ಐಪಿಎಲ್ 2021 – ಐಪಿಎಲ್ ನಲ್ಲಿ ಆರು ಸಾವಿರ ರನ್ ಗಳ ಸರದಾರ ವಿರಾಟ್ ಕೊಹ್ಲಿ

1 min read
virat kohli rcb saakshatv ipl2021

ಐಪಿಎಲ್ 2021 – ಐಪಿಎಲ್ ನಲ್ಲಿ ಆರು ಸಾವಿರ ರನ್ ಗಳ ಸರದಾರ ವಿರಾಟ್ ಕೊಹ್ಲಿ

virat kohli rcb saakshatv ipl2021ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್ ನ ಬ್ರಹ್ಮ..ವಿರಾಟ್ ಕೊಹ್ಲಿ ಕ್ರೀಸ್ ಗೆ ಅಂಟಿಕೊಂಡ್ರೆ ಸುನಾಮಿಯಂತೆ ಅಬ್ಬರಿಸುತ್ತಾ ರನ್ ಧಾರಣೆಯೂ ಏರಿಕೆಯಾಗುತ್ತದೆ
ಟೆಸ್ಟ್, ಏಕದಿನ ಮತ್ತು ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಹಲವು ದಾಖಲೆಗಳ ಒಡೆಯನಾಗಿರುವ ವಿರಾಟ್ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಅಳಿಸಿಹಾಕುವತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದ್ದಾರೆ.
ಇದೀಗ ಐಪಿಎಲ್ ನಲ್ಲೂ ವಿರಾಟ್ ಕೊಹ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ರಾಜಸ್ತಾನ ರಾಯಲ್ಸ್ ವಿರುದ್ಧ ಅಜೇಯ 72 ರನ್ ದಾಖಲಿಸಿದ್ರು. ಅಲ್ಲದೆ ತಂಡದ ಭರ್ಜರಿ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

Virat Kohli becomes 1st cricketer to score 6,000 runs in ipl

ಈ ನಡುವೆ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 6ಸಾವಿರ ರನ್ ದಾಖಲಿಸಿದ್ದ ಮೊದಲ ಆಟಗಾರನಾಗಿಯೂ ಹೊರಹೊಮ್ಮಿದ್ದಾರೆ. ವಿರಾಟ್ ಕೊಹ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ 51 ರನ್ ಗಳಿಸಿದ್ದಾಗ ಈ ಸಾಧನೆ ಮಾಡಿದ್ದಾರೆ.
196ನೇ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ 600 ರನ್ ದಾಖಲಿಸಿದ್ದು, ಇದ್ರಲ್ಲಿ ಐದು ಶತಕಗಳು ಹಾಗೂ 40 ಅರ್ಧಶತಕಗಳಿವೆ. 518 ಬೌಂಡರಿ ಮತ್ತು 204 ಸಕ್ಸರ್ ಗಳನ್ನು ಸಿಡಿಸಿದ್ದಾರೆ.
virat kohli rcb saakshatv ipl2021ಕಳೆದ 13 ವರ್ಷಗಳಿಂದ ವಿರಾಟ್ ಕೊಹ್ಲಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಸಾಕಷ್ಟು ಪ್ರಯತ್ನ ನಡೆಸಿದ್ರೂ ಸಾಧ್ಯವಾಗಲಿಲ್ಲ. ಆದ್ರೆ ಈ ಬಾರಿ ಪ್ರಶಸ್ತಿ ಗೆಲ್ಲುವ ಭರವಸೆಯನ್ನು ಇಮ್ಮಡಿಗೊಳಿಸುತ್ತಿದ್ದಾರೆ.

ಇನ್ನೊಂದೆಡೆ ರನ್ ಮೇಷಿನ್ ನಂತೆ ತಂಡಕ್ಕೆ ಆಧಾರವಾಗುತ್ತಿರುವ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್ ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದಾರೆ.
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಐಪಿಎಲ್ ನಲ್ಲೂ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ. ಇನ್ನುಳಿದಂತೆ ಸುರೇಶ್ ರೈನಾ 5448 ರನ್ ಗಳಿಸಿದ್ರೆ, ಶಿಖರ್ ಧವನ್ 5428 ರನ್ ಪೇರಿಸಿದ್ದಾರೆ. ಡೇವಿಡ್ ವಾರ್ನರ್ 5384 ಮತ್ತು ರೋಹಿತ್ ಶರ್ಮಾ 5368 ರನ್ ದಾಖಲಿಸಿ ಟಾಪ್ ಫೈವ್ ಸ್ಥಾನದಲ್ಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd