Virat Kohli | ದೇವ್ರ ರಿಕಾರ್ಡು ಚಿಂದಿ.. ದಾಖಲೆಗಳಿಗೆ ಕೇರ್ ಆಪ್ ಅಡ್ರೆಸ್ ರಾಕ್ಷಸ
ಪ್ರಸ್ತುತ ಕ್ರಿಕೆಟ್ ದುನಿಯಾದಲ್ಲಿ ದಾಖಲೆಗಳ ಸರದಾರ ನಾನೇ ಎಂದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತೊಮ್ಮೆ ರುಜು ಮಾಡಿದ್ದಾರೆ. ಅಹ್ಮದಾಬಾದ್ ವೇದಿಕೆಯಾಗಿ ವಿಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 8 ರನ್ ಗಳನ್ನ ಮಾತ್ರ ಗಳಿಸಿ ಔಟ್ ಆದ್ರೂ, ದಿಗ್ಗಜ ಕ್ರಿಕೆಟರ್ ಸಚಿನ್ ತೆಂಡುಲ್ಕರ್ ಹೆಸರಿನ ಮೇಲಿದ್ದ ದಾಖಲೆಯನ್ನು ಚಿಂದಿ ಉಡಾಯಿಸಿದ್ದಾರೆ.
ವಿರಾಟ್ ಕೊಹ್ಲಿ ಸ್ವದೇಶದಲ್ಲಿ ಅತಿ ವೇಗವಾಗಿ 5000 ರನ್ ಪೂರೈಸಿದ ಕ್ರಿಕೆಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ. 2007ರಲ್ಲಿ ಸಚಿನ್ ತೆಂಡುಲ್ಕರ್ ಕೂಡ ವಿಂಡೀಸ್ ವಿರುದ್ಧವೇ ಸ್ವದೇಶದಲ್ಲಿ 5000 ರನ್ ಮೈಲುಗಲ್ಲನ್ನ ಮುಟ್ಟಿದ್ದರು. ಸಚಿನ್ ತೆಂಡುಲ್ಕರ್ ಈ ಮೈಲುಗಲ್ಲನ್ನ ಮುಟ್ಟಲು 121 ಇನ್ನಿಂಗ್ಸ್ ಗಳನ್ನ ತೆಗೆದುಕೊಂಡಿದ್ದರು. ಆದರೇ ರನ್ ಮಿಷನ್ ವಿರಾಟ್ ಕೊಹ್ಲಿ, ಕೇವಲ 96 ಇನ್ನಿಂಗ್ಸ್ ಗಳಲ್ಲಿ ಈ ದಾಖಲೆ ಬರೆದು, ಕ್ರಿಕೆಟ್ ದೇವರನ್ನ ಹಿಂದಿಕ್ಕಿದ್ದಾರೆ.

ಒಟ್ಟಾರೆಯಾಗಿ ತಮ್ಮ ತಮ್ಮ ಸ್ವದೇಶದಲ್ಲಿ ಏನದಿನ ಕ್ರಿಕೆಟ್ ನಲ್ಲಿ 5000ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಸೇರಿದ್ದಾರೆ. ವಿರಾಟ್ ಕೊಹ್ಲಿ 60.25 ಸರಾಸರಿಯಲ್ಲಿ 5002 ರನ್ ಗಳಿಸಿದ್ದಾರೆ. ಸಚಿನ್ ತೆಂಡುಲ್ಕರ್ ಭಾರತದಲ್ಲಿ 48.11 ಸರಾಸರಿಯಲ್ಲಿ 6976 ರನ್ ಬಾರಿಸಿದ್ದಾರೆ. ರಿಕಿ ಪಾಂಟಿಂಗ್ 39.71ರ ಸರಾಸರಿಯಲ್ಲಿ 5521 ರನ್ ಚಚ್ಚಿದ್ದಾರೆ. ಜಾಕ್ ಕಾಲೀಸ್ ಆಫ್ರಿಕಾದಲ್ಲಿ 5186 ರನ್ ಗಳಿಸಿದ್ದಾರೆ.
ಇದು ಹೀಗಿದ್ದರೇ ವಿಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಭಾರತ, ವಿಂಡೀಸ್ ತಂಡಯನ್ನು 176 ರನ್ ಗಳಿಗೆ ಆಲೌಟ್ ಮಾಡಿತು. ಭಾರತದ ಪರ ಸ್ಪಿನ್ನರ್ ಯುಜಯವೇಂದ್ರ ಚಹಾಲ್ 4 ವಿಕೆಟ್, ವಾಷಿಂಗ್ ಟನ್ ಸುಂದರ್ 3 ವಿಕೆಟ್, ಪ್ರಸಿದ್ಧ್ ಕೃಷ್ಣ 2 ವಿಕೆಟ್ ಪಡೆದು ಮಿಂಚಿದರು. ಈ ಲಕ್ಷ್ಯವನ್ನ ಛೇದಿಸಲು ಕ್ರೀಸ್ ಗೆ ಬಂದ ಟೀಂ ಇಂಡಿಯಾ ಇನ್ನಿಂಗ್ಸ್ ನ ನಡುವೆ ಕೊಂಚ ತಡವರಿಸಿದ್ರೂ, ಅಂತಿಮವಾಗಿ 6 ವಿಕೆಟ್ ಗಳಿಂದ ಗೆಲುವಿನ ನಗೆ ಬೀರಿತು. ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದೊಂದಿಗೆ ಮುನ್ನಡೆ ಸಾಧಿಸಿದೆ.
ಭಾರತದ ಪರ ರೋಹಿತ್ ಶರ್ಮಾ 60 ರನ್, ಇಶಾನ್ 28 ರನ್,ಸೂರ್ಯ ಕುಮಾರ್ ಯಾದವ್ 36 ರನ್,ದೀಪಕ್ ಹೂಡಾ 32 ರನ್, ಕೊಹ್ಲಿ 8 ರನ್ ಗಳಿಸಿದರು.