Virat | ಅದೇ ನಿರ್ಲಕ್ಷ್ಯ.. ಕ್ಯಾಪ್ಟನ್ಸಿ ಬಿಟ್ಟಮೇಲೆ ಜವಾಬ್ದಾರಿ ಮರೆತ್ರಾ ಕೊಹ್ಲಿ..?

1 min read
virat kohli bad form in ipl 2022 saaksha tv

ಅದೇ ನಿರ್ಲಕ್ಷ್ಯ.. ಕ್ಯಾಪ್ಟನ್ಸಿ ಬಿಟ್ಟಮೇಲೆ ಜವಾಬ್ದಾರಿ ಮರೆತ್ರಾ ಕೊಹ್ಲಿ..?

2022 ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ಪದೇ ಪದೇ ನಿರ್ಲಕ್ಷ್ಯದಿಂದ ವಿಕೆಟ್ ಒಪ್ಪಿಸುತ್ತಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ತಮ್ಮ ಆಫ್ ಸ್ಟಂಪ್ ಬಲಹೀನತೆಯನ್ನು ಬಹಿರಂಗಗೊಳಿಸಿದರು.

ಕೊಹ್ಲಿ ಬಲಹೀನತೆ ಬಗ್ಗೆ ಚೆನ್ನಾಗಿ ತಿಳಿದಿದ್ದ ಕೆ.ಎಲ್.ರಾಹುಲ್ ಚಮೀರಾಗೆ ಆಫ್ ಸ್ಟಂಪ್ ಕಡೆ ಬಾಲ್ ಎಸೆಯುವಂತೆ ಸೂಚಿಸಿದರು.

ಚಮೀರಾ ನಾಯಕನ ಸೂಚನೆಯಂತೆ ಬಾಲ್ ಹಾಕಿದ್ರು.

ಇತ್ತ ವಿರಾಟ್ ಕೊಹ್ಲಿ ಹಿಂದೆ ಮುಂದೆ ಯೋಚನೆ ಮಾಡದೇ ಬೌಂಡರಿ ಹೊಡೆಯುವ ಅವಸರದಲ್ಲಿ ಬ್ಯಾಕ್ ವರ್ಡ್ ಪಾಯಿಂಟ್ ನಲ್ಲಿದ್ದ ದೀಪಕ್ ಹೂಡಗೆ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ಹೊರಟರು.

Virat-kohli-4th-time-golden-duck saaksha tv

ಅಲ್ಲದೇ ವಿರಾಟ್ ಮ್ಯಾಚ್ ನಲ್ಲಿ ಗೋಲ್ಡನ್ ಡಕ್ ಕೂಡ ಆಗಿದ್ದಾರೆ. ಈ ಹಿನ್ನಲೆಯಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಬೇಡವಾದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಆಗಿದ್ದು ಇದು ನಾಲ್ಕನೇ ಬಾರಿ.

ಇದಕ್ಕೂ ಮೊದಲು 2008 ರಲ್ಲಿ ಆಶೀಷ್ ನೆಹ್ರಾ, 2014ರಲ್ಲಿ ಸಂದೀಪ್ ಶರ್ಮಾ, 2017ರಲ್ಲಿ ನಾಥನ್ ಕೌಲ್ಟರ್ ನೀಲ್, ಈಗ ದುಶ್ಮಂತಾ ಚಮೀರಾ ಬೌಲಿಂಗ್ ನಲ್ಲಿ ಗೋಲ್ಡನ್ ಡಕ್ ಆಗಿದ್ದಾರೆ.

ಈ ಸೀಸನ್ ನಲ್ಲಿ ಪವರ್ ಪ್ಲೇ ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದು, ಮೂರನೇ ಬಾರಿ.    Virat-kohli-4th-time-golden-duck

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd