VIRAT – ಕೊಹ್ಲಿಯ 12 ವರ್ಷಗಳ ಹಿಂದಿನ ಟ್ವೀಟ್ ವೈರಲ್..
ಟೀಂ ಇಂಡಿಯಾ ರನ್ ಮಿಷಿನ್.. ಕಿಂಗ್ ಕೊಹ್ಲಿ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ವಿಶ್ವದಾದ್ಯಂತ ಇರುವ ವಿರಾಟ್ ಕೊಹ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
14 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ವಿರಾಟ್ ಕೊಹ್ಲಿ 24 ಸಾವಿರಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ್ದಾರೆ.
ಮಧ್ಯೆದಲ್ಲಿ ಮೂರು ವರ್ಷ ಸೆಂಚೂರಿ ಸಿಡಿಸದೇ ಇದ್ದರೂ ಈ ವರ್ಷದ ಏಷ್ಯಾಕಪ್, ಟಿ 20 ವಿಶ್ವಕಪ್ ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.

ಸದ್ಯ ವಿಶ್ವಕಪ್ ನಲ್ಲಿ ಲೀಡಿಂಗ್ ರನ್ ಸ್ಕೋರರ್ ಆಗಿ ವಿರಾಟ್ ಮುನ್ನುಗ್ಗುತ್ತಿದ್ದಾರೆ.
2022ರಲ್ಲಿ ಮತ್ತೆ ಫಾರ್ಮ್ ಗೆ ಬಂದಿರುವ ವಿರಾಟ್ ಕೊಹ್ಲಿ ಬರ್ತ್ ಡೇ ಸಂದರ್ಭವಾಗಿ 12 ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ಈಗ ವೈರಲ್ ಆಗುತ್ತಿದೆ.
2010 ಮಾರ್ಚ್ 16 ರಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿ, ಟೀಂ ಇಂಡಿಯಾ ಪರ ಸಾಧ್ಯವಾದಷ್ಟು ಅತಿ ಹೆಚ್ಚು ರನ್ ಗಳನ್ನು ಗಳಿಸುವುದೇ ನನ್ನ ಧ್ಯೇಯ ಎಂದಿದ್ದರು.
ಈ ಟ್ವೀಟ್ ಮಾಡಿದಾಗ ವಿರಾಟ್ ಟೀಂ ಇಂಡಿಯಾ ಪರ 23 ಮ್ಯಾಚ್ ಗಳನ್ನಾಡಿದ್ದು, 847 ರನ್ ಗಳಿಸಿದ್ದರು.
ಇದರಲ್ಲಿ ಎರಡು ಶತಕ, ಆರು ಅರ್ಧಶತಕಗಳಿದ್ದವು. ಇದೀಗ ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.








