ವ್ಹೀಲ್ ಚೇರ್ ಸಮೇತ ಹಳಿ ಮೇಲೆ ಬಿದ್ದ ವಿಶೇಷ ಚೇತನ : ಸ್ವಲ್ಪ ತಡ ಆಗಿದ್ರೂ ಜೀವ ಹೋಗುತಿತ್ತು..!
ಅಮೆರಿಕಾದ ಯೂನಿಯನ್ ಸ್ಕ್ವೇರ್ನಲ್ಲಿ ನಡೆದಿರುವ ಘಟನೆಯ ಮೈ ಝುಂ ಎನಿಸುವ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.. ಹೌದು ವಿಸೇಷ ಚೇತನ ವ್ಯಕ್ತಿಯೊಬ್ರು ವೀಲ್ ಚೇರ್ ಸಮೇತ ರೈಲ್ವೆ ಹಳಿಗೆ ಬಿದ್ದಿದ್ದು, ಸ್ವಲ್ಪ ಯಾಮಾರಿದ್ರೂ ಜೀವವೇ ಹೋಗ್ತಿತ್ತು.. ಆದ್ರೆ ಅವರನ್ನ ಫ್ಲಾಟ್ ಫಾರ್ಮ್ ಮೇಲೆ ನಿಂತಿದ್ದ ವ್ಯಕ್ತಿಯೊಬ್ಬರು ತಮ್ಮ ಜೀವದ ಹಂಗು ತೊರೆದು ಹಳಿ ಮೇಲೆ ಎಗರಿ ಆ ವ್ಯಕ್ತಿಯನ್ನ ಮೇಲಕ್ಕೆ ಎತ್ತಿದ್ದಾರೆ.. ಬಳಿಕ ವೀಲ್ ಚೇರ್ ತೆಗೆದುಕೊಂಡು ತಾವೂ ಸಹ ಮೇಲೆ ಬಂದ ಕೆಲವೇ ಸೆಕೆಂಡ್ ನಲ್ಲಿ ಆಕಡೆಯಿಂದ ರೈಲು ಬಂದಿದೆ..
ವಿಶೇಷ ಚೇತನ ವ್ಯಕ್ತಿಯ ರಕ್ಷಣೆಗೆ ತಮ್ಮ ಪ್ರಾಣ ಪಣಕಿಟ್ಟ ವ್ಯಕ್ತಿಯ ಕಾರ್ಯಕ್ಕೆ ಜನ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸ್ತಾಯಿದ್ದಾರೆ.. ರೈಲು ಬರುವುದಕ್ಕೆ ಇನ್ನೂ ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ಈ ಘಟನೆ ಜರುಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಈ ವೀಡಿಯೋ ಜೊತೆಗೆ ಇಂದು ಮಧ್ಯಾಹ್ನ ಯೂನಿಯನ್ ಸ್ಕ್ವೇರ್ ನಲ್ಲಿ ವೀಲ್ ಚೇರ್ನಿಂದ ವ್ಯಕ್ತಿ ಆದ್ಯಾಗೋ ರೈಲ್ವೆ ಟ್ರ್ಯಾಕ್ ಒಳಗೆ ಬಿದ್ದಿದ್ದನು. ಅದೃಷ್ಟವಶಾತ್ ರೈಲು ನಿಲ್ದಾಣಕ್ಕೆ ಬರುವ ಮುನ್ನ ಒಬ್ಬ ವ್ಯಕ್ತಿ ರೈಲ್ವೆ ಹಳಿಗೆ ಹಾರಿ ಆ ವ್ಯಕ್ತಿಯನ್ನು ರಕ್ಷಿಸಿದ ಎಂದು ಕ್ಯಾಪ್ಷನ್ನಲ್ಲಿ ಬರೆಯಲಾಗಿದೆ.
28 ಮಡದಿಯರ ಸಮ್ಮುಧಕದಲ್ಲಿ 37ನೇ ಮದುವೆಯಾದ ಅಜ್ಜ..!
ಈ ಕುರಿತಂತೆ ಪೊಲೀಸರು, ಬುಧವಾರ ಮಧ್ಯಾಹ್ನ 1:30ಕ್ಕೆ ಈ ಘಟನೆ ಸಂಭವಿಸಿದ್ದು, ರೈಲ್ವೆ ಟ್ರ್ಯಾಕ್ ಮೇಲೆ ಬಿದ್ದ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ. ಅವರು ಪ್ರಜ್ಞೆ ಹೊಂದಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
https://twitter.com/i/status/1423030526756147201








