ಕೊಹ್ಲಿಯನ್ನು ನಿಷೇಧಿಸಿ : ಮುಗಿಬಿದ್ದ ಹಿರಿಯ ಕ್ರಿಕೆಟರ್ಸ್

1 min read
virat kohli team india saakshatv

ಕೊಹ್ಲಿಯನ್ನು ನಿಷೇಧಿಸಿ : ಮುಗಿಬಿದ್ದ ಹಿರಿಯ ಕ್ರಿಕೆಟರ್ಸ್

ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಟೀಕೆ ಮುಂದುವರಿದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಕೊಹ್ಲಿ ವರ್ತನೆಗೆ ಮಾಜಿ ಕ್ರಿಕೆಟಿಗರು ಕೋಪಗೊಂಡಿದ್ದಾರೆ.

ಪ್ರೋಟೀಸ್ ನಾಯಕ ಡೀನ್ ಎಲ್ಗರ್ ಡಿಆರ್ ಎಸ್ ಕರೆ ವಿಚಾರವಾಗಿ ಟೀಂ ಇಂಡಿಯಾದ ಆಟಗಾರರು ಅದರಲ್ಲೂ ವಿಶೇಷವಾಗಿ ಕೊಹ್ಲಿ ಸ್ಟಂಪ್ಸ್ ಮೈಕ್ ಬಳಿ ಬಂದು ಪ್ರಸಾರಕರೊಂದಿಗೆ ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಟೀಂ ಇಂಡಿಯಾದ ಮಾಜಿ ಓಪನರ್ ಗೌತಮ್ ಗಂಭೀರ್ ಈ ವಿಚಾರದಲ್ಲಿ ಕೊಹ್ಲಿಯ ಅನುಚಿತ ವರ್ತನೆಯನ್ನು ಟೀಕಿಸಿದ್ದಾರೆ.

ಇದೀಗ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಮೈಕೆಲ್ ವಾನ್, ವಿರಾಟ್ ಗೆ ಐಸಿಸಿ ಭಾರಿ ದಂಡ ವಿಧಿಸಬೇಕು ಅಥವಾ ಅವರನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.

Virat kohli-be-suspended saakshatv

ಎಲ್ಲರೂ ಭಾವನೆಗಳನ್ನು ತೋರಿಸುವುದು ಸಹಜ.ಆದರೆ ನಾಯಕ ಹೀಗೆ ಮಾಡುವುದು ಸರಿಯಲ್ಲ ಎಂದರು. ಈ ಬಗ್ಗೆ ಐಸಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್ ಮನ್ ಡ್ಯಾರಿಲ್, ಟೀಂ ಇಂಡಿಯಾದ ನಾಯಕನ ಕ್ರಮಗಳು ಸ್ವೀಕಾರಾರ್ಹವಲ್ಲ ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.  

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಡಮ್ ಗಿಲ್ ಕ್ರಿಸ್ಟ್ ಕೂಡ ವಿರಾಟ್ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd