Virat Kohli | “ಶತಕ”ವಿಲ್ಲದೇ “ನೂರು ಪಂದ್ಯ”ಗಳನ್ನಾಡಿದ ವಿರಾಟ್
ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿನಿರೀಕ್ಷಿತ ಮಟ್ಟದ ಪ್ರದರ್ಶನ ನೀಡುತ್ತಿಲ್ಲ.
ಕಳೆದ ಋತುವಿನಲ್ಲಿ ಆರ್ಸಿಬಿ ನಾಯಕತ್ವಕ್ಕೆ ವಿದಾಯ ಹೇಳಿದ್ದ ಕೊಹ್ಲಿ, ಹಿರಿಯ ಬ್ಯಾಟರ್ ಗಾಗಿ ತಂಡದಲ್ಲಿರುವುದಾಗಿ ತಿಳಿಸಿದರು.
ಹೀಗಾಗಿ ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ ಬ್ಯಾಟಿಂಗ್ ನಲ್ಲಿ ಅಬ್ಬರಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಆದ್ರೆ ವಿರಾಟ್ ಕೊಹ್ಲಿ ಆ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಈ ಆವೃತ್ತಿಯಲ್ಲಿ 7 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ, 119 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 48.
ಈ ಪಂದ್ಯದಲ್ಲಿ ಗೋಲ್ಡನ್ ಡಕ್ ಔಟ್ ಆಗುವ ಮೂಲಕ ಕೊಹ್ಲಿ ಒಂದು ಕೆಟ್ಟ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಒಂದು ಕಾಲದಲ್ಲಿ ಸೆಂಚೂರಿಗಳ ಕೊಹ್ಲಿಯಾಗಿದ್ದ ಈ ರನ್ ಮಿಷನ್.. ಸತತವಾಗಿ ನೂರು ಪಂದ್ಯಗಳಲ್ಲಿ ಆಡಿದ್ದು, ಶತಕ ಸಿಡಿಸಿಲ್ಲ.
2019ರಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಅಂದಿನಿಂದ ಸೆಂಚೂರಿ ಸಿಡಿಸಿಲ್ಲ.
17 ಟೆಸ್ಟ್, 21 ಏಕದಿನ, 25 ಅಂತರಾಷ್ಟ್ರೀಯ ಟಿ20 ಹಾಗೂ 37 ಐಪಿಎಲ್ ಪಂದ್ಯಗಳನ್ನು ಆಡಿರುವ ಕೊಹ್ಲಿ, ಒಟ್ಟು 100 ಪಂದ್ಯಗಳಲ್ಲಿ ಒಂದೇ ಒಂದು ಶತಕ ಗಳಿಸಲು ವಿಫಲರಾಗಿದ್ದಾರೆ.
Virat-kohli-has-played-100-matches-without-century