virat kohli | ಅಸಲಿ ಆಟ ಈಗ ಶುರು… ಇದಿನ್ನೂ ಆರಂಭವಷ್ಟೆ..
ಒಂದು ಡಜನ್ ಬೌಂಡರೀಸ್.. ಅರ್ಧ ಡಜನ್ ಸಿಕ್ಸರ್ ಗಳು.. 200 ಸ್ಟ್ರೈಕ್ ರೇಟ್..
ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಿದೆ. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳು ಖುಷಿಯಿಂದ ಭಾವುಕರಾದ ಕ್ಷಣಕ್ಕೆ ಶಾರ್ಜಾ ಸಾಕ್ಷಿಯಾಗಿದೆ. ಎಸ್..!! ಕಿಂಗ್ ಇನ್ ಬ್ಯಾಕ್.. ಏಷ್ಯಾಕಪ್ ಭಾಗವಾಗಿ ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸಿದ್ದಾರೆ. ಬರೋಬ್ಬರಿ ಸಾವಿರಕ್ಕೂ ಹೆಚ್ಚು ದಿನಗಳ ಬಳಿಕ ವಿರಾಟ್ ಕೊಹ್ಲಿ ಸೆಂಚೂರಿ ಸಿಡಿಸಿದ್ದಾರೆ.
ಇನ್ನಿಂಗ್ಸ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ 53 ಎಸೆತಗಳಲ್ಲಿ ಸೆಂಚೂರಿ ಗಡಿದಾಟಿದರು. ಕೊಹ್ಲಿ ಇನ್ನಿಂಗ್ಸ್ ನಲ್ಲಿ 12 ಬೌಂಡರಿ, ಆರು ಸಿಕ್ಸರ್ ಗಳಿವೆ. ಒಟ್ಟಾರೆಯಾಗಿ 61 ಎಸೆತಗಳಲ್ಲಿ 122 ರನ್ ಗಳಿಸಿದ ವಿರಾಟ್, ಟಿ 20 ಕೆರಿಯರ್ ನಲ್ಲಿ ಚೊಚ್ಚಲ ಶತಕ ಸಿಡಿಸಿದ್ರು.
ಈ ಸೆಂಚೂರಿ ಕೇವಲ ವಿರಾಟ್ ಕೊಹ್ಲಿಗೆ ಸೀಮಿತವಾಗಿರಲಿಲ್ಲ. ಈ ಸೆಂಚೂರಿ ಕೋಟ್ಯಾಂತರ ಮಂದಿ ಕೊಹ್ಲಿ ಅಭಿಮಾನಿಗಳದ್ದಾಗಿತ್ತು. ಯಾಕಂದರೇ ವಿರಾಟ್ ಕೊಹ್ಲಿ ಸೆಂಚೂರಿಗಾಗಿ ಅವರ ಅಭಿಮಾನಿಗಳ ಪ್ರಾರ್ಥನೆ ಅಷ್ಟಿಷ್ಟಾಗಿರಲಿಲ್ಲ. ಜೊತೆಗೆ ಪ್ರತಿ ಕ್ಷಣದಲ್ಲೂ ವಿರಾಟ್ ಬೆನ್ನಿಗೆ ನಿಂತು ಬೆಂಬಲ ಸೂಚಿಸಿದ್ದರು.

ಈ ಸೆಂಚೂರಿಗಾಗಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಕೊನೆಗೂ ಆ ಕಾಯುವಿಕೆಗಾಗಿ ಮುಕ್ತಿ ಸಿಕ್ಕಿದ್ದು, ವಿರಾಟ್ ಸೆಂಚೂರಿ ಸಿಡಿಸಿದ್ದಾರೆ.
ಅದೇ ರೀತಿ ವಿರಾಟ್ ಹಲವು ಟೀಕೆಗಳಿಗೆ ಬ್ಯಾಟ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಈ ಹಿಂದೆ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ ರಷೀದ್ ಲತಿಫ್, ಚುಟುಕು ಕ್ರಿಕೆಟ್ ನಲ್ಲಿ ಕೊಹ್ಲಿ ಎಂದಿಗೂ ಗ್ರೇಟ್ ಪ್ಲೇಯರ್ ಆಗಲು ಸಾಧ್ಯವಿಲ್ಲ. ರೋಹಿತ್ ಶರ್ಮಾ ಪವರ್ ಪ್ಲೇನಲ್ಲಿ ಅದ್ಭುತವಾಗಿ ಆಡುತ್ತಾರೆ, ಕೊಹ್ಲಿ ಮಾತ್ರ 30 – 35 ಎಸೆತಗಳನ್ನು ಎದುರಿಸಿದ ಬಳಿಕ ದೊಡ್ಡ ಹೊಡೆತಗಳಿಗೆ ಮುಂದಾಗುತ್ತಾರೆ ಎಂದಿದ್ದರು. ಹೀಗೆ ಹಲವು ಹಿರಿಯ ಕ್ರಿಕೆಟಿಗರು ಟೀಕೆಗಳನ್ನು ಮಾಡಿದ್ದರು.
ಅದಕ್ಕೆಲ್ಲಾ ಈಗ ವಿರಾಟ್ ಕೊಹ್ಲಿ ಸೆಂಚೂರಿ ಉತ್ತರ ನೀಡಿದೆ. ಇತ್ತ ಸೋಶೀಯಲ್ ಮೀಡಿಯಾದಲ್ಲಿ ವಿರಾಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಮತ್ತೊಂದು ಕಡೆ ಕ್ರಿಕೆಟ್ ಪಂಡಿತರು, ಅಸಲಿ ಆಟ ಈಗ ಶುರು… ಇದಿನ್ನೂ ಆರಂಭವಷ್ಟೆ.. ಎನ್ನುತ್ತಿದ್ದಾರೆ.