Virat kohli : 23 ಮಂದಿಯಲ್ಲಿ “ಕಿಂಗ್” ಕೊಹ್ಲಿ ಒಬ್ಬರೇ
ಕಿಂಗ್ ಕೊಹ್ಲಿ ಫಿಟ್ ನೆಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಇಲ್ಲ. 33ರ ಹರೆಯದಲ್ಲೂ ಸೂಪರ್ ಫಿಟ್ ಆಗಿರುವ ಕೊಹ್ಲಿ ಗಾಯಗೊಂಡಿರುವುದು ತೀರಾ ಕಡಿಮೆ.
ಅವರಿಗೆ ಅವಶ್ಯಕತೆ ಇದ್ದಾಗ ಮಾತ್ರ ಕೊಹ್ಲಿ ತಂಡದಿಂದ ದೂರವಾಗಿ ವಿಶ್ರಾಂತಿ ಪಡೆಯುತ್ತಾರೆ.
ಆದ್ರೆ ಗಾಯಗೊಂಡು ಅಥವಾ ಫಾರ್ಮ್ ಫಿಟ್ ನೆಸ್ ಸಮಸ್ಯೆಯಿಂದಾಗಿ ಈವರೆಗೂ ಅವರು ತಂಡದಿಂದ ದೂರವಾಗಿಲ್ಲ.
ಅಚ್ಚರಿ ಸಂಗತಿ ಏನಂದರೇ ಭಾರತ ತಂಡದಲ್ಲಿನ ವಾರ್ಷಿಕ ಕಾಂಟ್ರಾಕ್ಟ್ ನಲ್ಲಿರುವ 23 ಮಂದಿ ಆಟಗಾರರು 2021 – 22 ಸೀಸನ್ ನಲ್ಲಿ ವಿವಿಧ ರೀತಿಯ ಗಾಯಗಳ ಕಾರಣದಿಂದಾಗಿ ಎನ್ ಸಿಎ ಅಕಾಡಮಿಯಲ್ಲಿ ಚಿಕತ್ಸೆ ಪಡೆದಿದ್ದಾರೆ. ಈ ಲೀಸ್ಟ್ ನಲ್ಲಿ ವಿರಾಟ್ ಕೊಹ್ಲಿ ಹೆಸರು ಇಲ್ಲವೇ ಇಲ್ಲ.

ಇದನ್ನ ಗಮನದಲ್ಲಿಟ್ಟುಕೊಂಡು ನೋಡಿದ್ರೆ ಗೊತ್ತಾಗುತ್ತದೆ ಕೊಹ್ಲಿ ಫಿಟ್ ನೆಸ್ ಗೆ ಎಷ್ಟು ಪ್ರಾಧಾನ್ಯತೆ ಕೊಡುತ್ತಾರೆ ಅನ್ನೋದು.
ಈವರ್ಷ ಒಟ್ಟು 70 ಮಂದಿ ಆಟಗಾರರಿಗೆ ಎನ್ ಸಿಎ ಅಕಾಡೆಮಿಯಲ್ಲಿ ವೈದ್ಯರು ಚಿಕಿತ್ಸೆ ನೀಡಿದ್ದಾರೆ.
70 ಮಂದಿ ಪೈಕಿ 23 ಮಂದಿ ಸಿನಿಯರ್ ಇಂಡಿಯಾ ಪ್ಲೇಯರ್ ಗಳಾಗಿದ್ದರು, 25 ಮಂದಿ ಭಾರತ ಎ ಟೀಂ ಕ್ರಿಕೆಟರ್ಸ್, ಒಬ್ಬರು ಅಂಡರ್ 19 ಕ್ರಿಕೆಟರ್, ಏಳು ಮಂದಿ ಸಿನಿಯರ್ ಮಹಿಳಾ ಕ್ರಿಕೆಟರ್ಸ್, 14 ಮಂದಿ ದೇಶಿ ಕ್ರಿಕೆಟರ್ಸ್ ಇದ್ದಾರೆ.
ಇದನ್ನೂ ಓದಿ :https://saakshatv.com/t20-world-cup-20…w-teams-schedule/