ದಾದಾ ವಿರುದ್ಧ ತಿರುಗಿ ಬಿದ್ದ ವಿರಾಟಿಯನ್ಸ್..! Virat kohli saaksha tv
ವಿರಾಟ್ ಕೊಹ್ಲಿ ಅವರನ್ನ ಏಕದಿನ ನಾಯಕತ್ವದಿಂದ ವಜಾಗೊಳಿಸಿದಕ್ಕೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಕೊಹ್ಲಿ ಅಭಿಮಾನಿಗಳು ಬುಸು ಗುಟ್ಟುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೌರವ ಗಂಗೂಲಿ ವಿರುದ್ಧ ಕೆಂಡಕಾರುತ್ತಿರುವ ವಿರಾಟಿಯನ್ಸ್, ಇದೀಗ ದಾದಾರ ಹಳೆಯ ವಿಡಿಯೋವನ್ನು ವೈರಲ್ ಮಾಡಿ ನೆಗಟಿವ್ ಪ್ರಚಾರ ಮಾಡುತ್ತಿದ್ದಾರೆ.
ಬರೋಬ್ಬರಿ ಮೂರು ವರ್ಷದ ಹಿಂದಿನದ್ದು. ಒಂದು ಬೆಂಗಾಲಿ ಚಾನಲ್ ನಲ್ಲಿ ದಾದಾ ಮಾತನಾಡುತ್ತಾ.. ಹುಡುಗಿಯರು ಕ್ರಿಕೆಟ್ ಆಡುವ ಅವಕಾಶವಿಲ್ಲ ಎಂದು ವಿವಾದಕ್ಕೆ ನಾಂದಿಯಾಡಿದ್ದರು. ನಾನು ನನ್ನ ಮಗಳಿಗೆ ಕ್ರಿಕೆಟ್ ಆಡು ಎಂದು ಹೇಳುವುದಿಲ್ಲ. ಯಾಕಂದರೇ ಹುಡುಗಿಯರು ಕ್ರಿಕೆಟ್ ಆಡುವ ಅವಶ್ಯಕತೆ ಇಲ್ಲ. ಅವರು ಕ್ರಿಕೆಟ್ ಆಡಲು ನಾಲಾಯಕ್ ಎಂದು ಸಂಚಲನ ಹೇಳಿಕೆ ನೀಢಿದ್ದರು.
ದಾದಾರ ಈ ಹೇಳಿಕೆ ಆಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಿಸಿಸಿಐ ಬಾಸ್ ಗೆ ಮಹಿಳೆಯರೆಂದರೇ ಗೌರವ ಇಲ್ಲವೆಂದು. ಅದಕ್ಕಾಗಿಯೇ ಇಷ್ಟೋಂದು ಕೆಳ ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ವಿರಾಟ್ ಅಭಿಮಾನಿಗಳು ಟ್ರೋಲ್ ಮಾಡುತಿದ್ದಾರೆ.