ಶಿಖರ್ ಧವನ್ ಬ್ಯಾಟಿಂಗ್ ಶೈಲಿಯನ್ನು ಮಿಮಿಕ್ರಿ ಮಾಡಿದ ವಿರಾಟ್
ಟಿ-ಟ್ವೆಂಟಿ ವಿಶ್ವಕಪ್ ಗೆ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಗೆದ್ರೂ ಟೀಮ್ ಇಂಡಿಯಾ ಕಲಿಯಬೇಕಾದ ಪಾಠ ಸಾಕಷ್ಟಿದೆ. ಹೀಗಾಗಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಸಾಮಥ್ರ್ಯ ಟೀಮ್ ಇಂಡಿಯಾ ಆಟಗಾರರಿಗಿದೆ.
ಅದೇನೇ ಇರಲಿ, ವಿರಾಟ್ ಬ್ಯಾಟಿಂಗ್ ಫಾರ್ಮ್ ಅಂದುಕೊಂಡಂತೆ ಇಲ್ಲ. ಆದ್ರೂ ಕೂಲ್ ಆಗಿಯೇ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆಟದಷ್ಟೇ ತನ್ನ ಸಾಮಾಜಿಕ ಜಾಲ ತಾಣದಲ್ಲೂ ಆಕ್ಟೀವ್ ಆಗಿರುತ್ತಾರೆ. ಮೊನ್ನೆ ತಾನೇ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಆಟಗಾರ ಶಿಖರ್ ಧವನ್ ಅವರ ಬ್ಯಾಟಿಂಗ್ ಶೈಲಿಯನ್ನು ಮಿಮಿಕ್ರಿ ಮಾಡಿದ್ದಾರೆ. ಶಿಖರ್ ಧವನ್ ಅವರ ಹಾವ ಭಾವಗಳನ್ನು ಮಿಮಿಕ್ರಿ ಮಾಡಿರುವ ವಿಡಿಯೋವೊಂದನ್ನು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸಾಮಾಜಿಕ ತಾಣದಲ್ಲಿ ಸಾಕಷ್ಟು ವೈರಲ್ ಕೂಡ ಆಗಿದೆ.
ಶಿಖರ್ ಧವನ್ ಅವರನ್ನು ಗಬ್ಬರ್ ಸಿಂಗ್ ಅಂತನೂ ಕರೆಯಲಾಗುತ್ತಿದೆ. ಅಲ್ಲದೆ ಅನೇಕ ಬಾರಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಜೊತೆಯಾಗಿಯೇ ಬ್ಯಾಟಿಂಗ್ ಮಾಡಿದ್ದಾರೆ. ಶಿಖರ್ ಧವನ್ ಅವರನ್ನು ತುಂಬಾ ಹತ್ತಿರದಿಂದ ನೋಡಿರುವ ವಿರಾಟ್ ಕೊಹ್ಲಿ ಅವರಂತೆ ಮಿಮಿಕ್ರಿ ಮಾಡೋದು ಕಷ್ಟವೇನೂ ಆಗಿಲ್ಲ. ಅದಕ್ಕಾಗಿಯೇ ವಿರಾಟ್ ಕೊಹ್ಲಿ, ಶಿಖಿ ಈ ವಿಡಿಯೋ ಹೇಗಿದೆ ಅಂತನೂ ವಿರಾಟ್ ಧವನ್ ಬಳಿ ಪ್ರಶ್ನೆ ಕೂಡ ಮಾಡಿದ್ದಾರೆ.
ಟೀಮ್ ಇಂಡಿಯಾದಲ್ಲಿ ಮಾತ್ರವಲ್ಲದೇ ಡೆಲ್ಲಿ ತಂಡದ ಪರವಾಗಿಯೂ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಜೊತೆಯಾಗಿಯೇ ಆಡಿದ್ದಾರೆ.