VIRAT ಕೊಹ್ಲಿಗೆ ಗೇಟ್ ಪಾಸ್… ಪ್ಲಾನ್ ರೆಡಿ
ಕಳೆದ ಎರಡು ದಶಕಗಳ ಕಾಲ ಟೀಂ ಇಂಡಿಯಾದಲ್ಲಿ ಏಕ ಚಕ್ರಾಧಿಪತಿಯಾಗಿಯಾಗಿ ಮೆರೆದ ವಿರಾಟ್ ಕೊಹ್ಲಿಗೆ ಶೀಘ್ರದಲ್ಲಿಯೇ ಗೇಟ್ ಪಾಸ್ ಸಿಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಎರಡು ವರ್ಷಗಳಿಂದ ಕಳಫೆ ಪಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ, ಶೀಘ್ರದಲ್ಲಿಯೇ ಚುಟುಕು ಕ್ರಿಕೆಟ್ ಗೆ ಗುಡ್ ಬೈ ಹೇಳುವ ಸಾಧ್ಯತೆಗಳಿವೆ ಅನ್ನುವ ವಾರ್ತೆಗಳು ಹರಿದಾಡುತ್ತಿವೆ.
ಪ್ರಸ್ತುತ ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಟಿ 20 ಸರಣಿ ವಿರಾಟ್ ಕೊಹ್ಲಿಗೆ ಕೊನೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇಂಗ್ಲೆಂಡ್ ಜೊತೆ ಟಿ 20 ಸರಣಿಯಲ್ಲಿ ಕೊಹ್ಲಿ ಮಿಂಚಿದ್ರೂ ಯಾವುದೇ ಪ್ರಯೋಜನೆಗಳಿಲ್ಲ, ಪರಿಸ್ಥಿತಿಗಳು ಕೈ ಮೀರಿ ಹೋಗಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರೆಸ್ಟ್ ಹೆಸರಲ್ಲಿ ವಿಂಡೀಸ್ ಸರಣಿಗೆ ವಿರಾಟ್ ಅವರನ್ನ ಕೈಬಿಟ್ಟಿರುವ ಬಿಸಿಸಿಐ, ಆ ನಂತರ ಐದು ಪಂದ್ಯಗಳ ಟಿ 20 ಸರಣಿಗೂ ಅವರನ್ನ ಸೈಡ್ ಲೈನ್ ಮಾಡುವ ಸಾಧ್ಯತೆಗಳಿವೆ.
ವಿಶ್ವಕಪ್ ದೃಷ್ಠಿಯಿಂದ ವಿಂಡೀಸ್ ಪ್ರವಾಸ ಮುಖ್ಯವಾಗಿರುವುದರಿಂದ ಕೊಹ್ಲಿ ಅವರನ್ನ ಹೊರತುಪಡಿಸಿ ರೋಹಿತ್, ಬುಮ್ರಾ, ರಿಷಬ್, ಪಂತ್, ಶಮಿ ತಂಡಕ್ಕೆ ವಾಪಸ್ ಆಗಲಿದ್ದಾರೆ ಅನ್ನೋದು ಸಮಾಚಾರ.
ಕೊಹ್ಲಿ ಜಾಗಕ್ಕಾಗಿ ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್ ನಡುವೆ ತೀವ್ರ ಪೈಪೋಟಿ ಇದೆ.