Virat kohli | ಕಿಂಗ್ ಕೊಹ್ಲಿ ಬೇಟೆ ಶುರು
ಏಷ್ಯಾಕಪ್ ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ.
ಈ ಮೆಗಾ ಈವೆಂಟ್ ನಲ್ಲಿ ವಿರಾಟ್ ಕೊಹ್ಲಿ ಸತತ ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಹಾಂಗ್ ಕಾಂಗ್ ವಿರುದ್ಧ ನಡೆದ ಲೀಗ್ ಮ್ಯಾಚ್ ನಲ್ಲಿ ಹಾಫ್ ಸೆಂಚೂರಿ ಸಿಡಿಸಿದ ಕಿಂಗ್, ಪಾಕಿಸ್ತಾನ್ ವಿರುದ್ಧದ ಸೂಪರ್ 4 ರ ಮ್ಯಾಚ್ ನಲ್ಲಿ ಮತ್ತೆ ಬ್ಯಾಟ್ ಝಳಪಿಸಿದ್ರು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 60 ರನ್ ಗಳನ್ನು ಗಳಿಸಿದರು.

ವಿರಾಟ್ ಕೊಹ್ಲಿ ಇನ್ನಿಂಗ್ಸ್ ನಲ್ಲಿ ನಾಲ್ಕು ಬೌಂಡರಿ ಒಂದು ಸಿಕ್ಸರ್ ಇದೆ.
ಇನ್ನು ಈವರೆಗೂ ಈ ಮೆಗಾ ಈವೆಂಟ್ ನಲ್ಲಿ ಮೂರು ಪಂದ್ಯಗಳನ್ನಾಡಿದ ಕೊಹ್ಲಿ, 154 ರನ್ ಗಳಿಸಿದ್ದಾರೆ.
ಆ ಮೂಲಕ ಟೂರ್ನಿಯಲ್ಲಿ ಟಾಪ್ ಸ್ಕೋರರ್ ಆಗಿದ್ದಾರೆ.
ಇನ್ನು ಕಳೆದ ಕೆಲವು ದಿನಗಳಿಂದ ಫಾರ್ಮ್ ಕಳೆದುಕೊಂಡಿದ್ದ ವಿರಾಟ್ ಕೊಹ್ಲಿ ಮತ್ತೆ ಹಳೆಯ ರಿಧಮ್ ನಲ್ಲಿ ಕಾಣಿಸಿಕೊಂಡಿರುವುದರಿಂದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವಿರಾಟಿಯನ್ಸ್ ವಿವಿಧ ಮಿಮ್ ಗಳ ಮೂಲಕ ಸಂಭ್ರಮಿಸುತ್ತಿದ್ದಾರೆ. ಕಿಂಗ್ ಕೊಹ್ಲಿ ಬೇಟೆ ಶುರು ಅಂತಾ ಬರೆದುಕೊಳ್ಳುತ್ತಿದ್ದಾರೆ.