Virat Kohli | ರನ್ ಗಳಿಸೋದಲ್ಲ.. ಬಾಲ್ ಎದುರಿಸೋದ್ರಲ್ಲೂ ವಿರಾಟ್ “ಬಾಸ್”
ವಿಶ್ವ ಕ್ರಿಕೆಟ್ ನ ಕಿಂಗ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಮೊದಲಿನಂತೆ ಮಿಂಚದೇ ಇದ್ದರೂ ದಾಖಲೆಗಳು ಮಾತ್ರ ನಿರ್ಮಾಣವಾಗುತ್ತಲೇ ಇದೆ.
ನಮಗೆಲ್ಲಾ ತಿಳಿದಂತೆ ವಿರಾಟ್ ಕೊಹ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಬ್ಯಾಟರ್.
ಕೇವಲ ರನ್ ಗಳಿಸೋದಲ್ಲದೇ ವಿರಾಟ್ ಕೊಹ್ಲಿ ಇದೀದ ಮತ್ತೊಂದು ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಕೊಂಡಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಈವರೆಗೂ ವಿರಾಟ್ ಕೊಹ್ಲಿ 218 ಪಂದ್ಯಗಳನ್ನಾಡಿದ್ದು, ಒಟ್ಟಾರೆ 5028 ಎಸೆತಗಳನ್ನು ಎದುರಿಸಿದ್ದಾರೆ.
ಆ ಮೂಲಕ ಕ್ರಿಕೆಟ್ ಹಬ್ಬ ಐಪಿಎಲ್ ನಲ್ಲಿ ಅತಿ ಹೆಚ್ಚು ಬಾಲ್ ಗಳನ್ನು ಎದುರಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
15 ಆವೃತ್ತಿಯ 49 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು.
ಪುಣೆಯ ಎಂಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರು.
ಈ ವೇಳೆ ನಾಯಕ ಫಾಫ್ ಡುಪ್ಲಸಿಸ್ ಜೊತೆ ಸೇರಿ ತಂಡಕ್ಕೆ ಉತ್ತಮ ಆರಂಭ ನೀಡಿದರು.
ಈ ಜೋಡಿ ಮೊದಲ ವಿಕೆಟ್ ಗೆ 62 ರನ್ ಗಳ ಭದ್ರಬುನಾದಿ ಹಾಕಿತು. ಇತ್ತ ವಿರಾಟ್ ಕೊಹ್ಲಿ 33 ಎಸೆತಗಳನ್ನ ಎದುರಿಸಿ 30 ರನ್ ದಾಖಲಿಸಿದರು.
ಆ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಅತಿ ಹೆಚ್ಚು ಬಾಲ್ ಎದುರಿಸಿದ ಬ್ಯಾಟರ್ ಎಂಬ ಸಾಧನೆ ಮಾಡಿದರು.
IPL ಹೆಚ್ಚು ಬಾಲ್ ಎದುರಿಸಿದವರ ಪಟ್ಟಿ ಹೀಗಿದೆ
ವಿರಾಟ್ ಕೊಹ್ಲಿ – 5028 ಎಸೆತಗಳು
ಶಿಖರ್ ಧವನ್ – 4863 ಎಸೆತಗಳು
ರೋಹಿತ್ ಶರ್ಮ – 4429 ಎಸೆತಗಳು
ಡೇವಿಡ್ ಮಿಲ್ಲರ್ – 4062 ಎಸೆತಗಳು
ಸುರೇಶ್ ರೈನಾ – 4043 ಎಸೆತಗಳು
ಅಂದಹಾಗೆ ವಿರಾಟ್ ಕೊಹ್ಲಿ ಈ ಆವೃತ್ತಿಯಲ್ಲಿ ನೀರಸ ಪ್ರದರ್ಶನ ನೀಡುತ್ತಿದ್ದಾರೆ.
15ನೇ ಆವೃತ್ತಿಯ ಐಪಿಎಲ್ನಲ್ಲಿ 11 ಪಂದ್ಯಗಳನ್ನು ಆಡಿರುವ ಕೊಹ್ಲಿ, 21.6ರ ಸರಾಸರಿಯಲ್ಲಿ 216 ರನ್ಗಳಿಸಿದ್ದು, 1 ಅರ್ಧಶತಕ ಸಿಡಿಸಿದ್ದಾರೆ.
ಒಟ್ಟಾರೆ ವಿರಾಟ್ ಕೊಹ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಈವರೆಗೂ 218 ಪಂದ್ಯಗಳನ್ನಾಡಿದ್ದಾರೆ.
ಈ ಪೈಕಿ 210 ಇನ್ನಿಂಗ್ಸ್ ಗಳಲ್ಲಿ 36.51ರ ಸರಾಸರಿಯಲ್ಲಿ 129.26ರ ಸ್ಟ್ರೈಕ್ ರೇಟ್ ನಲ್ಲಿ 6499 ರನ್ ಗಳಿಸಿದ್ದಾರೆ.
ಇದರಲ್ಲಿ 43 ಅರ್ಧ ಶತಕಗಳಿದ್ದು, ಐದು ಸೆಂಚೂರಿಗಳಿವೆ.
566 ಬೌಂಡರಿಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ 214 ಸಿಕ್ಸರ್ ಗಳನ್ನ ಬಾರಿಸಿದ್ದಾರೆ.
Virat Kohli becomes first player to face 5000 balls in history of IPL