Virat Kohli | ಇದೊಂದು ಸಾಕು.. ಕೊಹ್ಲಿ ಅಂದ್ರೆ ಏನು ಅಂತಾ ಹೇಳೋಕೆ !!!
ಆಧುನಿಕ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ದಾಖಲೆಗಳನ್ನು ಮಾಡಿದ್ದಾರೆ.
ಟೀಂ ಇಂಡಿಯಾದ ಅವತಾರಪುರುಷನಾಗಿ ಹಲವು ಅವಿಸ್ಮರಣಿಯ ಗೆಲುವುಗಳನ್ನು ತಂದುಕೊಟ್ಟು ಚರಿತ್ರೆ ನಿರ್ಮಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 71 ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ ಸಚಿನ್ ನಂತರದ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಹತ್ತಿರಕ್ಕೂ ಕೂಡ ಯಾವ ಬ್ಯಾಟರ್ ಬರುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಮುಂಬರುವ ಟಿ 20 ವಿಶ್ವಕಪ್ ಗೂ ಮುನ್ನಾ ವಿರಾಟ್ ಕೊಹ್ಲಿ ವಿಂಟೇಜ್ ಟಚ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಖುಷಿ ತಂದಿದೆ.
ಭಾನುವಾರ ದಕ್ಷಿಣ ಆಪ್ರಿಕಾ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯದಲ್ಲಿ ಕೊಹ್ಲಿ 49 ರನ್ ಗಳನ್ನ ಗಳಿಸಿ ನಾಟೌಟ್ ಆಗಿ ನಿಂತರು.
ಆಕ್ರಮಣಕಾರಿಯಾಗಿ ಆಡುತ್ತಿದ್ದ ಸೂರ್ಯ ಕುಮಾರ್ ಗೆ ಸ್ಟ್ರೈಕ್ ನೀಡುತ್ತಾ ಎಲ್ಲರ ಗಮನ ಸೆಳೆದ ವಿರಾಟ್ ಕೊಹ್ಲಿ ಸೂರ್ಯ ಔಟ್ ಆದ ಬಳಿಕ ವಿರಾಟ ರೂಪ ಪ್ರದರ್ಶಿಸಿದರು.
ಗೇರ್ ಚೇಂಜ್ ಮಾಡಿ ಅಬ್ಬರಿಸಿದ ವಿರಾಟ್ ಕೊಹ್ಲಿ 28 ಎಸೆತಗಳಲ್ಲಿ 49 ರನ್ ಗಳಿಸಿದರು. ಟೀಂ ಇಂಡಿಯಾ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ವಿರಾಟ್ ಕೊಹ್ಲಿ 49 ರನ್ ಗಳಿಸಿ ನಾನ್ ಸ್ಟ್ರೈಕ್ ನಲ್ಲಿದ್ದರು.

ಫಿನಿಷರ್ ಆಗಿ ಬಂದ ದಿನೇಶ್ ಕಾರ್ತಿಕ್ ಸ್ಟ್ರೈಕ್ ನಲ್ಲಿದ್ದರು. ಮೊದಲ ಎಸೆತವನ್ನು ಮಿಸ್ ಮಾಡಿದ ದಿನೇಶ್ ಎರಡನೇ ಎಸೆತವನ್ನು ಬೌಂಡರಿಗಟ್ಟಿದರು.
ಮೂರನೇ ಎಸೆತ ಡಾಟ್ ಬಾಲ್ ಆಯ್ತು. ನಂತರ ವೈಡ್ ಬಂತು. ನಾಲ್ಕನೇ ಎಸೆತವನ್ನು ದಿನೇಶ್ ಸಿಕ್ಸರ್ ಗಟ್ಟಿದರು.
ಆ ನಂತರ ಕೊಹ್ಲಿ ಬಳಿ ಬಂದ ದಿನೇಶ್ ಕಾರ್ತಿಕ್, ಸಿಂಗಲ್ ತೆಗೆದುಕೊಡುತ್ತೇನೆ ಅರ್ಧಶತಕ ಸಿಡಿಸು ಅಂತಾ ಕೇಳಿದ್ರು.
ಅದಕ್ಕೆ ವಿರಾಟ್ ಕೊಹ್ಲಿ ಬೇಡ ಬೇಡ ಎನ್ನುತ್ತಾ ನೀನು ನಿನ್ನ ಜವಾಬ್ದಾರಿಯನ್ನು ನಿರ್ವಹಿಸು ಅಂತಾ ಭುಜ ತಟ್ಟಿ ನಾನ್ ಸ್ಟ್ರೈಕ್ ಗೆ ಹೋದರು. ಅಂತಿಮವಾಗಿ ದಿನೇಶ್ 7 ಎಸೆತಗಳಲ್ಲಿ 17 ರನ್ ಗಳಿಸಿದರು.
In addition to the run fest, a special moment as we sign off from Guwahati. ☺️#TeamIndia | #INDvSA | @imVkohli | @DineshKarthik pic.twitter.com/SwNGX57Qkc
— BCCI (@BCCI) October 2, 2022
ಇಲ್ಲಿ ವಿರಾಟ್ ಅರ್ಧಶತಕಕ್ಕಿಂತ ತಂಡಕ್ಕಾಗಿ ರನ್ ಬಾರಿಸು ಅಂತಾ ದಿನೇಶ್ ಕಾರ್ತಿಕ್ ಗೆ ಹೇಳಿದ್ದು, ಅಭಿಮಾನಿಗಳ ಹೃದಯ ಗೆದ್ದಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.