ಅಮ್ಮ ನನ್ನ ಚಾಕಲೇಟ್ ಕದಿಯುತ್ತಾಳೆ , ಜೈಲಿಗೆ ಹಾಕಿ – 3 ವರ್ಷದ ಮಗುವಿನ ವಿಡಿಯೋ ವೈರಲ್..
ಮಧ್ಯಪ್ರದೇಶದ ಬುರ್ಹಾನ್ಪುರದಲ್ಲಿ ಕುತೂಹಲಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 3 ವರ್ಷದ ಪುಟ್ಟ ಮಗುವೊಂದು ತನ್ನ ತಾಯಿಯ ಬಗ್ಗೆ ದೂರು ನೀಡಲು ಬುರ್ಹಾನ್ಪುರದ ಡೆಡ್ತಲೈ ಪೊಲೀಸ್ ಪೋಸ್ಟ್ ಗೆ ತಲುಪಿದ್ದಾನೆ.
ನಡೆದದ್ದೇನೆಂದರೆ, ಮೂರು ವರ್ಷದ ಮಗನಿಗೆ ಸ್ನಾನ ಮಾಡಿದ ನಂತರ, ತಾಯಿ ದೃಷ್ಟಿ ಆಗದಿರಲೆಂದು ಕಾಜಲ್ ಹಚ್ಚಲು ಬಯಸಿದ್ದಾರೆ. ಮಗು ಇದಕ್ಕೆ ನಿರಾಕರಿಸಿದಾಗ ತಾಯಿ ಪ್ರೀತಿಯಿಂದ ಕೆನ್ನೆಗೆ ಬಾರಿಸಿದ್ದಾಳೆ.
ಈ ವಿಷಯ ಎಲ್ಲಿಯವರೆಗೆ ಹೋಯಿತೆಂದರೇ ಮಗು ತಾಯಿಯ ವಿರುದ್ಧ ದುರು ನೀಡಲು ಪೊಲೀಸ್ ಠಾಣೆ ತಲುಪಿದ್ದಾನೆ. ಮಗುವಿನ ಹಠಕ್ಕೆ ತಂದೆಯೇ ಪೊಲೀಸರ ಹತ್ತಿರ ಕರೆದುಕೊಂಡು ಹೋಗಿದ್ದಾರೆ.
मध्यप्रदेश के बुरहानपुर में तीन साल का बच्चा मम्मी की शिकायत लेकर पुलिस थाने पहुंच गया। उसने पुलिस से कहा कि मम्मी मेरी कैंडी और चॉकलेट चुरा लेतीं हैं। उनको जेल में डाल दो। बच्चे की मासूमियत देखकर सभी की हंसी छूट गई।#MadhyaPradesh #Video pic.twitter.com/iGdHVOZEF6
— Hindustan (@Live_Hindustan) October 17, 2022
“ಮಮ್ಮಿ ನನ್ನ ಕ್ಯಾಂಡಿ ಮತ್ತು ಚಾಕೊಲೇಟ್ಗಳನ್ನ ಕದಿಯುತ್ತಾರೆ, ಅವರನ್ನು ಜೈಲಿಗೆ ಹಾಕಿ ಎಂದು ಮಗು ಪೊಲೀಸರಿಗೆ ಹೇಳಿದೆ. ಮುಗ್ಧ ಮಗುವಿನ ಅಹವಾಲು ಕೇಳಿ ಪೊಲೀಸರು ಸೇರಿದಂತೆ ಅಲ್ಲಿದ್ದವರು ನಕ್ಕಿದ್ದಾರೆ. ಔಟ್ ಪೋಸ್ಟ್ ಇನ್ ಚಾರ್ಜ್, ಪೇಪರ್ ಎತ್ತಿಕೊಂಡು ಮಗುವಿನ ದೂರನ್ನ ದಾಖಲಿಸಿಕೊಂಡಿದ್ದಾರೆ.
ಮಗುವಿನ ಮಾತು ಕೇಳಿ ಹೊರಠಾಣೆ ಪ್ರಭಾರಿ ಎಸ್ ಐ ಪ್ರಿಯಾಂಕಾ ನಾಯಕ್ಗೆ ನಗು ತಡೆಯಲಾಗಲಿಲ್ಲ. ಅಮ್ಮ ನನ್ನ ಜೈಲಿಗೆ ಕಳುಹಿಸುವುದಾಗಿ ಹೇಳಿ ಎಸ್ ಐ ಪ್ರಿಯಾಂಕಾ ಕಷ್ಟಪಟ್ಟು ಮನೆಗೆ ಕಳುಹಿಸಿದ್ದಾರೆ.
Viral Video: Mom steals my chocolate, put in jail – 3 year old video goes viral..