನಿಗೆ ಮಹಿಳೆಯು ಥಳಿಸುತ್ತಿರುವ ವೈರಲ್ ವಿಡಿಯೋ ಸಂಬಂಧ ನಾವಿಂದು ಆತನಿಂದ ದೂರನ್ನು ಸ್ವೀಕರಿಸಿದ್ದೇವೆ. ದೂರನ್ನು ಆಧರಿಸಿ ಕೃಷ್ಣ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದೀಗ ಇದರ ಬೆನ್ನಲ್ಲೇ ಇದೇ ಯುವತಿಯ ಮತ್ತೊಂದು ಕಿರಿಕ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಈಕೆ ನೆರೆಮನೆಯವರು ತಮ್ಮ ಗೋಡೆಗೆ ಕಪ್ಪು ಬಣ್ಣ ಬಳಿದಿದ್ದಾರೆ ಎಂಬ ವಿಚಾರವಾಗಿ ಆಕ್ರೋಶ ಹೊರಹಾಕುತ್ತಿದ್ದಾಳೆ. ಪ್ರಿಯದರ್ಶಿನಿ ನಾರಾಯಣ ಯಾದವ್ ಹೆಸರಿನ ಯುವತಿ ಈ ವೈರಲ್ ವಿಡಿಯೋದಲ್ಲಿ ಪೊಲೀಸರ ಬಳಿ ಹೋಗಿ ಕಪ್ಪು ಬಣ್ಣ ಬಳಿದಿರುವ ಗೋಡೆಯ ಪೇಂಟಿಂಗ್ನ್ನು ಬದಲಾಯಿಸುವಂತೆ ಹೇಳಿ. ಏಕೆಂದರೆ ಕಪ್ಪು ಬಣ್ಣವು ಅಂತಾರಾಷ್ಟ್ರೀಯ ಡ್ರೋಣ್ನ್ನು ಆಕರ್ಷಿಸುತ್ತದೆ ಎಂದು ಹೇಳಿದ್ದಾರೆ.
ಈ ವಿಡಿಯೋ ಹಳೆಯದಾಗಿದ್ದರೂ ಸಹ ಕ್ಯಾಬ್ ಡ್ರೈವರ್ ಮೇಲೆ ಪ್ರಿಯದರ್ಶಿನಿ ಹಲ್ಲೆ ನಡೆಸಿದ ಬಳಿಕ ಮತ್ತೊಮ್ಮೆ ವೈರಲ್ ಆಗಿದೆ. ಅಲ್ಲದೇ ನೆಟ್ಟಿಗರು ಈಕೆಯನ್ನು ಬಂಧಿಸುವಂತೆ ಕೂಡ ಆಗ್ರಹಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಪ್ರಿಯದರ್ಶಿನಿ ಪೊಲೀಸರ ಬಳಿ, ನೀವು ಇವರಿಗೆ ಗೋಡೆಗೆ ಬೇರೆ ಬಣ್ಣ ಬಳಿಯುವಂತೆ ಹೇಳಿ. ಏಕೆಂದರೆ ಈ ಬಣ್ಣದ ಗೋಡೆಯು ಬೇಗನೇ ಅಂತಾರಾಷ್ಟ್ರೀಯ ಡ್ರೋನ್ಗಳ ಕಣ್ಣುಕುಕ್ಕುತ್ತದೆ. ಇಲ್ಲಿ ಅನೇಕ ಬಾರಿ ಡ್ರೋನ್ಗಳು ಓಡಾಡಿವೆ. ಇದರಿಂದ ನಮ್ಮೆಲ್ಲರ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾಳೆ.
https://twitter.com/i/status/1423213016342962176
ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ ರೈ ತದ್ರೂಪಿಯದ್ದೇ ಸುದ್ದಿ..! “ ಸಲ್ಮಾನ್ ಖಾನ್ ಮುಂದೆ ಹೋಗ್ಬೇಡ” ಎಂದ ನೆಟ್ಟಿಗರು..!
ಕ್ಯಾಬ್ ಚಾಲಕಿನಿಗೆ ಥಳಿಸಿದ್ದ ವಿಡಿಯೋ..
ವೀಡಿಯೋದಲ್ಲಿ ಬಿಳಿ ಶರ್ಟ್ ಧರಿಸಿದ್ದ ಮಹಿಳೆ ಜೀಬ್ರಾ ಕ್ರಾಸಿಂಗ್ ಮಧ್ಯೆ ನಿಂತು ಕ್ಯಾಬ್ ಚಾಲಕನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಟ್ರಾಫಿಕ್ ಜಾಮ್ ಆಗಿದೆ. ಈ ವಿಚಾರವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಜಗಳವನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೂ ಮಹಿಳೆ ಬಿಡದೇ ಚಾಲಕನನ್ನು ಎಳೆದಾಡಿಕೊಂಡು ಕಪಾಳಕ್ಕೆ ಹೊಡೆಯುತ್ತಲೇ ಇರುತ್ತಾರೆ. ಈ ವೇಳೆ ಚಾಲಕನ ಮೊಬೈಲ್ನನ್ನು ಮಹಿಳೆ ಒಡೆದು ಹಾಕಿದ್ದಳು.
https://twitter.com/MeghUpdates/status/1421525624384933894