ಇತ್ತೀಚೆಗಿನ ವೈರಲ್ ಸುದ್ದಿಗಳು : ದೇಶ ವಿದೇಶ..!
1 min read
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ
ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!
ದಂಡ ಕಟ್ಟಿಸಿಕೊಳ್ಳುವ ಬದಲು ಯುವತಿಗೆ ಕಿಸ್ ಕೊಟ್ಟ ಪೊಲೀಸ್ ಅಧಿಕಾರಿ.!
ಪೆರು: ಸಾಮಾನ್ಯವಾಗಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ರೆ ಟ್ರಾಫಿಕ್ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ವಾಗ್ವಾದ, ದಂಡ ಕಟ್ಟಿಸಿಕೊಳ್ಳುವುದು ಇಲ್ಲ ಮನವಿ ಮಾಡಿಕೊಂಡ್ರೆ ಪೊಲೀಸರು ವಾರ್ನ್ ಮಾಡಿ ಕಳುಹಿಸಿಬಿಡ್ತಾರೆ. ಆದ್ರೆ ಪೆರುವಿನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಯುವತಿಗೆ ಕಿಸ್ ಮಾಡಿದ್ದು, ಕೋವಿಡ್ ನಿಯಮವನ್ನೂ ಉಲ್ಲಂಘಿಸಿದ್ದಾರೆ. ಆ ಅಧಿಕಾರಿಯನ್ನ ಸದ್ಯ ಅಮಾನತುಗೊಳಿಸಲಾಗಿದೆ. ಈ ಬಗೆಗಿನ ಫೋಟೋಗಳು ವೈರಲ್ ಅಗ್ತಿದೆ. ಸಿಸಿಟಿಯ ವಿಡಿಯೋ ತುಣುಕು ವೈರಲ್ ಆಗಿದೆ. ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದರ ಬದಲಿಗೆ ಚುಂಬನ ಕೊಡುವಂತೆ ಆಕೆಯ ಮನವೊಲಿಸಿದ್ದಾನೆ.
OMG ಸ್ಟ್ರಾಬೆರಿ ಬಿರಿಯಾನಿ : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..!
OMG ಸ್ಟ್ರಾಬೆರಿ ಬಿರಿಯಾನಿ : ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್..!
ಸಾಮಾನ್ಯವಾಗಿ ಬಿರಿಯಾನಿ ಅಂದ ತಕ್ಷಣ ಬಾಯಲ್ಲಿ ನೀರೂರುತ್ತೆ. ಬಿರಿಯಾನಿ ಬಹುತೇಕ ಜನರ ಫೇವರೇಟ್ ಆಗಿರುತ್ತೆ. ಬಿರಿಯಾನಿಯಲ್ಲಿ ಅನೇಕ ಬಗೆಗಳು ಇವೆ. ಆದ್ರೆ ಸ್ಟ್ರಾಬೆರ್ರಿ ಬಿರಿಯಾನಿ ಬಗ್ಗೆ ಕೇಳಿದ್ದೀರಾ.. ಪಾಕಿಸ್ತಾನದ ವ್ಯಕ್ತಿಯೊಬ್ಬ ಬಿರಿಯಾನಿಗೆ ಸ್ಟ್ರಾಬೆರ್ರಿಗಳನ್ನ ಹಾಕೋ ಮೂಲಕ ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾನೆ. ಸ್ಟ್ರಾಬೆರ್ರಿಯನ್ನ ಹಾಕಲಾದ ಈ ಬಿರಿಯಾನಿಗೆ ಸ್ಟ್ರಾಬೆರ್ರಿಯಾನಿ ಎಂದು ನಾಮಕರಣ ಕೂಡ ಮಾಡಿದ್ದಾರೆ. ಸ್ಟ್ರಾಬೆರಿ ಬಿರಿಯಾನಿನಾ. ಇಂತಹ ಬಿರಿಯಾನಿನೂ ಮಾಡಬಹುದಾ. ಇದೆಂಥಾ ಕಾಂಬಿನೇಷನ್ ಹೀಗೆಲ್ಲಾ ಪ್ರಶ್ನೆಗಳು ತಲೆಗೆ ಬರುತ್ತೆ.
VIDEO : ಮಹಿಳೆಗೆ ಇದೆಂಥಾ ಶಿಕ್ಷೆ : ಮೈದುನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳೆ..!
VIDEO : ಮಹಿಳೆಗೆ ಇದೆಂಥಾ ಶಿಕ್ಷೆ : ಮೈದುನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳೆ..!
ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಮಹಿಳೆಯನ್ನು ಕೋಲು-ದೊಣ್ಣೆ ಹಿಡಿದ ಯುವಕರು ಗುಂಪು ಬೆದರಿಕೆ ಹಾಕುತ್ತಾ ಮಹಿಳೆಯನ್ನು ನಡೆಸಿಕೊಂಡು ಹೋಗುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. ಎಲ್ಲೆಡೆ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಮೈದುನನ್ನು ಬಲವಂತವಾಗಿ ಹೆಗಲ ಮೇಲೆ ಹೊರಿಸಿ ಕನಿಷ್ಠ 3 ಕಿ.ಮೀ. ನಡೆಸಿಕೊಂಡು ಹೋಗುವ ಘೋರ ಶಿಕ್ಷೆ ವಿಧಿಸಿದ್ದು, ಆಕೆ ಆತನನ್ನ ಹೆಗಲ ಮೇಲೊತ್ತು ಊರು ಸುತ್ತುತ್ತಿದ್ದಾರೆ. ಮಹಿಳೆಯ ಅಸಹಾಯಕತೆಗೆ ಮರುಕ ವ್ಯಕ್ತಪಡಿಸುವ ಬದಲು, ಆಕೆಯನ್ನ ಹೀಯಾಳಿಸುತ್ತಾ, ಕೋಲು ಹಿಡಿದು ಬೆದರಿಸುತ್ತಾ ಆಕೆಯನ್ನ ಅಲ್ಲಿನ ಜನ ಓಡಾಡುಸುತ್ತಿರುವುದನ್ನ ವಿಡಿಯೋದಲ್ಲಿ ನೋಡಬಹುದಾಗಿದೆ.
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನು ಕ್ಲಿಕ್ ಮಾಡಿ